ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಲೆನಾಡಿನ ತೀರ್ಥಹಳ್ಳಿ ತಾಲೂಕಿನ ದಾವಣೀಬೈಲು ಪ್ರದೇಶದ ಚಾರಿತ್ರಿಕ ಕಥಾನಕದ ಕುರಿತು ನಿಮಗೆಷ್ಟು ಗೊತ್ತು?

admin by admin
August 5, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಮಲೆನಾಡಿನ ತೀರ್ಥಹಳ್ಳಿ ತಾಲೂಕಿನ ದಾವಣೀಬೈಲು ಪ್ರದೇಶದ ಚಾರಿತ್ರಿಕ ಕಥಾನಕದ ಕುರಿತು ನಿಮಗೆಷ್ಟು ಗೊತ್ತು?

ತೀರ್ಥಹಳ್ಳಿಯ ಆರಗದಿಂದ ಕೋಣಂದೂರಿಗೆ ಹೋಗುವ ದಾರಿಯಲ್ಲಿ, ಗುಡ್ದೆಕೊಪ್ಪಗಿಂತ ಸ್ವಲ್ಪ ಮುಂಚೆ ಎಡಕ್ಕೆ ತಿರುಗಿ ಸುಮಾರು ಎರಡೂವರೆ ಕಿಲೋಮೀಟರ್ ಕಾಡಿನೊಳಗೆ ಹೋದರೆ ನಮಗೆ “ದಾವಣೀಬೈಲು” ಎಂಬ ಪ್ರದೇಶ ಸಿಗುತ್ತದೆ. ಇಲ್ಲಿ ೧೨ನೇ ಶತಮಾನದ ಹೊಯ್ಸಳರ ವಾಸ್ತುಶಿಲ್ಪದ ಸೊಗಸಾದ ಗ್ರ್ಯಾನೈಟ್ ಕಲ್ಲಿನ ಕಪಿಲೇಶ್ವರ ದೇವಸ್ಥಾನ ಮತ್ತು ಅದಕ್ಕೆ ಸಂಬಂಧಪಟ್ಟ ಬೃಹತ್ ಚೌಕಾಕಾರದ ಪುಷ್ಕರಣಿ ಇದೆ.

Related posts

Just one betel leaf is enough. See how you can pay off even if you have a debt of lakhs, if not crores!

ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

February 3, 2026
Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

February 3, 2026

ಸ್ಥಳ ಇತಿಹಾಸ:-

ಕನ್ನಡದಲ್ಲಿ ದಾವಣಿ ಎಂದರೆ ಜಾನುವಾರುಗಳಿಗೆ ಕಟ್ಟುವ ಹಗ್ಗ ಮತ್ತು ಬೈಲು ಅಂದರೆ ವಿಶಾಲವಾದ ಮೈದಾನ ಪ್ರದೇಶ. ಹಿಂದಿನ ಕಾಲದಲ್ಲಿ ಪಶ್ಚಿಮ ಘಟ್ಟದ ಮೇಲಿನ ಪ್ರದೇಶ ಮತ್ತು ಕರಾವಳಿಗೆ ಕೊಂಡಿಯಾಗಿದ್ದು, ಘಟ್ಟದ ಮೇಲಿನ ದಾರಿ. ಅಂದಿನ‌ ಕಾಲದಲ್ಲಿ ಪಶ್ಚಿಮ ಘಟ್ಟದ ಮಲೆನಾಡಿನ ಮೂಲಕವೇ ಎಲ್ಲಾ ಸರಂಜಾಮುಗಳು ಕರಾವಳಿಯ ಕಡಲತೀರದಿಂದ ದೇಶದ ಹೊರಗೆ ಅಥವಾ ಒಳಗೆ ಬರುತ್ತಿದ್ದವು. ಆ ಕಾಲದಲ್ಲಿ ಸರಂಜಾಮುಗಳನ್ನು ಸಾಗಿಸಲು ಬಳಸುತ್ತಿದ್ದ ಸಾರಿಗೆ ವ್ಯವಸ್ಥೆ ಅಂದರೆ ಕುದುರೆ, ಆನೆ, ಎತ್ತು, ಎಮ್ಮೆ, ಒಂಟೆ, ಕತ್ತೆ ಮತ್ತು ಇವುಗಳ ಗಾಡಿ ಹಾಗೂ ಸಾರೋಟಿಗಳು.

ಅಂದಿನ ಕಾಲದಲ್ಲಿ ಹುಲಿಕಲ್ (ಬಾಳೆಬರೆ) ಮತ್ತು ಕೊಲ್ಲೂರು ಘಾಟಿ, ಗಾಡಿಗಳನ್ನು ಹೊಯ್ಯಲು ಸೂಕ್ತವಾದರೆ, ಆಗುಂಬೆ ಘಾಟಿಯಲ್ಲಿ ಜಾನುವಾರುಗಳ ಬೆನ್ನಿಗೆ ಕಟ್ಟಿದ ಚೀಲಗಳಲ್ಲಿ ಸಾಮಾನುಗಳನ್ನು ಹಾಕಿ ಕೊಂಡು ವ್ಯಾಪಾರಿಗಳು ಘಟ್ಟದ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲಕ್ಕೆ ತಮ್ಮ ವ್ಯವಹಾರವನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಕರಾವಳಿಯಿಂದ ಪಶ್ಚಿಮ ಘಟ್ಟದ ಮೇಲೆ ಬರಲು ಜಾನುವಾರುಗಳಿಗೆ ಹೆಚ್ಚು ಶ್ರಮವಹಿಸ ಬೇಕಾಗಿದ್ದು, ಅವುಗಳು ಘಟ್ಟದ ಮೇಲೆ ಬಂದ ಮೇಲೆ ಒಂದು ವಿಶಾಲವಾದ ಬಯಲಿನಲ್ಲಿ ಅವುಗಳನ್ನು ತಂಗಿಸುವ ಪರಂಪರೆ ಮಲೆನಾಡಿನಲ್ಲಿ ಮೊದಲಿನಿಂದಲೂ ಇತ್ತು. ಉದಾಹರಣೆಗೆ ಇಂದಿನ ಹರಿಹರ ಮತ್ತು ದಾವಣಗೆರೆಯ ಮಧ್ಯ ಇರುವ ಬಯಲಿನಲ್ಲಿ ಸಾವಿರಾರು ಜಾನುವಾರುಗಳನ್ನು ಕಟ್ಟುತ್ತಿದ್ದು ಆ ಪ್ರದೇಶಕ್ಕೆ ದಾವಣೀಬೈಲು ಎಂದು ಕರೆಯಲ್ಪಡುತ್ತಿದ್ದು ಇಂದು ಆ ಊರು ದಾವಣಗೆರೆಯಾಗಿದೆ. ಅದೆ ರೀತಿ ಕಪಿಲಾ ಮುನಿಗಳು ಪ್ರೀತಿಸುತ್ತಿದ್ದ ಕಪಿಲಾ ಹಸುಗಳ ಸಂಕೇತವಾಗಿರುವ ಕಪಿಲೇಶ್ವರ ದೇವಸ್ಥಾನವನ್ನು ಜಾನುವಾರುಗಳನ್ನು ಕಟ್ಟುವ ಬಯಲಿನಲ್ಲಿ ಸ್ಥಾಪಿಸಿದ್ದು ಅಂದಿನ ರಾಜರ ದಿವ್ಯ ದೃಷ್ಟಿಯ ಸಂಕೇತವಾಗಿದೆ.

ಪ್ರಸಿದ್ಧ ವ್ಯಾಪಾರ ಕೇಂದ್ರ:-

12ನೇ ಶತಮಾನದಲ್ಲಿ ಆರಗ ಹದಿನೆಂಟು ಕಂಪಣ ಒಂದು ಬೃಹತ್ ಕೇಂದ್ರ ಬಿಂದು ಆಗಿದ್ದು ಅಂದಿನ ಕಾಲದಲ್ಲಿ ದೊಡ್ಡ ವ್ಯಾಪಾರ ಮತ್ತು ವ್ಯವಹಾರಕ್ಕೆ ಪ್ರಸಿದ್ಧಿಯನ್ನು ಪಡೆದಿತ್ತು. ಘಟ್ಟ ಪ್ರದೇಶ ಹಾಗೂ ಕರಾವಳಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೆ ಹತ್ತಿರ ಇದ್ದ ಆರಗ ಎಂಬ ವಿಶಾಲವಾದ ಊರಿನ ಹೊರಭಾಗದಲ್ಲಿ ಇದ್ದ ದೊಡ್ಡ ಬಯಲೇ ಇಂದಿನ “ದಾವಣೀಬೈಲು”. ಇಲ್ಲಿ ಬರುವ ಬೇರೆ ಬೇರೆ ಜಾನುವಾರುಗಳ ಬಾಯಾರಿಕೆ ನೀಗಿಸಲು ಬೃಹತ್ ಪುಷ್ಕರಣಿಯನ್ನು ರಚಿಸಿದರೆ ಇನ್ನೊಂದು ಕಡೆ ವ್ಯಾಪಾರ, ವ್ಯವಹಾರ, ಹಣಕಾಸು ಸಭೆಗಳಿಗೆ ಸಾಕ್ಷಿಯಾಗಿದ್ದು “ಶ್ರೀ ಕಪಿಲೇಶ್ವರ ದೇವಸ್ಥಾನ”. ಹೊಯ್ಸಳ ಮತ್ತು ವಿಜಯನಗರದ ಸಾಮ್ರಾಜ್ಯದಲ್ಲಿ ಆರಗ ಮತ್ತು ದಾವಣೀಬೈಲು ಪ್ರಮುಖ ಪಾತ್ರ ವಹಿಸುತ್ತದೆ. 1500ರ ನಂತರದಲ್ಲಿ ಶ್ರೀ ಸದಾಶಿವ ನಾಯಕರು ವಿಜಯನಗರದ ರಾಜರ ಅಪ್ಪಣೆ ಪಡೆದು ಶಕ್ತಿ ಕೇಂದ್ರವಾಗಿದ್ದ ಆರಗ ಬದಲಿಗೆ ಇಕ್ಕೇರಿಯಿಂದ ಆಳ್ವಿಕೆಯನ್ನು ಮಾಡುತ್ತಾನೆ. 1565ರ ತಾಳಿಕೋಟೆ ಯುದ್ದದ ನಂತರ ಕೆಳದಿಯ ನಾಯಕರು ಸ್ವತಂತ್ರ್ಯವಾಗಿ ರಾಜ್ಯಭಾರ ಮಾಡಲು ಶುರು ಮಾಡಿದ ಮೇಲೆ, ಆರಗ ಮತ್ತು ದಾವಣೀಬೈಲು ತನ್ನ ಅಸ್ಥಿತ್ವವನ್ನು ಕಳೆದು ಕೊಳ್ಳತ್ತದೆ.

