ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ದಿನೇ ದಿನೇ ಹೊಸ ಟ್ವಿಸ್ಟ್ ಸಿಗುತ್ತಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ಸುಶಾಂತ್ ರ ತಂದೆ ಕೆಕೆ ಸಿಂಗ್ ಅವರು ಸುಶಾಂತ್ ಪ್ರೇಯಸಿ ರೆಹಾ ಚಕ್ರಬೊರ್ತಿ , ಆಕೆಯ ಕುಟುಂಬದವರೂ ಸೇರಿ 6 ಜನರ ವಿರುದ್ಧ, ಮೋಸ, ಕಳ್ಳತನ ಹಾಗೂ ಮಾನಸಿಕ ಹಿಂಸೆ ನೀಡಿರುವುದಾಗಿ ಪಟ್ನಾದಲ್ಲಿ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ರೆಹಾ ತಮ್ಮ ವಕೀಲರನ್ನು ಭೇಟಿ ಮಾಡಿ ಪಾಟ್ನಾದಿಂದ ಪ್ರಕರಣವನ್ನು ಮುಂಬೈಗೆ ವರ್ಗಾವಣೆ ಮಾಡುವಂತೆ ಕೋರಿ ಸುಪ್ರಿಂಗೆ ಅರ್ಜಿ ಸಲ್ಲಿಸಿದ್ದರು.
ಆದ್ರೆ ಪ್ರಕರಣದ ಮತ್ತೊಂದು ಟ್ವಿಸ್ಟ್ ಎಂದರೆ ತಮ್ಮ ವಿರುದ್ಧ ಎಫ್ ಐಆರ್ ದಾಖಲಾಗ್ತಿದ್ದಂತೆ ಟ್ವಿಟ್ಟರ್ ನಲ್ಲಿ ರೆಹಾ ಬಂಧನಕ್ಕೆ ಟ್ರೆಂಡ್ ಶುರುವಾಗಿ ಬಿಟ್ಟಿದೆ. ಆದ್ರೆ ಅದಕ್ಕೂ ಮೀರಿದ ವಿಚಾರವೆಂದರೇ, ದೂರು ದಾಖಲಾಗಿದ್ದೇ ತಡ ರೆಹಾ ತನ್ನ ಮುಂಬೈ ನಿವಾಸದಿಂದ ಕಾಣೆಯಾಗಿದ್ದಾರೆಂಬ ಸುದ್ದಿ ಹರಿದಾಡ್ತಿದೆ. ಹೌದು ಬಿಹಾರ ಪೊಲೀಸರ ತಂಡ ರೆಹಾ ಅವರನ್ನು ವಿಚಾರಣೆ ಮಾಡಲು ಬಂದ ಸಮಯದಲ್ಲಿ ರೆಹಾ ಮನೆಯಲ್ಲಿ ಇಲ್ಲದೇ ಇರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಮುಂಬೈ ಪೊಲೀಸ್ ತಂಡವೂ ಸಹ ರೆಹಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ರೆಹಾ ವಕೀಲರನ್ನು ಭೇಟಿಯಾಗಿ ಗಂಟೆಗಟ್ಟಲೆ ಮಾತನಾಡಿದ್ದು, ಮಧ್ಯಂತರ ಜಾಮೀನಿಗೂ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸುಶಾಂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ರೆಹಾ ನಾಪತ್ತೆಯಾಗಿರುವುದು ನೆಟ್ಟಿಗರಲ್ಲಿ ಅವರ ವಿರುದ್ಧದ ಅನುಮಾನವನ್ನು ಗಟ್ಟಿಗೊಳಿಸುವಂತಾಗಿದೆ.








