ಜಿಟಿ ದೇವೇಗೌಡ ಬಿಜೆಪಿಗೆ ಸೇರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಜಿಟಿ ದೇವೇಗೌಡರು ತುಂಬಾ ಸ್ವತಂತ್ರವಾಗಿ, ನೆಮ್ಮದಿಯಾಗಿ ನಿರ್ಧಾರ ತೆಗೆದುಕೊಳ್ಳೋಕೆ ಸಮರ್ಥರಾಗಿದ್ದಾರೆ. ಜಿಟಿಡಿ ಬಿಜೆಪಿಗೆ ಬರಲು ಮನಸ್ಸು ಮಾಡಿದ್ದಾರೆ ಎಂದಾದರೆ ಯಾವಾಗ ಬೇಕಾದರೂ ಬಿಜೆಪಿಗೆ ಬರಬಹುದು ಎಂದು ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಯಾವ ಪಕ್ಷದವರು ಬೇಕಾದ್ರು ನಮ್ಮ ಸಿದ್ಧಾಂತ, ಅಭಿವೃದ್ಧಿ ಕೆಲಸ ಒಪ್ಪಿ ಬಿಜೆಪಿ ಪಕ್ಷಕ್ಕೆ ಬರಬಹುದು. ಬರೋರಿಗೆ ಸ್ವಾಗತ ಇದೆ. ಅವರನ್ನ ಸೇರ್ಪಡೆ ಮಾಡಿಕೊಳ್ಳೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.
ಇನ್ನು, ರಾಜ್ಯ ರಾಜಕೀಯದಲ್ಲಿ ಧ್ರುವೀಕರಣ ಆಗ್ತಿರೋದು ಕಾಣ್ತಿದೆ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಹಾಗೂ ಬಿಜೆಪಿ ಸರ್ಕಾರ ಮೂರು ವರ್ಷ ಇರಬೇಕು ಅಂತ ವಿಪಕ್ಷದವರೇ ಹೇಳ್ತಿದ್ದಾರೆ. ಹಾಗಾಗಿ ನಮಗೆ ಅವರ ಸಪೋರ್ಟ್ ಇದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.








