ADVERTISEMENT
Friday, September 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗೆಜ್ಜೆ ಗಿರಿಯಲ್ಲಿ ಕೋಟಿ ಚೆನ್ನಯರ ಹೆಜ್ಜೆ ಗುರುತು

admin by admin
March 1, 2020
in Newsbeat, Samagra karnataka
Share on FacebookShare on TwitterShare on WhatsappShare on Telegram

‘ಸತ್ಯೊಡು ಬತ್ತಿನಕ್ಲೆಗ್‌ ತಿಗಲೆಡ್‌ ಸಾದಿ ತೋಜಾವ, ಅನ್ಯಾಯೊಡು ಬತ್ತಿನಕ್ಲೆಗ್‌ ಸುರಿಯೊಡು ಸಾದಿ ತೋಜಾವ’ ಎಂಬ ಅಮರ ವಾಕ್ಯವನ್ನು ಸಾವಿರಾರು ವರ್ಷಗಳ ಹಿಂದೆ ಸಾರಿದ ತುಳುನಾಡಿನ ವೀರಪುರುಷರಾದ ಕೋಟಿಚೆನ್ನಯರು ಆಟವಾಡಿ ಬೆಳೆದ ಮೂಲ ಸ್ಥಾನ ಪುತ್ತೂರಿನ ಪಡುಮಲೆಯಿಂದ ಸುಮಾರು 2ಕಿ.ಮೀ ದೂರದಲ್ಲಿರುವ ಗೆಜ್ಜೆಗಿರಿ ನಂದನಬಿತ್ತಲ್ ಕ್ಷೇತ್ರ. ಗೆಜ್ಜೆಗಿರಿ ನಂದನ ಬಿತ್ತಲು ಕೋಟಿ ಚೆನ್ನಯರ ತಾಯಿ ದೇಯಿಬೈದ್ಯೆತಿಗೆ ಪುನರ್ ಜೀವನ ನೀಡಿದ ಮನೆ.
ತನ್ನ ಕುಲಕಸುಬಾದ ಮೂರ್ತೆಗಾರಿಕೆ ಮಾಡುತ್ತಿದ್ದ ಸಾಯನಬೈದ್ಯ ಎಂಬ ನಾಟಿವೈದ್ಯ ಒಂದು ದಿನ ಸಂಕಮಲೆ ಬೆಟ್ಟದಲ್ಲಿ ತಾಳೆ ಮರವನ್ನೇರಿ ಮೂರ್ತೆಗಾರಿಕೆ ಮಾಡುತ್ತಿದ್ದ. ಆಗ ಆತನಿಗೆ ಯಾರೋ ಅಳುತ್ತಿರುವ ಶಬ್ದ ಕೇಳಲು, ಆತ ಮರದ ತುದಿಯಿಂದ ಕೆಳಗೆ ಇಳಿಯುತ್ತಾನೆ. ತಾನು ತಾಳೆಮರವೇರಲು ಕಟ್ಟಿದ ಬಿದಿರಿನ ಗಂಟಿಗೆ ಒರಗಿ ಕಣ್ಣಿಗೆ ಬಟ್ಟೆ ಕಟ್ಟಿ ಕೊಂಡಿದ್ದ ಹೆಣ್ಣು ಮಗಳೊಬ್ಬಳು ಅಳುತ್ತಿರಲು, ಆಕೆಯಲ್ಲಿ ಸಾಯನಬೈದ್ಯ ಅಳುವ ಕಾರಣವೇನೆಂದು ಕೇಳುತ್ತಾನೆ. ಆಕೆ ಮದುವೆಗೆ ಮುಂಚೆ ಋತುಮತಿಯಾದ ಕಾರಣ ಆಕೆಯ ತಂದೆ ತಾಯಿ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಿರುವುದಾಗಿ (ಅಂದಿನ ಕಾಲದ ಪದ್ಧತಿಯಂತೆ) ಹೇಳುತ್ತಾಳೆ. ಆಕೆಯನ್ನು ತಂಗಿಯಾಗಿ ಸ್ವೀಕರಿಸಿದ ಸಾಯನಬೈದ್ಯ ಮನೆಗೆ ಕರೆದುಕೊಂಡು ಬಂದು ಅವಳಿಗೆ ನಾಟಿ ವಿದ್ಯೆಯನ್ನು ಹೇಳಿ ಕೊಟ್ಟು ಸಾಕಿ ಸಲಹುತ್ತಾನೆ. ದೇಯಿಬೈದ್ಯೆತಿಗೆ ಆಶ್ರಯ ನೀಡಿ ಅವಳಿಗೆ ಬದುಕು ನೀಡಿದ ಮನೆಯೇ ಗೆಜ್ಜೆ ಗಿರಿ ನಂದನಬಿತ್ತಲ್ ಕ್ಷೇತ್ರ.