ಕಪಿಲೇಶ್ವರ ದೇವಸ್ಥಾನದ ವಿನ್ಯಾಸ ಮತ್ತು ಶಿಲ್ಪಶಾಸ್ತ್ರ:-

ಈ ದೇವಸ್ಥಾನ ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಿದ್ದು, ಇದರ ವಾಸ್ತುಶಿಲ್ಪ ೧೨ನೇ ಶತಮಾನದ ಹೊಯ್ಸಳ ಶೈಲಿಯಲ್ಲಿ ಇದೆ. ದೇವಸ್ಥಾನದ ಪೀಠದಲ್ಲಿ ಉಪಪೀಠ, ಜಗತಿ, ಕುಮುದ, ಕಂಠ, ಕಪೋತದ ಅಂಶಗಳು ಒಳಗೊಂಡಿದೆ. ದೇವಸ್ಥಾನ ಮೂರು ಪ್ರಮುಖ ಭಾಗದಲ್ಲಿ ಅಂದರೆ ಗರ್ಭಗೃಹ, ನವರಂಗ ಮತ್ತು ಮುಖ್ಯಮಂಟಪಯಂದು ವಿಂಗಡಿಸಲಾಗಿದೆ. ವಿಶಾಲವಾದ ಮುಖ್ಯ ಮಂಟಪಕ್ಕೆ ಪೂರ್ವ, ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ಮೆಟ್ಟಿಲು ಮೂಲಕ ಒಳಗೆ ಬರಲು ಅವಕಾಶ ಇರುತ್ತದೆ. ಮುಖ್ಯ ಮಂಟಪದ ಪೂರ್ವ, ಉತ್ತರ ಮತ್ತು ದಕ್ಷಿಣದಲ್ಲಿ ಕಲ್ಲಿನ ಆಸನಗಳನ್ನು ಮಾಡಲಾಗಿದ್ದು, ಮಂಟಪದ ಹೊರ ಗೋಡೆಯ ಪ್ಯಾರಾಪೆಟ್ ಗೋಡೆಯನ್ನು ಬೆನ್ನಸರೆಯಾಗಿ ಬಳಸಲಾಗಿದೆ. ಮಂಟಪದಲ್ಲಿ ಆರು ಸಾಲು ಇದ್ದು, ಒಂದು ಸಾಲಿನಲ್ಲಿ 5 ರಂತೆ, ಒಟ್ಟು 30 ಕಂಬಗಳಿವೆ. ಕಲ್ಲಿನ ಆಸನದ ಮೇಲೆ 10 ಅರ್ಧ ಕಂಬಗಳಿದ್ದು ಉಳಿದ 20 ಕಂಬಗಳು ಪೂರ್ಣ ಪ್ರಮಾಣದ್ದಾಗಿದೆ. ಈ ಕಂಬಗಳು ಬೇರೆ ಬೇರೆ ಆಕಾರದಲ್ಲಿ ಇದ್ದು, ಇದನ್ನು ಚಕ್ರಯಂತ್ರದ ಮೂಲಕ ಹೊಳಪಾಗಿಸಲಾಗಿದೆ. ಮುಖ್ಯ ಮಂಟಪದಿಂದ ನವರಂಗಕ್ಕೆ ಹೋಗುವ ಬಾಗಿಲ ಅಕ್ಕಪಕ್ಕದಲ್ಲಿ ಜಲರಂಧ್ರವನ್ನು ಕಲ್ಪಿಸಲಾಗಿದೆ. ನವರಂಗದಲ್ಲಿ ಒಟ್ಟು 4 ಕಂಬಗಳಿದ್ದು, 9 ಭಾಗಗಳಿವೆ. ನವರಂಗದ ನಂತರ ಇರುವುದೇ ಗರ್ಭಗೃಹ, ಇಲ್ಲಿ ಕಪಿಲೇಶ್ವರನ ಲಿಂಗವನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ದೇವಸ್ಥಾನದ ಮುಖ್ಯ ಮಂಟಪದ ಸುತ್ತಲೂ ತೆರೆದಿದ್ದು, ಗಾಳಿ ಮತ್ತು ಬೆಳಕಿಗೆ ಮುಕ್ತ ಅವಕಾಶ ಇರುತ್ತದೆ. ದೇವಸ್ಥಾನದ ಮೇಲ್ಚಾವಣಿಯಲ್ಲಿ ಮಳೆ ನೀರು ಸರಾಗವಾಗಿ ಕೆಳಕ್ಕೆ ಹರಿಯಲು ಹೊರ ಇಳಿಜಾರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ದೇವಸ್ಥಾನದ ಗರ್ಭಗೃಹದ ಮೇಲ್ಬಾಗದಲ್ಲಿ ವಿಮಾನ ಶಿಖರ ಇರುವುದಿಲ್ಲ, ಬಹುಶಃ ಇದು ಬಿದ್ದಿರಬಹುದು. ಮುಖ್ಯ ಮಂಟಪದ ಹೊರಗಡೆಯ ಬಿತ್ತಿಯ ಮೇಲೆ ಬಗೆ ಬಗೆಯ ಉತ್ತರ ಮತ್ತು ದಕ್ಷಿಣ ಭಾರತದ ಹಲವು ಗೋಪುರದ ವಿನ್ಯಾಸವನ್ನು ಕೆತ್ತಲಾಗಿದೆ. ಒಂದು ಬಿತ್ತಿ ಪಟ್ಟಿಯಲ್ಲಿ, ನಾಯಿ ಮತ್ತು ಹುಲಿಯನ್ನು ಪಳಗಿಸಿ ಅದರ ಕೊರಳಿಗೆ ಪಟ್ಟಿಯನ್ನು ಧರಿಸಿಲಾಗಿದೆ. ಇದೆ ಪಟ್ಟಿಯಲ್ಲಿ ಒಬ್ಬ ಯೋಗಿ ಒಂದು ಚಂಡಿನ ಮೇಲೆ ಹಲಗೆಯನ್ನು ಇಟ್ಟಿ ಅದರ ಮೇಲೆ ಕಾಲನ್ನು ಮಡಿಸಿ, ಕಾಲು ಮತ್ತು ಸೊಂಟಕ್ಕೆ ಪಟ್ಟಿಯನ್ನು ಕಟ್ಟಿಕೊಂಡು ಯೋಗಮುದ್ರೆಯಲ್ಲಿ ಇರುವುದು ಆಕರ್ಷಕವಾಗಿದೆ. ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಇಲಾಖೆಯವರು ಈ ಹಿಂದೆ ಈ ದೇವಸ್ಥಾನದ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾಗ, ದೇವಸ್ಥಾನದ ತಳಪಾಯದಲ್ಲಿ ಭಗ್ನಗೊಂಡ ನಂದಿಯ ವಿಗ್ರಹ ಸಿಕ್ಕಿದ್ದು, ಇದರ ಕಾಲ ಅವಧಿ ಕಲ್ಯಾಣ ಚಾಳುಕ್ಯರ ಕಾಲದ್ದಿರಬಹುದು ಎಂದು ಶ್ರೀ ಡಾ|| ಜಗದೀಶ್ ಅಗಸಿಭಾಗಿಲು ಅವರು ಅಭಿಪ್ರಾಯ ಪಡುತ್ತಾರೆ. ಇವರ ಪ್ರಕಾರ ಈ ದೇವಸ್ಥಾನ ಬಹುಶಃ ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಕಟ್ಟಿದ್ದು ನಂತರ ಹೊಯ್ಸಳರ ಕಾಲದಲ್ಲಿ ಇದನ್ನು ಜೀರ್ಣೋದ್ಧಾರ ಮಾಡಲಾಗಿದೆ. ದೇವಸ್ಥಾನದ ಪೂರ್ವಭಾಗದಲ್ಲಿ ಪುಷ್ಕರಣಿಗೆ ಹೋಗಲು ಮೆಟ್ಟಿಲುಗಳನ್ನು ಕಲ್ಪಿಸಲಾಗಿದ್ದು ಇಂದು ಅದು ಛಿದ್ರ ಛಿದ್ರವಾಗಿ ಬಿದ್ದಿದೆ. ಪುಷ್ಕರಣಿಯ ಸುತ್ತಲೂ ಜಂಬು ಇಟ್ಟಿಗೆಯಿಂದ ಗೋಡೆಯನ್ನು ನಿರ್ಮಾಣ ಮಾಡಲಾಗಿದೆ.

