ದೇಶಾದ್ಯಂತ ಭಾರೀ ಸದ್ದು ಮಾಡ್ತಿರುವ ವಿಚಾರ ಅಂದ್ರೆ ಸದ್ಯಕ್ಕೆ ಅದು ಸುಶಾಂತ್ ಆತ್ಮಹತ್ಯೆ ಪ್ರಕರಣ. ಸುಶಾಂತ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಚರ್ಚೆಗಳು ವ್ಯಾಪಕವಾಗಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಲ್ಲಿ ನೆಪೋಟಿಸಮ್, ಸ್ವಜನಪಕ್ಷಪಾತ ಆರೋಪಗಳು ತಾರಕ್ಕೇರಿದೆ. ದಿನೇ ದಿನೇ ಈ ಪ್ರಕರಣ ಹೊಸ ತಿರುವು ಪಡೆದುಕೊಳ್ತಿದ್ದು, ಸುಶಾಂತ್ ಪ್ರೇಯಸಿ ರೆಹಾ ವಿರುದ್ಧ ಕೆಕೆ ಸಿಂಗ್ ದೂರು ದಾಖಲಿಸಿದ್ದು, ಇದೀಗ ಮುಂಬೈ ನಿವಾಸದಿಂದ ರೆಹಾ ಎಸ್ಕೇಪ್ ಆಗಿದ್ದಾರೆಂಬ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಇದು ಆತ್ಮಹತ್ಯೆಯಲ್ಲ, ಕೊಲೆ ಈ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕೆಂದು ಈ ಹಿಂದೆ ಟ್ವೀಟ್ ಮೂಲಕ ಆಗ್ರಹಿಸಿದ್ರು. ಇದೀಗ ಮತ್ತೊಮ್ಮೆ ವಿಚಾರವಾಗಿ ಮಾತನಾಡಿರುವ ಸುಬ್ರಮಣಿಯನ್ ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುವ ಮೂಲಕ ಮತ್ತೆ ತಮ್ಮ ವಾದಕ್ಕೆ ಕಟಿಬದ್ಧರಾಗಿ ನಿಂತಿದ್ದಾರೆ.
ಟ್ವೀಟ್ ಮಾಡಿರುವ ಸುಬ್ರಮಣಿಯನ್ ಕೊಲೆ ಎಂಬ ತಮ್ಮ ನಿಲುವಿಗೆ ಹಲವು ಕಾರಣಗಳನ್ನೂ ನೀಡಿದ್ದಾರೆ. ಈ ಬಗ್ಗೆ 26 ಅಂಶಗಳಿರುವ ಪೋಟೋ ಹಾಕಿದ್ದಾರೆ. ಸುಶಾಂತ್ ಕತ್ತಿನ ಕಲೆ ಹತ್ಯೆ ಮಾಡಿದ್ದ ಗುರುತಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಆತನ ದೇಹದ ಮೇಲೆ ಥಳಿಸಿರುವ ಗುರುತುಗಳಿಗೆ ಎಂದು ಹೇಳಿದ್ದಾರೆ, ಇದರ ಜೊತೆಗೆ ಇನ್ನು 26 ಅಂಶಗಳನ್ನು ಟ್ವಿಟ್ಟರ್ ನಲ್ಲಿ ಬರೆದು ಕೊಂಡು ಇದಕ್ಕಾಗಿಯೇ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆ ಅಲ್ಲ, ಸಾವು ಎಂದು ಅಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಈ ಸಂಬಂಧ ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆ ಮಾತನಾಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.