ರಾಜ್ಯದಲ್ಲಿ ಮಹಾಮಳೆಯಿಂದ ಸಂಭವಿಸಬಹುದಾದ ಪ್ರವಾಹದ ಪರಿಸ್ಥಿತಿ ಕುರಿತು ಕಂದಾಯ ಸಚಿವರಾದ ಆರ್ ಅಶೋಕ್ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. “ಈ ಬಗ್ಗೆ ನಾನು ರಾತ್ರಿ ಜಿಲ್ಲಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದೇನೆ. ಅವರಿಗೆ ಎಲ್ಲಾ ಸೂಚನೆಗಳನ್ನ ನೀಡಿದ್ದೇವೆ. ಈಗಾಗಲೇ ಹಣವನ್ನ ರಿಲೀಸ್ ಮಾಡಲಾಗಿದೆ. ಹಿಂದೆ ಸಂಪುಟ ಆಗಿರಲಿಲ್ಲ,ಸಿಎಂ ಒಬ್ಬರೇ ಇದ್ದರು. ಈಗ ಹಾಗಿಲ್ಲ. ಡ್ಯಾಂ ಗಳಿಗೆ ನೀರು ಬಂದರೆ ಬಿಡೋಕೆ ಸೂಚಿಸಿದ್ದೇನೆ.
ಕೋಯ್ನಾದಿಂದ ನೀರು ಬಿಡುವ ಆಪತ್ತು ಇಲ್ಲ. ಕೊಡಗಿನಲ್ಲಿ ಮಳೆಯಾದಾಗ ಜನರನ್ನಶಿಫ್ಟ್ ಮಾಡಿದ್ದೆವು. ಗುಡ್ಡಕುಸಿತವಾದ ಜಾಗದಲ್ಲಿ ಕುಟುಂಬ ಸಿಕ್ಕಿದೆ. ಅಲ್ಲಿಗೆ ನಮ್ಮಎನ್ ಡಿಆರ್ ಎಫ್ ತಂಡ ಹೋಗಿದೆ. ನಾನು ಕೊಡಗು ಜಿಲ್ಲೆಗೆ ಭೇಟಿ ನೀಡ್ತೇನೆ. ನಾವು ಎಲ್ಲಾ ಮುಂಜಾಗ್ರತೆ ಕ್ರಮ ತೆಗೆದುಕೊಳ್ತೇವೆ. ಸಿದ್ದರಾಮಯ್ಯ ಅವರು ಕೂಡ ಸಲಹೆ ಕೊಟ್ಟಿದ್ದಾರೆ” ಎಂದು ಸಚಿವ ಆರ್.ಅಶೋಕ್ ಅವರು ತಿಳಿಸಿದ್ದಾರೆ.








