ADVERTISEMENT
Wednesday, July 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸೌತಾಂಪ್ಟನ್ ನಲ್ಲಿ ಆಂಗ್ಲರಿಗೆ ಆಘಾತ ನೀಡಿದ ಐರ್ಲೆಂಡ್

admin by admin
August 5, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಸೌತಾಂಪ್ಟನ್ ನಲ್ಲಿ ಆಂಗ್ಲರಿಗೆ ಆಘಾತ ನೀಡಿದ ಐರ್ಲೆಂಡ್

ಆಗಸ್ಟ್ 4ರಂದು ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಸೌತಾಂಪ್ಟನ್ ನಲ್ಲಿ ನಡೆಯಿತ್ತು. ಈ ಪಂದ್ಯದ ಫಲಿತಾಂಶ ಮತ್ತು ಆಟ ವೈಖರಿ 18 ವರ್ಷಗಳ ಹಿಂದೆ ಲಾಡ್ರ್ಸ್ ನಲ್ಲಿ ನಡೆದಿದ್ದ ಇಂಗ್ಲೆಂಡ್ ಮತ್ತು ಭಾರತ ನಡುವಿನ ಪಂದ್ಯವನ್ನು ನೆನಪಿಸುವಂತಿತ್ತು. ಹೌದು, ಗಂಗೂಲಿ ಸಾರಥ್ಯದ ಟೀಮ್ ಇಂಡಿಯಾ ನ್ಯಾಟ್ ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಶಾಕ್ ನೀಡಿದ್ದ ಹಾಗೇ ಈ ಬಾರಿ ಐರ್ಲೆಂಡ್ ತಂಡ ಇಂಗ್ಲೆಂಡ್ ಮರೆಯಲು ಆಗದಂತಹ ಆಘಾತವನ್ನು ನೀಡಿದೆ.
ನ್ಯಾಟ್ ವೆಸ್ಟ್ ಸರಣಿಯಲ್ಲಿ ಮಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಇಂಗ್ಲೆಂಡ್ ಗೆಲುವಿಗೆ ಅಡ್ಡಿಯಾಗಿದ್ದರು. ಆದ್ರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಕನಸನ್ನು ಭಗ್ನಗೊಳಿಸಿದ್ದು ಐರ್ಲೆಂಡ್‍ನ ಪೌಲ್ ಸ್ಟಿರ್ಲಿಂಗ್ ಮತ್ತು ಆಂಡಿ ಬಾಲ್ಬ್ರೀನ್. ಎರಡನೇ ವಿಕೆಟ್‍ಗೆ ಇವರಿಬ್ಬರು ದ್ವಿಶತಕದ (214) ಜೊತೆಯಾಟವನ್ನು ಆಡಿ ಐರ್ಲೆಂಡ್ ತಂಡದ ಐತಿಹಾಸಿಕ ಗೆಲುವಿನ ರೂವಾರಿಗಳಾದ್ರು. ಪೌಲ್ ಸ್ಟಿರ್ಲಿಂಗ್ 128 ಎಸೆತಗಳಲ್ಲಿ 142 ರನ್ ದಾಖಲಿಸಿದ್ರು. ಇದರಲ್ಲಿ 9 ಬೌಂಡರಿ ಮತ್ತು ಆರು ಸಿಕ್ಸರ್‍ಗಳಿದ್ದವು. ಹಾಗೇ ಆಂಡಿ ಬಾಲ್ಟ್ರೀನ್ 112 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 113 ರನ್ ಗಳಿಸಿದ್ರು. ಅಂತಿಮವಾಗಿ ಐರ್ಲೆಂಡ್ 49.5 ಓವರ್‍ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಟೆಕ್ಟರ್ ಅಜೇಯ 29 ರನ್ ಮತ್ತು ಕೆಜೆ ಒಬ್ರಿಯಾನ್ ಅಜೇಯ 15 ರನ್ ಸಿಡಿಸಿದ್ರು.
ಇದಕ್ಕು ಮೊದಲು ಇಂಗ್ಲೆಂಡ್ ಐರ್ಲೆಂಡ್ ತಂಡಕ್ಕೆ ಗೆಲ್ಲಲು 328 ರನ್ ಗಳ ಸವಾಲನ್ನು ನೀಡಿತ್ತು. ಟಾಸ್ ಗೆದ್ದ ಐರ್ಲೆಂಡ್ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಐರ್ಲೆಂಡ್ ಗೇಮ್ ಪ್ಲಾನ್ ನಂತೆ ಇಂಗ್ಲೆಂಡ್ ಅರಂಭದಲ್ಲೇ ಆಘಾತ ಅನುಭವಿಸಿತ್ತು. 44 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಆಧಾರವಾಗಿದ್ದು ಇಯಾನ್ ಮೊರ್ಗಾನ್. ಐರ್ಲೆಂಡ್ ದಾಳಿಗೆ ದಿಟ್ಟ ಉತ್ತರ ನೀಡಿದ ಇಯಾನ್ ಮೊರ್ಗಾನ್ ಆಕರ್ಷಕ ಶತಕ ಸಿಡಿಸಿದ್ರು. ಮೋರ್ಗಾನ್ 84 ಎಸೆತಗಳಲ್ಲಿ 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳನ್ನು ದಾಖಲಿಸಿದ್ದರು. ಇನ್ನೊಂದೆಡೆ ಬಂಟನ್ 51 ಎಸೆತಗಳಲ್ಲಿ 58 ರನ್ ಗಳಿಸಿದ್ರೆ, ಡೆವಿಡ್ ವಿಲ್ಲೆ 42 ಎಸೆತಗಳಲ್ಲಿ 51 ರನ್ ದಾಖಲಿಸಿದ್ರು. ಹಾಗೇ ಸ್ಯಾಮ್ ಕುರನ್ ಅಜೇಯ 38 ರನ್ ಸಿಡಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ 49.5 ಓವರ್ ಗಳಲ್ಲಿ 328 ರನ್ ಗಳಿಗೆ ಆಲೌಟಾಯ್ತು.
ಯಾರು ಊಹಿಸದ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ಇಂಗ್ಲೆಂಡ್ ಗೆ ಮತ್ತೊಮ್ಮೆ ಆಘಾತ ನೀಡಿತ್ತು. ಸುಲಭ ಗೆಲುವು ಎಂದು ಭಾವಿಸಿದ್ದ ಇಂಗ್ಲೆಂಡ್ ಏಳು ವಿಕೆಟ್ ಗಳಿಂದ ಪರಾಭವಗೊಂಡಿತ್ತು .ಪೌಲ್ ಸ್ಟಿರ್ಲಿಂಗ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. ಮೂರು ಏಕದಿನ ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 2-1ರಿಂದ ಗೆದ್ದುಕೊಂಡಿತ್ತು. ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಐರ್ಲೆಂಡ್ ವೈಟ್ ವಾಶ್ ಮುಖಭಂಗದಿಂದ ತಪ್ಪಿಸಿಕೊಂಡಿತ್ತು.

Related posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

July 7, 2026
ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

July 7, 2026
Tags: # IrelandPaul Stirling
ShareTweetSendShare
Join us on:

Related Posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

by Shwetha
July 7, 2026
0

ಯದುವೀರ್ ಒಡೆಯರ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ವೇಳೆ ಕಂಬಳ ಆಯೋಜಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಕಂಬಳವು ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿ,...

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

by Shwetha
July 7, 2026
0

ಪಾಕಿಸ್ತಾನದ ಅಧಿಕಾರಿಗಳೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಈ...

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

by Shwetha
July 7, 2026
0

ವಿವಿಧ ಕಾರಣಗಳಿಂದ BPL ಪಡಿತರ ಚೀಟಿ ಕಳೆದುಕೊಂಡಿದ್ದ 4 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ರಾಜ್ಯ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ. ಅನರ್ಹರೆಂದು ಪರಿಗಣಿಸಿ APL ಕಾರ್ಡ್‌ಗಳಾಗಿ...

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

by Shwetha
July 7, 2026
0

ಮೈಸೂರಿನ ಮುಡಾ ನಿವೇಶನ ಹಂಚಿಕೆ ಹಗರಣದ ಕಿಚ್ಚು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರಿಗೂ ತಟ್ಟಿದೆ. ಮೈಸೂರು ನಗರಾಭಿವೃದ್ಧಿ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ರಾಮಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
July 7, 2026
0

ಪ್ರಿಯಾಂಕ್ ಖರ್ಗೆ ಅವರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram