ರಫೇಲ್ ಎಂದ ತಕ್ಷಣವೇ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಥಟ್ ಅಂತ ನೆನಪಾಗುತ್ತಾರೆ. ಯಾಕೆಂದ್ರೆ 2016ರಲ್ಲಿ ಫ್ರಾನ್ಸ್ ಜೊತೆಗೆ ಭಾಎರತದ ಕೇಂದ್ರ ಸರ್ಕಾರ ರಫೇಲ್ ಖರೀದಿ ಒಪ್ಪಂದ ಮಾಡಿಕೊಮಡಾಗಿನಿಂದಲೂ ರಾಹುಲ್ ಗಾಂಧಿ ಅವರು ಮೋದಿ ನೇತೃತ್ವದ ಸರ್ಕಾರದ ವಿರುದ್ಧ ರಫೇಲ್ ಖರೀದಿ ಹಗರಣದ ಆರೋಪಗಳನ್ನು ಮಾಡುತ್ತಲೇ ಬಂದರು. ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಲೋಕಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದರು. ಆದರೆ ಸರ್ಕಾರ ರಾಹುಲ್ ಗಾಂಧಿ ಮಾಡಿದ್ದ ಆರೋಪಗಳನ್ನು ಅಲ್ಲೆಗಳೆಯುತ್ತಲೇ ಬಂದಿತ್ತು. ಇದಾದ ಬಳಿಕ ತಮ್ಮ ಆರೋಪಗಳಿಂದ ರಾಹುಲ್ ಗಾಂಧಿ ಕೆಲ ಕಾಲ ವಿರಾಮ ಪಡೆದುಕೊಂಡಿದ್ದರು. ಇದೀಗ ನಿನ್ನೆಯಷ್ಟೇ ಮೊದಲ ಹಂತದ 5 ರಫೇಲ್ ಫೈಟರ್ ಜೆಟ್‍ಗಳು ಭಾರತದ ನೆಲ ಪ್ರವೇಶಿಸಿವೆ. ಇದಾದ ಬಳಿಕ ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ. ಭಾರತೀಯ ವಾಯುಪಡೆಗೆ ರಾಫೆಲ್ ಯುದ್ಧ ವಿಮಾನ ಸೇರಿಸಿದ್ದಕ್ಕೆ ಅಭಿನಂದನೆಗಳು. ಈ ಮಧ್ಯೆ ಕೇಂದ್ರ ಸರ್ಕಾರ ನನ್ನ ಪ್ರಶ್ನೆಗಳಿಗೆ ಉತ್ತರಿಸಬಹುದೇ ಎಂದು ತಮ್ಮ ಪ್ರಶ್ನೆಗಳನ್ನು ಶುಮಾಡಿರುವ ರಾಹುಲ್ ಗಾಂಧಿ ಪ್ರತಿ ರಾಫೆಲ್ ಯುದ್ಧ ವಿಮಾನಕ್ಕೆ 526 ಕೋಟಿ ರೂಪಾಯಿಗಳ ಬದಲು 1670 ಕೋಟಿ ರೂಪಾಯಿಗಳು ಏಕಾಗುತ್ತದೆ?, 126 ರಾಫೆಲ್ ಯುದ್ಧ ವಿಮಾನ ಖರೀದಿಸುವ ಬದಲು ಸರ್ಕಾರ ಏಕೆ 36 ಯುದ್ಧ ವಿಮಾನಗಳನ್ನು ಖರೀದಿಸುತ್ತಿದೆ ಹಾಗೂ ಹೆಚ್ ಎಎಲ್ ಬದಲಿಗೆ ಬ್ಯಾಂಕಿಗೆ ದಿವಾಳಿ ಎಸಗಿದ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿಗಳ ಗುತ್ತಿಗೆ ಏಕೆ ನೀಡಲಾಗಿದೆ ಎಂದು ಕೇಳಿದ್ದಾರೆ. ಸುಪ್ರೀಂ ಕೋರ್ಟ್ ಈಗಾಗಲೇ ರಫೇಲ್ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದೆ. ಆದರೂ ಸಹ ಕಾಂಗ್ರೆಸ್ ಈ ವಿಚಾರವಾಗಿ ಕೇಂದ್ರದ ವಿರುದ್ಧ ಆರೋಪ ಮಾಡುತತಲೇ ಬಂದಿದ್ದು, ಇದೀಗ ರಾಹುಲ್ ಗಾಂಧಿ ಮತ್ತೆ ಕೇಂದ್ರದ ಮುಂದೆ 3 ಪ್ರಶ್ನೆಗಳನ್ನ ಇಟ್ಟಿದ್ದು, ಉತ್ತರಿಸುವಂತೆ ಒತ್ತಾಯ ಹೇರಿದ್ದಾರೆ.
ಭಾವಿ ಸಿಎಂ ಎಂಬ ಹಣೆಪಟ್ಟಿ ನನಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ -ನನಗೆ ಪಟ್ಟ ಬೇಡ ಜನರ ಪ್ರೀತಿ ಬೇಕು: ಭಾವಿ ಸಿಎಂ ಎಂಬ ಕೂಗಿಗೆ ಚಿತ್ರದುರ್ಗದಲ್ಲಿ ವಿಜಯೇಂದ್ರ ಖಡಕ್ ಪ್ರತಿಕ್ರಿಯೆ
ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆಗಳು ಸದಾ ಸುದ್ದಿಯಲ್ಲಿರುತ್ತವೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನೀಡಿರುವ ಒಂದು ಹೇಳಿಕೆ...








