ಅಸ್ಸಾಂನಲ್ಲಿ ಕೋಮು ಸಂಘರ್ಷ; ಸೋನಿತ್‌ಪುರದಲ್ಲಿ ಕರ್ಫ್ಯೂ ಜಾರಿ
ಗುವಾಹಟಿ, ಅಗಸ್ಟ್ 6: ಅಸ್ಸಾಂನಲ್ಲಿ ಎರಡು ಸಮುದಾಯಗಳಿಗೆ ಸೇರಿದ ಜನರ ನಡುವೆ ಘರ್ಷಣೆ ಸಂಭವಿಸಿದ್ದು, ಸೋನಿತ್‌ಪುರ ಜಿಲ್ಲೆಯ ಕೆಲವು ಭಾಗಗಳಲ್ಲಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ.
ಅಯೋಧ್ಯೆಯ ರಾಮ ಮಂದಿರದ ಶಿಲಾನ್ಯಾಸ ಸಮಾರಂಭವನ್ನು ಆಚರಿಸಲು ಭಜರಂಗದಳ ಆಯೋಜಿಸಿದ್ದ ಬೈಕು ಜಾಥದಲ್ಲಿ ಬುಧವಾರ ರಾತ್ರಿ ಹಿಂಸಾಚಾರ ಭುಗಿಲೆದ್ದಿತು.
ಐಎಎಸ್ ಅಧಿಕಾರಿ ಜನರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಾಗ ದುಷ್ಕರ್ಮಿಗಳು ಕಾರಿನೊಂದಿಗೆ ಕೆಲವು ದ್ವಿಚಕ್ರ ವಾಹನಗಳನ್ನು ಸುಟ್ಟುಹಾಕಿದರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಮನ್ವೇಂದ್ರ ಪ್ರತಾಪ್ ಸಿಂಗ್ ಅವರ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ಲಾಠಿ ಬಳಸಿ ಮತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲಾಯಿತು . ಬಿಜೆಪಿಯ ಸ್ಥಳೀಯ ಶಾಸಕ ಅಶೋಕ್ ಆನಂದ್ ಸಿಂಘಾಲ್ ಮತ್ತು ಆಡಳಿತದ ಹಿರಿಯ ಅಧಿಕಾರಿಗಳು ಗುರುವಾರ ಪ್ರದೇಶಗಳಿಗೆ ಭೇಟಿ ನೀಡಿದರು.