ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ `ಪಾತಾಳ್ ಲೋಕ್’ ಎಂದೇ ಟ್ರೆಂಡಿಂಗ್ ಆಗಿರುವ ಇಮ್ರಾನ್ ಅನ್ಸಾರಿಯಂತೆ ದೆಹಲಿ ಪೊಲೀಸ್ ಪೇದೆ ಫಿರೋಜ್ ಅಲಮ್ ಯುಪಿಎಸ್‍ಸಿ ಪರೀಕ್ಷೆಯಲ್ಲಿಪಾಸ್ ಆಗಿ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ.
2019ರಲ್ಲಿ ನಡೆದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಫಿರೋಜ್ ಅಲಮ್ 646ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ನೆಟ್‍ಫ್ಲಿಕ್ಸ್ ವೆಬ್ ಸೀರಿಸ್‍ನಲ್ಲಿ ಪ್ರಸಾರವಾಗುವ ಪಾತಾಳ್ ಲೋಕ’ದಲ್ಲಿ ದೆಹಲಿ ಪೇದೆ ಪೇದೆ ಇಮ್ಸಾನ್ ಅನ್ಸಾರಿ ಪಾತ್ರದಾರಿಎಗ ಅಲಮ್ ಹೋಲಿಕೆಯಾಗುತ್ತಾರೆ. ಅನ್ಸಾರಿ ರೀಲ್‍ನಲ್ಲಿ ಪೊಲೀಸ್ ಪೇದೆಯೊಬ್ಬನ ಯಶೋಗಾಧೆಗೆ ಮಾದರಿಯಾದರೆ, ನಿಜ ಜೀವನದಲ್ಲಿ ಫಿರೋಜ್ ಅಲಮ್ ಯುಪಿಎಸ್‍ಸಿ ಪರೀಕ್ಷೆಯಲ್ಲಿ 646ನೇ ರ್ಯಾಂಕ್ ಪಡೆದು ಸಾಧಕ ಎನ್ನುವುದನ್ನು ಸಾಧಿಸಿ ತೊರಿಸಿದ್ದಾರೆ.
ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ರಿಯಲ್ ಲೈಫ್‍ನ ಫಿರೋಜ್ ಅಲಮ್ ಹಾಗೂ ಪಾತಾಳ್ ಲೋಕ್‍ನ ಇಮ್ರಾನ್ ಅನ್ಸಾರಿ ಫೋಟೊ ಇಟ್ಟು ಇವರೇ ಪಾತಾಳ್ ಲೋಕದ ಪೊಲೀಸ್ ಪೇದೆ ಎಂದು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಲಾಗುತ್ತಿದೆ.