ಒಂದೆಡೆ ದೇಶಕ್ಕೆ ದೇಶವೇ ಆಗಸ್ಟ್ 5 ರಂದು ಜರುಗಲಿರುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರಾರಿದ್ದಾರೆ. ಆಗಸ್ಟ್ 5 ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನೆರವೇರಲಿರುವ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗಣ್ಯರು ಭಾಗಿಯಾಗಲಿದ್ದಾರೆ. ಆದ್ರೆ ರಾಮಂದಿರ ನಿರ್ಮಾಣಕ್ಕೆ ನಿಗದಿ ಮಾಡಿರುವ ಗಳಿಗೆ ಸರಿಯಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಿಗ್ವಿಜಯ್ ಸಿಂಗ್ ರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿರುವ ಮುಹೂರ್ತ ಸರಿಯಿಲ್ಲ ಎಂದು ಹಲವು ಬಾರಿ ಎಚ್ಚರಿಕೆ ನೀಡಿದರೂ ಅಶುಭ ಗಳಿಗೆಯಲ್ಲಿ ಶುಭ ಕಾರ್ಯಕ್ಕೆ ಮೋದಿ ಕೈ ಹಾಕಿದ್ದಾರೆ. ಆಗಸ್ಟ್ 05ರಂದು ಬೆಳಗ್ಗೆ 8 ರಿಂದ 12ಗೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಶಂಕು ಸ್ಥಾಪನೆ ಮುಹೂರ್ತ ಇಡಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕದ ಬೆಳಗಾವಿಯ ಎನ್ ಆರ್ ವಿಜಯೇಂದ್ರ ಶರ್ಮ ಅವರು ಶಿಲಾನ್ಯಾಸ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಆದ್ರೆ ಈ ಸಮಯ ಶುಭವಲ್ಲ. ಅಶುಭ ಎನ್ನುವ ಮೂಲಕ ವಿಜಯೇಂದ್ರ ಶರ್ಮ ಅವರು ಇಟ್ಟಿರುವ ಮುಹೂರ್ತದ ಸಮಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಟ್ವಿಟ್ ಮಾಡಿರುವ ದಿಗ್ವಿಜಯ್ ಸಿಂಗ್ ದ್ವಾರಕ ಹಾಗೂ ಜೋಶಿಮಠದ ಹಿರಿಯ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಮಹಾರಾಜ್ ಅವರು ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಡುವ ಗಳಿಗೆ ಅಶುಭವಾಗಿದೆ ಎಂದಿದ್ದಾರೆ.
ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ
'ವಿಶ್ವ ಆನೆಗಳ ದಿನ'ದಂದು ಅನಾವರಣಗೊಳ್ಳುತ್ತಿರುವ 'ಕ್ರಾಸಿಂಗ್ ಪಾತ್ಸ್' ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ಅವರು ಪ್ರಥಮ ಬಾರಿಗೆ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ...








