ಬಿಐಎಸ್-ಕೇರ್ ಅಪ್ಲಿಕೇಶನ್: ಏನಿದ್ರ ವಿಶೇಷ ?
ಕೇಂದ್ರ ಸರ್ಕಾರವು ಐಎಸ್ಐನ ಗುಣಮಟ್ಟ ಮತ್ತು ಯಾವುದೇ ಉತ್ಪನ್ನದ ವಿಶಿಷ್ಟ ಲಕ್ಷಣಗಳನ್ನು ಪರಿಶೀಲಿಸಲು ಹೊಸ ಬಿಐಎಸ್-ಕೇರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ಅನ್ನು ಸಚಿವ ರಾಮ್ ವಿಲಾಸ್ ಪಾಸ್ವಾನ್ ಪರಿಚಯಿಸಿದ್ದಾರೆ. ಬಿಐಎಸ್ ಭಾರತದಲ್ಲಿ ರಾಷ್ಟ್ರೀಯ ಗುಣಮಟ್ಟವನ್ನು ನಿಗದಿಪಡಿಸುವ ಸಂಸ್ಥೆಯಾಗಿದೆ. ಇದರ ಜೊತೆಗೆ, ಪಾಸ್ವಾನ್ ಪ್ರಮಾಣೀಕರಣ, ಅನುಸರಣೆ ಮೌಲ್ಯಮಾಪನ ಮತ್ತು ತರಬೇತಿಯ ಕುರಿತು ಮೂರು ಹೊಸ ಬಿಐಎಸ್ ಪೋರ್ಟಲ್‌ಗಳನ್ನು ಪರಿಚಯಿಸಿದ್ದಾರೆ.
ಬಿಐಎಸ್-ಕೇರ್ ಅಪ್ಲಿಕೇಶನ್: ಏನಿದ್ರ ವಿಶೇಷ ?
ಹೊಸ ಬಿಐಎಸ್-ಕೇರ್ ಅಪ್ಲಿಕೇಶನ್ ಐಎಸ್ಐ ಮತ್ತು ಹಾಲ್ಮಾರ್ಕ್ ಗುಣಮಟ್ಟ-ಪ್ರಮಾಣೀಕರಿಸಿದ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಲು ಮತ್ತು ತಿಳಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
ಉತ್ಪನ್ನಗಳ ಸತ್ಯಾಸತ್ಯತೆಯ ಬಗ್ಗೆ ಬಳಕೆದಾರರಿಗೆ ಅರಿವು ಮೂಡಿಸಲು ಮತ್ತು ಅಧಿಕೃತವಲ್ಲದ ಉತ್ಪನ್ನಗಳ ಬಗ್ಗೆ ದೂರುಗಳನ್ನು ಸಲ್ಲಿಸಲು ಇದು ಅನುಮತಿಸುತ್ತದೆ. ಅಪ್ಲಿಕೇಶನ್ ಸುಲಭವಾಗಿ ಬಳಸಲು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಿದೆ. ಈ ಅಪ್ಲಿಕೇಶನ್‌ನೊಂದಿಗೆ, ಬಳಕೆದಾರರು ಸಂಪೂರ್ಣ ದೂರು ನಿರ್ವಹಣಾ ವ್ಯವಸ್ಥೆಯನ್ನು ಪ್ರವೇಶಿಸಿ ದೂರುಗಳನ್ನು ಸಲ್ಲಿಸಬಹುದು.
ಬಿಐಎಸ್ ವೆಬ್‌ಸೈಟ್‌ನಂತೆಯೇ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದರ ಜೊತೆಗೆ, ಮಾನದಂಡಗಳ ಅನುಷ್ಠಾನವನ್ನು ಮತ್ತಷ್ಟು ಜಾರಿಗೊಳಿಸಲು ಸರ್ಕಾರವು ಎಲೆಕ್ಟ್ರಾನಿಕ್-ಬಿಐಎಸ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಹೆಚ್ಚುವರಿಯಾಗಿ, ಗ್ರಾಹಕ ಗುಂಪುಗಳ ಆನ್’ಲೈನ್ ನೋಂದಣಿ, ಅನುಮೋದನೆಗಳ ಸಲ್ಲಿಕೆ ಯನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು.
ಬಿಐಎಸ್-ಕೇರ್ ಅಪ್ಲಿಕೇಶನ್: ಡೌನ್‌ಲೋಡ್ ಮಾಡುವುದು ಮತ್ತು ಬಳಸುವುದು ಹೇಗೆ?
ಬಿಐಎಸ್-ಕೇರ್ ಅಪ್ಲಿಕೇಶನ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಮತ್ತು ಐಒಎಸ್ ಬಳಕೆದಾರರಿಗೆ ಅದರ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ ಮತ್ತು ಈಗಾಗಲೇ 10,000 ಕ್ಕೂ ಹೆಚ್ಚು ಡೌನ್‌ಲೋಡ್‌ಗಳನ್ನು ಹೊಂದಿದೆ.
ಡೌನ್‌ಲೋಡ್ ಮಾಡುವ ರೀತಿ
ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ
ಅಲ್ಲಿ ಬಿಐಎಸ್-ಕೇರ್ ಅಪ್ಲಿಕೇಶನ್‌ಗಾಗಿ ಹುಡುಕಿ
ಹುಡುಕಾಟದ ಫಲಿತಾಂಶ ಕಾಣಿಸಿಕೊಂಡಾಗ, ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಅದನ್ನು ನಿಮ್ಮ ಸಾಧನದಲ್ಲಿ ಪಡೆಯಲು ಇನ್-ಸ್ಟಾಲ್ ಆಯ್ಕೆಯನ್ನು ಆರಿಸಿ.
ಬಿಐಎಸ್-ಕೇರ್ ಅಪ್ಲಿಕೇಶನ್ ಬಳಸುವುದು ತುಂಬಾ ಸರಳವಾಗಿದ್ದು, ಒಂದು ಬಾರಿ ನೋಂದಣಿಗಾಗಿ ನೀವು ಕೆಳಗೆ ಕೊಟ್ಟ ಹಂತಗಳನ್ನು ಅನುಸರಿಸಬೇಕು:
ಡೌನ್‌ಲೋಡ್ ಮಾಡಿದ ನಂತರ, ಬಿಐಎಸ್-ಕೇರ್ ಅಪ್ಲಿಕೇಶನ್ ತೆರೆಯಿರಿ
ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ
ಒಟಿಪಿ ಮೂಲಕ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಪರಿಶೀಲಿಸಿ
ನಂತರ ನೀವು ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸಲು ಪ್ರಾರಂಭಿಸಬಹುದು ಮತ್ತು ಉತ್ಪನ್ನಗಳ ಗುಣಮಟ್ಟ, ಐಎಸ್‌ಐ ಮಾರ್ಕ್‌ನ ದುರುಪಯೋಗ, ಹಾಲ್‌ಮಾರ್ಕ್ ನೋಂದಣಿ ಐಡೆಂಟಿಟಿ, ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಬಿಐಎಸ್‌ಗೆ ಸಂಬಂಧಿಸಿದ ಇತರ ಸಮಸ್ಯೆಗಳು ಮುಂತಾದ ವಿಷಯಗಳ ಬಗ್ಗೆ ದೂರುಗಳನ್ನು ಸಲ್ಲಿಸಬಹುದು.








