ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಸಂಭ್ರಮಾಚರಣೆ ಇಡೀ ದೇಶಾದ್ಯಂತ ಮನೆ ಮಾಡಿದೆ. ಈ ಐತಿಹಾಸಿಕ ದಿನದ ಪ್ರಯುಕ್ತ ಒಡಿಶಾದ ಪುರಿಯಲ್ಲಿ ಮರಳು ಕಲಾವಿದರೊಬ್ಬರು ಪುರಿಯ ಕಡಲ ತೀರದಲ್ಲಿ ಮರಳಿನಲ್ಲಿ ರಾಮ ಮಂದಿರದ ಪ್ರತಿಕೃತಿ ರಚಿಸಿ ( ಸ್ಯಾಂಡ್ ಆರ್ಟ್) ಭಕ್ತಿ ಮೆರೆದಿದ್ದಾರೆ. ಕಲಾವಿದ ಸುದರ್ಶನ್ ಪಟ್ನಾಯಕ್ ಅವರ ಈ ಕಲಾಕೃತಿ ಜನರ ಗಮನ ಸೆಳೆದಿದೆ.
“ಇನ್ನೂ ಭೂಮಿ ಪೂಜೆಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ದೇವಾಲಯದ ಮರಳಿನಲ್ಲಿ ಪ್ರತಿಕೃತಿ ರಚಿಸುವ ಆಸೆಯಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದಾಗಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಸಮುದ್ರದ ತೀರದ ಮರಳಿನಲ್ಲಿ ಪ್ರತಿಕೃತಿ ರಚಿಸಿದ್ದೇನೆ” ಎಂದು ಕಲಾವಿದ ಸುರೇಶ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಸುದರ್ಶನ್ ಅವರು ಬೀಚ್ ನ ಮರಳಿನಲ್ಲಿ 5 ಅಡಿ ಎತ್ತರದ ಪ್ರತಿಕೃತಿಯನ್ನು ರಚಿಸಿದ್ದು, ಈ ಪ್ರತಿಕೃತಿ ರಚನೆಗೆ ಸುಮಾರು 5 ಗಂಟೆಗಳನ್ನು ತೆಗೆದುಕೊಮಡಿದ್ದಾರೆ. ಅದಕ್ಕೆ ಸುಮಾರು 4 ಟನ್ ಮರಳನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.








