ಮುಂಬೈ ಗಾಳಿ ಮಳೆಗೆ ತಾಳೆ ಮರ ಓಲಾಡುತ್ತಿರುವ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ
ಮುಂಬೈ, ಅಗಸ್ಟ್ 6: ನಿನ್ನೆಯಿಂದ, ಸಾಮಾಜಿಕ ಜಾಲತಾಣದಲ್ಲಿ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿರುವ ವಿಡಿಯೋಗಳು ಸಾಕಷ್ಟು ವೈರಲ್ ಆಗಿದೆ. ಭಾರಿ ಗಾಳಿಗೆ ತಾಳೆ ಮರವೊಂದು ಅತ್ತ ಇತ್ತ ಓಲಾಡುವ ವಿಡಿಯೋ ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರಾ ಸೇರಿದಂತೆ ಹಲವಾರು ಜನರ ಗಮನ ಸೆಳೆದಿದೆ.
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಆ ವೀಡಿಯೋವನ್ನು ಹಂಚಿಕೊಂಡಿದ್ದು ಜೊತೆಗೆ ಅದಕ್ಕೊಂದು ಶೀರ್ಷಿಕೆಯನ್ನು ಕೊಟ್ಟಿದ್ದಾರೆ.
ಮುಂಬೈ ಮಳೆಯ ಬಗ್ಗೆ ಹರಿದಾಡುತ್ತಿರುವ ಎಲ್ಲಾ ವೀಡಿಯೋಗಳಲ್ಲಿ ಈ ವೀಡಿಯೋ ಅತ್ಯಂತ ನಾಟಕೀಯವಾಗಿದೆ. ಆ ತಾಳೆ ಮರ ತಾಂಡವ ನೃತ್ಯಮಾಡುತ್ತಿದೆಯೇ ಅಥವಾ ಸಂತೋಷದಿಂದ ನೃತ್ಯ ಮಾಡುತ್ತಿದೆಯೇ ಅಥವಾ ಇದು ಪ್ರಕೃತಿ ವಿಕೋಪದ ಮುನ್ಸೂಚನೆಯೇ ಎಂದು ನಾವು ಕಂಡುಹಿಡಿಯಬೇಕು ಎಂದು ಅವರು ಬರೆದಿದ್ದಾರೆ.
https://twitter.com/anandmahindra/status/1291248988725772288
ಈ ಕ್ಲಿಪ್ ಅನ್ನು ಮನೆಯೊಳಗಿನಿಂದ ಚಿತ್ರೀಕರಿಸಲಾಗಿದೆ ಮತ್ತು ಅದರಲ್ಲಿ ಎತ್ತರದ ತಾಳೆ ಮರ ಬೀಸುತ್ತಿರುವ ಗಾಳಿಗೆ ಅತ್ತ ಇತ್ತ ಓಲಾಡುತ್ತಿದೆ.








