ಅಯೋಧ್ಯೆ ರಾಮಮಂದಿರದ ಮೊದಲ ಪ್ರಸಾದ ಸ್ವೀಕರಿಸಿದ ದಲಿತ ಕುಟುಂಬ
ಅಯೋಧ್ಯೆ, ಅಗಸ್ಟ್ 7: ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರದ ಭವ್ಯ ಭೂಮಿ ಪೂಜೆ ಸಮಾರಂಭದ ಮೊದಲ ಪ್ರಸಾದವನ್ನು ದಲಿತ ಕುಟುಂಬಕ್ಕೆ ನೀಡಲಾಗಿದೆ.
ಆ ಕುಟುಂಬವು ಮಹಾಬೀರ್ ಅವರದ್ದಾಗಿದ್ದು, ಅಯೋಧ್ಯೆಯಲ್ಲಿ ಇತರರಿಗೆ ಪ್ರಸಾದ ವಿತರಣೆ ಪ್ರಾರಂಭವಾದ ನಂತರ ಅವರಿಗೆ ಪ್ರಸಾದ ಜೊತೆಗೆ ರಾಮ್ ಚರಿತ್ ಮನಸ್ ಮತ್ತು ತುಳಸಿ ಮಾಲಾ ನೀಡಲಾಗಿದೆ.
ಮಹಾಬೀರ್ ಅದೇ ವ್ಯಕ್ತಿಯಾಗಿದ್ದು, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಈ ಮೊದಲು ಮಹಾಬೀರ್ ಭೇಟಿಯಾಗಿದ್ದರು.
ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ನೆರವೇರಿಸಿದರು. ಪ್ರಧಾನಿ ಅವರಲ್ಲದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತರಿದ್ದರು. ಮಂದಿರದ ನಿರ್ಮಾಣ ಕಾರ್ಯ ಶನಿವಾರದಿಂದ ಪ್ರಾರಂಭವಾಗಲಿದೆ.