2019ನೇ ಸಾಲಿನ UPSC ಪರೀಕ್ಷಾ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿದ್ದು, ಅನೇಕರ ಐಎಎಸ್ ಪಾಸ್ ಮಾಡುವ ಕನಸು ನನಸಾಗಿದೆ. ಈ ಪರೀಕ್ಷೆಯಲ್ಲಿ ವಿವಿಧ ಕ್ಷೇತ್ರಗಳಿಂದ ಬಂದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅದರಲ್ಲಿ ದೆಹಲಿ ಮೂಲದ ರೂಪದರ್ಶಿ ಐಶ್ವರ್ಯಾ ಶೋರನ್ ಸಹ ಒಬ್ಬರಾಗಿದ್ದಾರೆ.
2019ನೇ ಸಾಲಿನ ಯುಪಿಎಸ್ ಸಿ ಪರೀಕ್ಷೆಯಲ್ಲಿ 93ನೇ ಶ್ರೇಣಿ ಪಡೆದಿರುವ ಐಶ್ವರ್ಯಾ ಒಬ್ಬರು ಮಾಡಲ್ ಆಗಿದ್ದು, ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ , ಪರೀಕ್ಷೆಗೆಗಾಗಿ ಶ್ರಮವಹಿಸಿದ್ದು, ಯಶಸ್ವಿಯಾಗಿದ್ದಾರೆ. ಐಶ್ವರ್ಯಾ ಶೋರನ್ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ ಫೈನಲಿಸ್ಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದು, ಇವರ ಈ ಸಾಧನೆಗೆ ಮಿಸ್ ಇಂಡಿಯಾ ಟ್ವಿಟ್ಟರ್ ನಲ್ಲಿ ಐಶ್ವರ್ಯಾ ಅವರ ಫೋಟೋ ಹಾಕಿ ಶುಭಕೋರಿದೆ. ಅಲ್ಲದೇ “ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ಐಶ್ವರ್ಯಾ ಐಎಎಸ್ ಪಾಸ್ ಮಾಡಿರುವುದು ಹೆಮ್ಮೆಯ ವಿಚಾರ”ವೆಂದು ಮಿಸ್ ಇಂಡಿಯಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಐಶ್ವರ್ಯಾ ಅವರನ್ನು ಶ್ಲಾಘಿಸಿದೆ.
ಮಾಜಿ ಮಿಸ್ ಇಂಡಿಯಾ ಫೈನಲಿಸ್ಟ್ ಐಶ್ವರ್ಯಾ ಸೋರೆನ್ ಅವರು ಐಎಎಸ್ ಪಾಸ್ ಮಾಡುವ ಮೂಲಕ ಡೆಡಿಕೇಶನ್ ಡಿಟರ್ಮಿನೇಷನ್ , ಪ್ಯಾಷನ್ ಹಾಗೂ ಸಾಧಿಸುವ ಗುರಿಯೊಂದಿದ್ದರೆ ಏನು ಬೇಕಾದರು ಮಾಡಬಹುದು ಎಂಬುದನ್ನ ತೋರಿಸಿಕೊಡುವ ಜೊತೆಗೆ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಇನ್ನೂ ಐಎಎಸ್ ಅಧಿಕಾರಿಯಾಗಬೇಕು ಎಂಬುದು ಐಶ್ವರ್ಯಾ ಅವರ ಬಾಲ್ಯದ ಕನಸು. ಇದೀಗ ಈ ಕನಸು ನನಸಾಗಿದ್ದು, ಐಶ್ವರ್ಯಾ ಅವರು ಇದೀಗ ಮನೆಮಾತಾಗಿದ್ದಾರೆ.
ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ಐಶ್ವರ್ಯಾ “ ನನ್ನ ತಾಯಿ ನನಗೆ ಹೆಸರಿಟ್ಟಿದ್ದಕ್ಕೆ ಸ್ಪೂರ್ತಿ ಐಶ್ವರ್ಯಾ ರೈ. ಯಾಕೆಂದರೆ ನಮ್ಮ ತಾಯಿಗೆ ನಾನು ಮಿಸ್ ಇಂಡಿಯಾ ಆಗಬೇಕು ಎಂಬ ಆಸೆಯಿತ್ತು. ಹೀಗಾಗಿಯೇ ನಾನು ಮಾಡಲಿಂಗ್ ಜಗತ್ತಿಗೆ ಎಂಟ್ರಿ ಕೊಟ್ಟು ತಾಯಿಯ ಆಸೆ ಈಡೇರಿಸಿದೆ. ಅದರಂತೆ ಮಿಸ್ ಇಂಡಿಯಾ ಟಾಪ್ ಫೈನಲಿಸ್ಟ್ ಆಗಿಯೂ ಹೊರಹೊಮ್ಮಿದೆ. ಆದರೆ ನಾನು ಬಾಲ್ಯದಿಂದಲೂ ನಾಗಿರಿಕ ಸೇವೆಗಳಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಹೊಂದಿದ್ದೆ. ಹೀಗಾಗಿಯೇ ನಾನು ಕೆಲ ಕಾಲ ಮಾಡಲಿಂಗ್ ನಿಂದ ಬ್ರೇಕ್ ಪಡೆದು ನನ್ನ ಸಂಪೂರ್ಣ ಗಮನ ವಿದ್ಯಾಭ್ಯಾಸದತದ್ತ ಹರಿಸಿದೆ. ಇದೀಗ ತನ್ನ ಶ್ರಮದ ಪ್ರತಿಫಲ ಸಿಕ್ಕಿದೆ” ಎಂದಿದ್ದಾರೆ.
ಐಶ್ವರ್ಯಾ ಅವರ ಮಾಡಲಿಂಗ್ ಜರ್ನಿ ಶುರುವಾಗಿದ್ದು ರಾಷ್ಟ್ರ ರಾಜಧಾನಿ ದೆಹಲಿ ಟೈಮ್ಸ್ ಪ್ರೆಶ್ ಫೇಸ್ ಬ್ಯೂಟಿ ಪೆಜೆಂಟ್ ಮೂಲಕ. ಇದಾದ ಬಳಿಕ ಅವರಿಗೆ ಮಿಸ್ ಇಂಡಿಯಾದಲ್ಲಿ ಭಾಗವಹಿಸುವ ಅವಕಾಶ ಒಲಿದಿತ್ತು.
ವಿಶೇಷ ಸಂಗತಿ ಎಂದರೆ ಐಶ್ವರ್ಯಾ ಹೇಳುವ ಪ್ರಕಾರ ಅವರು ಯಾವುದೇ ಕೋಚಿಂಗ್ ಕ್ಲಾಸ್ ನಲ್ಲಿ ಪರೀಕ್ಷೆಗಾಗಿ ತರಬೇತಿ ಪಡೆದಿಲ್ಲವಂತೆ. ಹೌದು ಆದರೂ ಹೇಗೆ ಉತ್ತಮ ರ್ಯಾಂಕ್ ನಲ್ಲಿ ಪಾಸ್ ಆಗಲು ಸಾಧ್ಯವಾಯಿತು ಎಂಬುದನ್ನ ಐಶ್ವರ್ಯಾ ಅವರೇ ತಿಳಿಸಿದ್ದಾರೆ. ” ನಾನು ನನ್ನ ಫೋನ್ ಸ್ವಿಚ್ ಆಫ್ ಮಾಡುವ ಅನಿವಾರ್ಯತೆ ಎದುರಾಗಿತ್ತು. ಸಾಮಾಜಿಕ ಜಾಲತಾಣ, ಎಲ್ಲದರಿಂದಲೂ ದೂರ ಉಳಿದು ಕೇವಲ ಓದುವ ಕಡೆಗಷ್ಟೇ ಗಮನ ವಹಿಸಿದ್ದೇ. ಅದರ ಪ್ರತಿಫಲ ಈಗ ಸಿಕ್ಕಿದೆ. ಆದ್ರೆ ಅದರ್ಥ ನಾನು ಈಗ ತಕ್ಷಣವೇ ಓದುವುದರಲ್ಲಿ ಆಸಕ್ತಿ ಬೆಳಸಿಕೊಂಡಿದ್ದೇನಲ್ಲ. ನನಗೆ ಬಾಲ್ಯದಿಂದಲೂ ಓದುವುದಲ್ಲಿ ಅತ್ಯಂತ ಆಸಕ್ತಿ ಬೆಳೆಸಿಕೊಂಡಿದ್ದೆ “ ಎಂದಿದ್ದಾರೆ. ಅಲ್ದೇ ಭಾರತೀಯ ಸೇನೆಗೆ ಸೇರುವ ವಿಚಾರವಾಗಿ ಮಾತನಾಡಿದ ಐಶ್ವರ್ಯಾ “ ಸೇನೆಯಲ್ಲಿ ಮಹಿಳೆಯರಿಗೆ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಆದರೂ ಕೆಲವೊಂದು ಮಿತಿಯಿರುತ್ತೆ. ಆದರೆ ನಾಗರಿಕ ಸೇವೆಗಳಲ್ಲಿ ಮಹಿಳೆಯರಿಗೆ ಸಾಧನೆ ಮಾಡಲು ಯಾವುದೇ ಕಟ್ಟುಪಾಡುಗಳಿಲ್ಲ” ಎಂದು ಹೇಳಿಕೊಂಡಿದ್ದಾರೆ. ಐಶ್ವರ್ಯಾ ಅವರ ತಂದೆ ಎನ್ ಸಿಸಿ ತೆಲಂಗಾಣ ಬೆಟಾಲಿಯನ್ ನ ಕಮಾಮಡಿಂಗ್ ಆಫಿಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ..