ಆಗಸ್ಟ್ 5ರಂದು ಭಾರತೀಯರ ಅದರಲ್ಲೂ ಹಿಂದೂಗಳ ಪಾಲಿನ ಐತಿಹಾಸಿಕ ದಿನ ಎನ್ನಬಹುದು. ಯಾಕೆಂದರೆ ಅಂದು ಎಷ್ಟೋ ಧಾರ್ಮಿಕ ಮುಖಂಡರು, ಹಿಂದೂಗಳು, ಅಷ್ಟೇ ಯಾಕೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗುವ ಸುದಿನ. ಯಾಕೆಂದ್ರೆ ಅಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ದಿನ. ದಶಕಗಳ ಕಾಲ ಈ ದಿನಕ್ಕಾಗಿ ಕೋಟ್ಯಾಂತರ ಜನರು ಕಾದು ಕುಳಿತ್ತಿದ್ದರು. ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಹಾಗೂ ಇನ್ನಿತರೇ ಗಣ್ಯರನ್ನು ಆಹ್ವಾನಿಸಲಾಗಿದೆ.
ಈ ಹಿನ್ನೆಲೆ ದೇಶದ ನಾನಾ ಭಾಗಗಳಲ್ಲಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದ್ದು, ಮಂಗಳೂರಿನಲ್ಲೂ ವಿವಿಧ ಸಂಘಟನೆಗಳಿಂದ ಸಂಭ್ರಮಾಚರಣೆ ನಡೆಯಲಿದೆ. ಆದ್ರೆ ಈ ವೇಳೆ ಅಹಿತಕರ ಘಟನೆಗಳು ನಡೆಯಬಹುದಾದ ಸಾಧ್ಯತೆಯೂ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರಿನಲ್ಲಿ ಅಗಸ್ಟ್ 5 ರಂದು 144 ಸೆಕ್ಷನ್ ಜಾರಿ ಜಾರಿ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ವಿಕಾಶ್ ಕುಮಾರ್ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಈ ಕ್ರಮಕ್ಕೆ ಮತ್ತೊಂದು ಕಾರಣವೂ ಇದೆ. ಮೂಲಗಳ ಪ್ರಕಾರ ಕೆಲ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ ಎಂಬ ಮಾಹಿತಿ ಸಿಕ್ಕಿದೆ. ಇದನ್ನ ಮನಗಂಡು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ ನಿಷೇಧಾಜ್ಞೆ ಉಲ್ಲಂಘನೆ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?
ಇದೆಂಥಾ ವಿಪರ್ಯಾಸ ನೋಡಿ...! ಭಾರತದಂತೆ ಈ ದೇಶದಲ್ಲೂ ಫುಟ್‍ಬಾಲ್ ಕ್ರೇಝ್ ಇದ್ರೂ ಅಪ್ರತಿಮ ಅಟಗಾರರನ್ನು ತಯಾರು ಮಾಡಲು ಆಗ್ತಿಲ್ಲ. ಹೀಗಾಗಿ ಅವರು ಕೂಡ ಫಿಫಾ ವಿಶ್ವಕಪ್‍ನಲ್ಲಿ ಅರ್ಹತೆ...








