ಬೆಂಗಳೂರು : ಕೋವಿಡ್ ವಿಚಾರದಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಸಮರ ಸಾರಿದ್ದಾರೆ. ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಲು ಕೆಪಿಸಿಸಿ ಸ್ಪೀಕ್ ಆಫ್ ಕರ್ನಾಟಕ ಎಂಬ ಚಳುವಳಿ ಆರಂಭಿಸಲು ಮುಂದಾಗಿದೆ.
ಸಿಎಂ ತವರಲ್ಲಿ ಹುಲಿಯಾ ಘರ್ಜನೆ
ಸ್ಪೀಕ್ ಆಫ್ ಕರ್ನಾಟಕ ಚಳುವಳಿಯ ಭಾಗವಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಟಿ ನಡೆಸಿ ಸರ್ಕಾರದ ವಿರುದ್ಧ ಅಬ್ಬರಿಸಲಿದ್ದಾರೆ. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶಿವಮೊಗ್ಗ ಮತ್ತು ಮಂಡ್ಯದ ಜವಾಬ್ದಾರಿ ನೀಡಿದೆ. ಸಿದ್ದರಾಮಯ್ಯ ಅವರು ಈ ಎರಡು ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವೈಫಲ್ಯ, ಭ್ರಷ್ಟಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದ್ದಾರೆ.
ಇನ್ನುಳಿದಂತೆ ಯಾವ ನಾಯಕರಿಗೆ ಯಾವ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ ಎಂದು ನೋಡೋದಾದ್ರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಲಬುರಗಿ, ದಕ್ಷಿಣ ಕನ್ನಡ. ಮಲ್ಲಿಕಾರ್ಜುನ್ ಖರ್ಗೆ ಮೈಸೂರು, ಮೈಸೂರು ಗ್ರಾಮಾಂತರ. ಜಿ. ಪರಮೇಶ್ವರ್ ಕೋಲಾರ. ರಾಮಲಿಂಗಾರೆಡ್ಡಿ, ಬಳ್ಳಾರಿ ನಗರ, ಗ್ರಾಮಾಂತರ. ಎಂ.ಬಿ.ಪಾಟೀಲ್ ಹಾವೇರಿ. ಡಿ.ಕೆ.ಸುರೇಶ್ ಹಾಸನ. ಆರ್.ವಿ.ದೇಶಪಾಂಡೆ ಹುಬ್ಬಳ್ಳಿ, ಧಾರವಾಡ. ಕೆ.ಹೆಚ್.ಮುನಿಯಪ್ಪ ದಾವಣಗೆರೆ.
ಹೆಚ್.ಕೆ.ಪಾಟೀಲ್ ವಿಜಯಪುರ. ಕೆ.ಜೆ.ಜಾರ್ಜ್ ಚಿಕ್ಕಮಗಳೂರು. ಶರಣಪ್ರಕಾಶ್ ಪಾಟೀಲ್ ಬೀದರ್. ವೀರಪ್ಪ ಮೊಯ್ಲಿ ತುಮಕೂರು. ದಿನೇಶ್ ಗುಂಡೂರಾವ್ ಉಡುಪಿ. ಕೆ.ಆರ್. ರಮೇಶ್ ಕುಮಾರ್ ಬೆಳಗಾವಿ ನಗರ, ಗ್ರಾಮೀಣ. ಟಿ.ಬಿ.ಜಯಚಂದ್ರ ಚಿಕ್ಕಬಳ್ಳಾಪುರ. ಈ ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರು ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.