Gejjegiri

Related posts

ಬಿಜೆಪಿ ಪಾದಯಾತ್ರೆಗೆ ಸೊಪ್ಪು ಹಾಕಬೇಡಿ :ಸರ್ಕಾರದ ನೂರು ದಿನಗಳ ಪಥ ಸರಿಯಾಗಿದೆ ಸಿದ್ದರಾಮಯ್ಯರಿಂದ ಡಿಕೆಶಿ ತಂಡಕ್ಕೆ ಭರ್ಜರಿ ಬೆಂಬಲ

ಬಿಜೆಪಿ ಪಾದಯಾತ್ರೆಗೆ ಸೊಪ್ಪು ಹಾಕಬೇಡಿ :ಸರ್ಕಾರದ ನೂರು ದಿನಗಳ ಪಥ ಸರಿಯಾಗಿದೆ ಸಿದ್ದರಾಮಯ್ಯರಿಂದ ಡಿಕೆಶಿ ತಂಡಕ್ಕೆ ಭರ್ಜರಿ ಬೆಂಬಲ

September 11, 2026
ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬಿಡಿಎ ಸಿಎ ನಿವೇಶನ ಮಂಜೂರು ಆರೋಪ: ಲೋಕಾಯುಕ್ತ ತನಿಖೆ ಬಗ್ಗೆ ನಿರ್ಧರಿಸಲು ಹೈಕೋರ್ಟ್ ಸೂಚನೆ

ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬಿಡಿಎ ಸಿಎ ನಿವೇಶನ ಮಂಜೂರು ಆರೋಪ: ಲೋಕಾಯುಕ್ತ ತನಿಖೆ ಬಗ್ಗೆ ನಿರ್ಧರಿಸಲು ಹೈಕೋರ್ಟ್ ಸೂಚನೆ

September 11, 2026

ಮುಂದೆ ಅವಳನ್ನು ತನ್ನ ಬಾವನಾದ ಕಾಂತಣ್ಣ ಬೈದ್ಯನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಅವಳಿ ಮಕ್ಕಳಾದ ಕೋಟಿಚೆನ್ನಯರಿಗೆ ಜನ್ಮ ನೀಡಿದ 16ನೇ ದಿನ ಆಕಸ್ಮಿಕವಾಗಿ ಬೀಡಿನ ಸಮೀಪದ ಕೆರೆಯಲ್ಲಿ ದೇಯಿಬೈದ್ಯೆತಿ ಮರಣವನ್ನು ಅಪ್ಪುತ್ತಾಳೆ. ಸಹೋದರಿಯ ಕಳೇಬರವನ್ನು ಗೆಜ್ಜೆಗಿರಿಮನೆಗೆ ತಂದು ಧಪನ ಮಾಡುವ ಅಣ್ಣ ಸಾಯನಬೈದ್ಯ ತನ್ನ ತಂಗಿಯ ಅವಳಿ ಮಕ್ಕಳಾದ ಕೋಟಿ ಚೆನ್ನಯರನ್ನು ತನ್ನ ಮನೆಗೆ ಕರೆತಂದು ಆರೈಕೆ ಮಾಡುತ್ತಾನೆ. ಅವಳಿ ವೀರರಿಗೆ ಗುರುವಾಗಿ, ಮಾರ್ಗದರ್ಶಕನಾಗಿ ಸಲಹುತ್ತಾನೆ. ಮಾವನ ಮನೆಯಾದ ಗೆಜ್ಜೆಗಿರಿಯಲ್ಲೇ ಕೋಟಿ ಚೆನ್ನಯರು ಬೆಳೆದು ದೊಡ್ಡವರಾಗಿ ತುಳುನಾಡಿನ ವೀರ ಪರಾಕ್ರಮಶಾಲಿಗಳಾಗುತ್ತಾರೆ.
ದೇಯಿಬೈದ್ಯೆತಿಗೆ ಆಶ್ರಯ ನೀಡಿ ಅವಳಿಗೆ ಬದುಕು ನೀಡಿದ ಮನೆಯೇ ಗೆಜ್ಜೆ ಗಿರಿ ನಂದನಬಿತ್ತಲ್ ಕ್ಷೇತ್ರ. ಕೋಟಿ ಚೆನ್ನಯರು, ಸಾಯನಬೈದ್ಯ, ದೇಯಿ ಬೈದ್ಯೆತಿ ಬಾಳಿ ಬದುಕಿದ ಮೂಲಮನೆಯೇ ಸತ್ಯ ಧರ್ಮ ಚಾವಡಿ.
ಸರೋಳಿ ಮಂಜಕಟ್ಟೆ ಮುಂಭಾಗದಲ್ಲಿ ಧೂಮಾವತಿ ದೈವದ ಗುಡಿಯಿದೆ. ಸಾಯನ ಬೈದ್ಯನ ಹಿರಿಯರ ಕಾಲದಿಂದಲೂ ಆರಾಧಿಸುತ್ತಿದ್ದ ಧೂಮಾವತಿ ದೈವವನ್ನು ನಂಬಿ ಈಗಲೂ ಆ ಸ್ಥಳದಲ್ಲಿ ಆರಾಧನೆ ನಡೆಯುತ್ತಿದೆ.
ದೇಯಿಬೈದ್ಯೆತಿಯನ್ನು ದಫನ ಮಾಡಿದ ಸ್ಥಳ ದೇಯಿಬೈದ್ಯೆತಿಯ ಮಹಾ ಸಮಾಧಿ. ದೇಯಿಬೈದ್ಯೆತಿ ನಾಗ ಬ್ರಹ್ಮ ರನ್ನು ನೆನೆದು ನಾಟಿ ಔಷಧಿ ಕೊಡುತ್ತಿದ್ದ ಜಾಗ ನಾಗನ ಕಟ್ಟೆ. ಕೋಟಿ ಚೆನ್ನಯರು ವ್ಯಾಯಾಮ ಮಾಡುತ್ತಿದ್ದ ಸ್ಥಳವೇ ಗರಡಿ ಮನೆ.

Gejjegiri
ದೇಯಿಬೈದ್ಯೆತಿಗೆ ಪುನರ್ ಜೀವನ ನೀಡಿದ, ಸಾಯನ ಬೈದ್ಯನ ಕರ್ಮಭೂಮಿ, ಕೋಟಿ ಚೆನ್ನಯರ ಮೂಲಸ್ಥಾನ ಪುತ್ತೂರಿನ ಗೆಜ್ಜೆಗಿರಿ ನಂದನಬಿತ್ತಲ್ ಕ್ಷೇತ್ರದಲ್ಲಿ ಇದೀಗ ಬ್ರಹ್ಮಕಲಶಾಭಿಷೇಕದ ಸಂಭ್ರಮ.
ಸತ್ಯ ಧರ್ಮ ಚಾವಡಿಯಲ್ಲಿ ಮಾತೆ ದೇಯಿಬೈದ್ಯೆತಿಯ ಬಿಂಬ ಪ್ರತಿಷ್ಠೆ, ಗುರು ಸಾಯನಬೈದ್ಯರ ಗುರುಪೀಠ ಸ್ಥಾಪಿಸಲಾಗಿದ್ದು, ಗೆಜ್ಜೆಗಿರಿಯ ಶಿಖರಾಗ್ರದಲ್ಲಿ ನಿರ್ಮಿಸಲಾದ ಮೂಲಸ್ಥಾನ ಗರಡಿಯಲ್ಲಿ ಕೋಟಿ ಚೆನ್ನಯರ ಜೊತೆಗೆ ಗುರು ಸಾಯಿ ಬೈದ್ಯರ ಬಿಂಬ ಪ್ರತಿಷ್ಠೆ ಮಾಡಲಾಗಿದೆ.
ಪರಶುರಾಮ ಸೃಷ್ಠಿಯ ತುಳುನಾಡು ಈ ಪುಣ್ಯ ಉತ್ಸವದಲ್ಲಿ ಮಿಂದೇಳುತ್ತಿದೆ. ಪುಣ್ಯ ಭೂಮಿ ಎನಿಸಿಕೊಂಡಿರುವ ತುಳುನಾಡಿನಲ್ಲಿ ಜನ್ಮತಾಳಿದ ಇಂತಹ ಮಹಿಮೆಯುಳ್ಳ ಮಹಾತ್ಮರ ಆದರ್ಶಗಳೇ ಇಲ್ಲಿನ ಜನರ ಬದುಕನ್ನು ಸೌಹಾರ್ದ ಸಾಮರಸ್ಯದ ಕಡಲಾಗಿಸಿದೆ.

Tags: DeyibaidethiGejjegiriKotichennayya
ShareTweetSendShare
Join us on:

Related Posts

ಬಿಜೆಪಿ ಪಾದಯಾತ್ರೆಗೆ ಸೊಪ್ಪು ಹಾಕಬೇಡಿ :ಸರ್ಕಾರದ ನೂರು ದಿನಗಳ ಪಥ ಸರಿಯಾಗಿದೆ ಸಿದ್ದರಾಮಯ್ಯರಿಂದ ಡಿಕೆಶಿ ತಂಡಕ್ಕೆ ಭರ್ಜರಿ ಬೆಂಬಲ

ಬಿಜೆಪಿ ಪಾದಯಾತ್ರೆಗೆ ಸೊಪ್ಪು ಹಾಕಬೇಡಿ :ಸರ್ಕಾರದ ನೂರು ದಿನಗಳ ಪಥ ಸರಿಯಾಗಿದೆ ಸಿದ್ದರಾಮಯ್ಯರಿಂದ ಡಿಕೆಶಿ ತಂಡಕ್ಕೆ ಭರ್ಜರಿ ಬೆಂಬಲ

by Shwetha
September 11, 2026
0

ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ಪಾದಯಾತ್ರೆ ಮತ್ತು ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಸಂಭ್ರಮದ ನಡುವೆ ಹೊಸ ವಾಕ್ಸಮರ ಶುರುವಾಗಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರ...

ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬಿಡಿಎ ಸಿಎ ನಿವೇಶನ ಮಂಜೂರು ಆರೋಪ: ಲೋಕಾಯುಕ್ತ ತನಿಖೆ ಬಗ್ಗೆ ನಿರ್ಧರಿಸಲು ಹೈಕೋರ್ಟ್ ಸೂಚನೆ

ಖರ್ಗೆ ಕುಟುಂಬದ ಟ್ರಸ್ಟ್‌ಗೆ ಬಿಡಿಎ ಸಿಎ ನಿವೇಶನ ಮಂಜೂರು ಆರೋಪ: ಲೋಕಾಯುಕ್ತ ತನಿಖೆ ಬಗ್ಗೆ ನಿರ್ಧರಿಸಲು ಹೈಕೋರ್ಟ್ ಸೂಚನೆ

by Shwetha
September 11, 2026
0

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ)ಯಿಂದ ನಿಯಮಬಾಹಿರವಾಗಿ ಸಿಎ ನಿವೇಶನ ಮಂಜೂರು ಮಾಡಲಾಗಿದೆ ಎಂಬ ಆರೋಪಕ್ಕೆ...

ನಕಲಿ GST ನೋಂದಣಿಗೆ ಕಡಿವಾಣ: ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲು ದೆಹಲಿ ಹೈಕೋರ್ಟ್ ಸೂಚನೆ

ನಕಲಿ GST ನೋಂದಣಿಗೆ ಕಡಿವಾಣ: ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯಗೊಳಿಸಲು ದೆಹಲಿ ಹೈಕೋರ್ಟ್ ಸೂಚನೆ

by Shwetha
September 11, 2026
0

ಕಳವುಗೊಂಡ ಅಥವಾ ದುರುಪಯೋಗಪಡಿಸಿಕೊಂಡ PAN ಮತ್ತು ಆಧಾರ್ ವಿವರಗಳನ್ನು ಬಳಸಿಕೊಂಡು ನಕಲಿ GST ನೋಂದಣಿ ಮಾಡಿಸಿ ಹಣಕಾಸು ವಂಚನೆ ನಡೆಸುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೆಹಲಿ...

ಆಪರೇಷನ್ ಕರಾವಳಿ 2028:ಕೇಸರಿ ಕೋಟೆಯಲ್ಲಿ ಡಿಕೆಶಿ ಬ್ಯಾಟಿಂಗ್ 30 ವರ್ಷಗಳ ಬಿಜೆಪಿ ಪ್ರಾಬಲ್ಯಕ್ಕೆ ಲಗಾಮು ಹಾಕಲು ಕಾಂಗ್ರೆಸ್ ರಣತಂತ್ರ

ಆಪರೇಷನ್ ಕರಾವಳಿ 2028:ಕೇಸರಿ ಕೋಟೆಯಲ್ಲಿ ಡಿಕೆಶಿ ಬ್ಯಾಟಿಂಗ್ 30 ವರ್ಷಗಳ ಬಿಜೆಪಿ ಪ್ರಾಬಲ್ಯಕ್ಕೆ ಲಗಾಮು ಹಾಕಲು ಕಾಂಗ್ರೆಸ್ ರಣತಂತ್ರ

by Shwetha
September 11, 2026
0

ಕರ್ನಾಟಕ ರಾಜಕಾರಣದಲ್ಲಿ ಈಗಲೇ 2028ರ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿದೆ. ರಾಜ್ಯದ ಅತ್ಯಂತ ಪ್ರಭಾವಿ ರಾಜಕೀಯ ತಂತ್ರಗಾರ ಎನಿಸಿಕೊಂಡಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈಗ ಬಿಜೆಪಿಯ...

ಕಾಂಗ್ರೆಸ್ ಜನಪ್ರಿಯತೆ ಕಂಡು ಕೇಂದ್ರಕ್ಕೆ ಹೊಟ್ಟೆಕಿಚ್ಚು:ಸತೀಶ್ ಜಾರಕಿಹೊಳಿ ಇಡಿ ದಾಳಿ ಕೇವಲ ಆರಂಭವಷ್ಟೇ ನನ್ನ ಮತ್ತು ಡಿಕೆಶಿ ಮೇಲೆ ದಾಳಿ ಗ್ಯಾರಂಟಿ ಎಂದ ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಜನಪ್ರಿಯತೆ ಕಂಡು ಕೇಂದ್ರಕ್ಕೆ ಹೊಟ್ಟೆಕಿಚ್ಚು:ಸತೀಶ್ ಜಾರಕಿಹೊಳಿ ಇಡಿ ದಾಳಿ ಕೇವಲ ಆರಂಭವಷ್ಟೇ ನನ್ನ ಮತ್ತು ಡಿಕೆಶಿ ಮೇಲೆ ದಾಳಿ ಗ್ಯಾರಂಟಿ ಎಂದ ಪ್ರಿಯಾಂಕ್ ಖರ್ಗೆ

by Shwetha
September 11, 2026
0

ರಾಜ್ಯ ರಾಜಕಾರಣದಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಈಗ ಹೊಸ ಸಂಚಲನ ಮೂಡಿಸಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಬೆನ್ನಲ್ಲೇ ಈಗ ಮತ್ತಷ್ಟು ಕಾಂಗ್ರೆಸ್ ಸಚಿವರ ಮೇಲೆ ಇಡಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram