ದ. ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ವೆಬ್ ಸೀರೀಸ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳು ಇಷ್ಟು ದಿನ ಹರಿದಾಡ್ತಿತ್ತು. ಆದರೀಗ ವೆಬ್ ಸೀರೀಸ್ ನ ಆಫರ್ ಅನ್ನು ಸ್ಟೀಟಿ ತಿರಸ್ಕರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಬಾಲಿವುಡ್ ಅಲ್ದೇ ದಕ್ಷಿಣ ಭಾರತದ ನಟ ನಟಿಯರೆಲ್ಲರೂ ಡಿಜೆಟಲ್ ಮೀಡಿಯಾದತ್ತ ಹೆಚ್ಚು ಒಲವು ತೋರುತ್ತಿದ್ದು, ದೊಡ್ಡ ದೊಡ್ಡ ಸ್ಟಾರ್ ಗಳು ವೆಬ್ ಸೀರೀಸ್ ನಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಸಮಂತಾ, ಕಾಜಲ್, ಶ್ರುತಿ ಹಾಸನ್, ಪ್ರಕಾಶ ರೈ, ಸೂರ್ಯ ಸಹ ಇದಕ್ಕೆ ಹೊರತಾಗಿಲ್ಲ. ಆದ್ರೆ ಅನುಷ್ಕಾ ಶೆಟ್ಟಿ ವೆಬ್ ಸೀರೀಸ್ ನಲ್ಲಿ ನಟಿಸಲು ತಿರಸ್ಕರಿಸಿದ್ದಾರೆ. ಆದ್ರೆ ಅವರ ಈ ನಿರ್ಧಾರಕ್ಕೆ ಕಾರಣವೇನೆಂಬುದು ಇನ್ನೂ ಸಹ ಬಹಿರಂಗವಾಗಿಲ್ಲ.
ಸದ್ಯ ಖ್ಯಾತ ನಟ ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿಶಬ್ದಂ ಸಿನಿಮಾದ ದಲ್ಲಿ ಅನುಷ್ಕಾ ಸಕ್ರೀನ್ ಶೇರ್ ಮಾಡಿಕೊಂಡಿದ್ದು, ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಊಹಾಪೋಹಗಳಿದ್ದವು. ಆದ್ರೆ ಚಿತ್ರತಂಡ ವದಂತಿಗಳಿಗೆ ತೆರ ಎಳೆದಿದ್ದು, ಚಿತ್ರಮಂದಿರದಲ್ಲೇ ಸಿನೆಮಾ ರಿಲೀಸ್ ಮಾಡುವುದಾಗಿ ಸ್ಪಷ್ಟನೆ ನೀಡಿದೆ.
ಮೊಹಮ್ಮದ್ ಸಿರಾಜ್ ಸೆಂಚುರಿ Test ವಿಕೆಟ್ But ನೆನಪು ಕಹಿಯಾಗಿದೆ
ಮೋಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್ ಪಡೆದು ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು...