ಇತ್ತೀಚೆಗೆ ನಟ ನಟಿಯರು ಆತ್ಮಹತ್ಯೆ ಮಾಡುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಇನ್ನೂ 2 ತಿಂಗಳುಗಳೇ ಕಳೆದಿಲ್ಲ. ಅಷ್ಟರಲ್ಲಾಗ್ಲೇ ಮತ್ತೋರ್ವ ನಟ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಿರುತೆರೆಯಲ್ಲಿ ಅನೇಕ ಧಾರವಾಹಿಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದ ನಟ ಸಮೀರ್ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ
ಮಲಾದ್ ನಲ್ಲಿರುವ ಅವರ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ ಶರ್ಮಾ ಅವರು ಕಳೆದ 2-3 ದಿನಗಳ ಹಿಂದೆಯೇ ನೇಣಿಗೆ ಶರಣಾಗಿದ್ದು, ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. 44 ವರ್ಷದ ಸಮೀರ್ ಶರ್ಮಾ ಅವರು ಈ ಹಿಂದೆ ನೇಹಾ ಸಿಎಚ್‌ಎಸ್ ಕಟ್ಟಡದಲ್ಲಿ ವಾಸವಾಗಿದ್ದರು. ಬಳಿಕ ಫೆಬ್ರವರಿಯಲ್ಲಿ ಈ ಬಾಡಿಗೆ ಫ್ಲ್ಯಾಟ್ಗೆ ಸ್ಥಳಾಂತರಗೊಂಡಿದ್ದರು. ಮೊದಲಿಗೆ ಶರ್ಮಾ ಅವರ ದೇಹವನ್ನು ನೋಡಿರುವು ಸೆಕ್ಯುರಿಟಿ ಗಾರ್ಡ್. ಕಿಟಕಿಯಲ್ಲಿ ಶವ ಫ್ಯಾನ್ ಗೆ ನೇತಾಡುತ್ತಿರುವುದನ್ನು ಗಮಿಸಿದ ಸೆಕ್ಯುರಿಟಿ ಗಾರ್ಡ್ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.
ಕಹಾನಿ ಘರ್ ಘರ್ ಕೀ , ರಿಶ್ತೆ ಪ್ಯಾರ್ ಕೆ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ನಂತಹ ಹಲವು ಖ್ಯಾತ ಧಾರವಾಹಿಗಳಲ್ಲಿ ನಟಿಸಿದ್ದ ಶರ್ಮಾ ಅವರು ಕೆಲ ಚಿತ್ರಗಳಲ್ಲು ಕಾಣಿಸಿಕೊಂಡಿದ್ದಾರೆ. ಇನ್ನೂ ಶಶರ್ಮಾ ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನೂವರೆಗೂ ಬಹಿರಂಗವಾಗಿಲ್ಲ. ಪ್ರಕರಣ ದಾಖಲಿಸಿಕೊಮಡಿರುವ ಪೊಲಿಸರು ತನಿಖೆ ಆರಂಭಿಸಿದ್ದಾರೆ.