ಇಂದಿಗೂ ತೀರ್ಥಹಳ್ಳಿ ತಾಲ್ಲೂಕಿನ ಅಗ್ರಹಾರ ಹೋಬಳಿಯ ಮರಗಳಲೆ ಗ್ರಾಮದ ಸರ್ವ ಸಂಖ್ಯೆ 6ರಲ್ಲಿ ಇರುವ ದಾವಣೀಬೈಲಿನಲ್ಲಿ, 110 ಎಕರೆ ಮೈನರ್ ಫಾರೆಸ್ಟ್ ಇದ್ದರೆ 18 ಎಕರೆ ಇಂದಿಗೂ ದನಕ್ಕೆ ಮುಫತ್ತು ಆಗಿ ಇಡಲಾಗಿದೆ. ಸರಿಸುಮಾರು ಐನೂರು ವರ್ಷಗಳ ವರೆಗೆ ವ್ಯಾಪಾರ ಮತ್ತು ವ್ಯವಹಾರಕ್ಕೆ ಪ್ರಸಿದ್ಧಿಯನ್ನು ತಂದುಕೊಟ್ಟಿದ ದಾವಣೀಬೈಲು ಮತ್ತು ಶ್ರೀ ಕಪಿಲೇಶ್ವರ ದೇವರು, ಇಂದು ಅಜ್ಞಾತವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಿಂತಿದೆ.

ಮಾಹಿತಿ ಮತ್ತು ಲೇಖನ:- ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ

Tags: agumbeChikkamagalurudavani bailuDavanibailuGuddekoppahistoryhoisalahoisala templehulikalkapileshwara templekarnatakakollurukonandurushivamoggathirthahalli
ShareTweetSendShare
Join us on:

Related Posts

Just one betel leaf is enough. See how you can pay off even if you have a debt of lakhs, if not crores!

ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!

by admin
February 3, 2026
0

ಜ್ಯೋತಿಷ್ಯ ಶಾಸ್ತ್ರವು ಒಬ್ಬ ಮನುಷ್ಯನ ಹುಟ್ಟಿನಿಂದ ಸಾ’ವಿ’ನ ತನಕ ಬರುವ ಆತನ ಪಾಲಿಗೆ ಬರುವ ಕ’ಷ್ಟ, ಸುಖ, ದುಃ’ಖ ಗಂಡಾಂತರಗಳ ಬಗ್ಗೆ ಮಾಹಿತಿ ಕೊಡುತ್ತದೆ. ಇದು ನಮ್ಮ...

Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

by admin
February 3, 2026
0

ಭರತ ಖಂಡದಲ್ಲಿ ದಾಯಾದಿಗಳ ಕದನ ಇನ್ನು ನಿನ್ನೆಯದಲ್ಲ. ಮಹಾಭಾರತದ ಕುರುಕ್ಷೇತ್ರದಿಂದ ಇಂದಿನ ಗಡಿ ವಿವಾದದ ತನಕದ ಇತಿಹಾಸವನ್ನು ನೋಡಿದಾಗ ದಾಯಾದಿ ಕಲಹ ಬಿಡಿಸಲಾಗದ ಒಗ್ಗಟ್ಟಿನಂತಿದೆ. ಅದು ರಾಜ್ಯವಂಶಸ್ಥರು...

Carrying these two items while going to the temple of the ancestral deity can help us move to the next stage of progress in our lives

ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ಈ ಎರಡು ವಸ್ತುಗಳನ್ನು ಹೊತ್ತುಕೊಂಡರೆ ನಮ್ಮ ಜೀವನದಲ್ಲಿ ಮುಂದಿನ ಪ್ರಗತಿಯ ಹಂತಕ್ಕೆ ಹೋಗಬಹುದು.

by admin
February 3, 2026
0

ಜೀವನ ಯಶಸ್ಸಿನ ಕುಲದೈವಂ ಹೂಗಳು ಈ ಜಗತ್ತಿನಲ್ಲಿ ಹುಟ್ಟಿದ ಯಾರಾದರೂ ಪ್ರತಿ ಸೆಕೆಂಡ್ ಮತ್ತು ಪ್ರತಿ ದಿನವೂ ಯಾವುದಾದರೊಂದು ರೂಪದಲ್ಲಿ ಸ್ವಲ್ಪ ಪ್ರಗತಿಯನ್ನು ಸಾಧಿಸಬೇಕು. ಸೂಕ್ತ ಪ್ರಯತ್ನಗಳು...

ನಾಯಕರ ಮುಂದೆ ಗ್ಲಾಮರಸ್ ಆಗಿ ಕಾಣಲು ಹೋಗಬೇಡಿ: ಮೋಟಮ್ಮ ಖಡಕ್ ವಾರ್ನಿಂಗ್

ನಾಯಕರ ಮುಂದೆ ಗ್ಲಾಮರಸ್ ಆಗಿ ಕಾಣಲು ಹೋಗಬೇಡಿ: ಮೋಟಮ್ಮ ಖಡಕ್ ವಾರ್ನಿಂಗ್

by Shwetha
February 3, 2026
0

ಮಂಗಳೂರು: ರಾಜಕೀಯದಲ್ಲಿ ಮಹಿಳೆಯರ ಸ್ಥಾನಮಾನ, ನಡವಳಿಕೆ ಹಾಗೂ ಪ್ರಸ್ತುತ ಸಮಾಜದಲ್ಲಿ ಹೆಣ್ಣುಮಕ್ಕಳ ಪಾಲನೆ ಕುರಿತಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಮೋಟಮ್ಮ ಅವರು ನೀಡಿರುವ ಹೇಳಿಕೆ ಈಗ...

ದುಡ್ಡಿದ್ದವರಿಗೆ ಮಾತ್ರ ದರ್ಶನ ಕೊಡ್ತಾರಾ ಗಿಲ್ಲಿ ನಟ ಅತಿಯಾದ ಅಭಿಮಾನವೇ ಈಗ ಸೆಲೆಬ್ರಿಟಿಗೆ ಮುಳುವಾಯ್ತಾ!

ದುಡ್ಡಿದ್ದವರಿಗೆ ಮಾತ್ರ ದರ್ಶನ ಕೊಡ್ತಾರಾ ಗಿಲ್ಲಿ ನಟ ಅತಿಯಾದ ಅಭಿಮಾನವೇ ಈಗ ಸೆಲೆಬ್ರಿಟಿಗೆ ಮುಳುವಾಯ್ತಾ!

by Shwetha
February 3, 2026
0

ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುವ ಮಾತು ಅಕ್ಷರಶಃ ಸತ್ಯ. ಅದರಲ್ಲೂ ಅಭಿಮಾನದ ವಿಷಯದಲ್ಲಿ ಇದು ನೂರಕ್ಕೆ ನೂರರಷ್ಟು ಅನ್ವಯವಾಗುತ್ತದೆ. ಅಭಿಮಾನಿಗಳನ್ನು ದೇವರು ಎನ್ನುತ್ತಾರೆ, ಆದರೆ ಅದೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram