ಶಿವಮೊಗ್ಗ : ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಸಮರ್ಥಿಸಿಕೊಂಡ ರೀತಿಯಲ್ಲಿ ಹೇಳಿಕೆ ನೀಡಿರುವ ಸಚಿವ ಕೆ. ಎಸ್ ಈಶ್ವರಪ್ಪ ಅವರ ವಿರುದ್ಧ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೋಮು ಪ್ರಚೋಧನಕಾರಿ ಹಾಗು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ವಿರೋಧಿಸಿ ಎಸ್ ಡಿ ಪಿ ಐ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಅಲ್ದೇ ಕೋಮು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ ಕೆಎಸ್ ಈಶ್ವರಪ್ಪನವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿರುವುದು ತುಂಬಾ ಸಂತೋಷಕೊಟ್ಟಿದೆ. ಮಸೀದಿಗಳು ಗುಲಾಮಗಿರಿಯ ಸಂಕೇತ, ಕಾಶಿ ಹಾಗೂ ಮಥುರಾದಲ್ಲಿ ಕೂಡ ಮಸೀದಿಗಳಿವೆ ಅಲ್ಲಿಯೂ ಕೂಡ ಇದೇ ರೀತಿ ಭವ್ಯ ಮಂದಿರಗಳು ನಿರ್ಮಾಣವಾಗಬೇಕಾಗಿದೆ ಎಂದು ಹೇಳುವುದರ ಮೂಲಕ ಮಸೀದಿಗಳನ್ನು ಧ್ವಂಸ ಮಾಡಬೇಕೆಂದು ಸಾರ್ವಜನಿಕವಾಗಿ ಪ್ರಚೋದನೆ ನೀಡಿರುವುದನ್ನು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಈಶ್ವರಪ್ಪ ಅವರು ಮಾತಿನ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದು, “ಲಾಟಿ, ಗೋಲಿ ಖಾಯೆಂ ಹೇ ಮಂದಿರ್ ವಹೀ ಬನಾಯೆಂಗೆ” ಎಂಬ ಘೋಷಣೆಯನ್ನು ಕೂಗುತ್ತಾ 1992 ಡಿಸೆಂಬರ್ 6 ರಂದು ನಾನು ಕೂಡ ಅಯೋಧ್ಯೆಗೆ ಹೋಗಿದ್ದೆ, ಇವತ್ತು ಅಲ್ಲಿ ಮಂದಿರ ನಿರ್ಮಾಣವಾಗುತ್ತಿರುವುದು ನೋಡಿ ತುಂಬಾ ಸಂತೋಷ ವಾಗುತ್ತಿದೆ. ಅದೇ ರೀತಿ ಕಾಶಿ ಹಾಗೂ ಮಥುರಾಗೂ ಹೋಗಿದ್ದೇನೆ ಅಲ್ಲಿಯ ಮಸೀದಿಗಳನ್ನು ನೋಡುವಾಗ ಗುಲಾಮಗಿರಿಯ ನೆನಪಾಗುತ್ತದೆ. ಅಲ್ಲಿಯೂ ಕೂಡ ಇದೇ ರೀತಿ ಮಸೀದಿಗಳು ಹೋಗಿ ಮಂದಿರಗಳು ನಿರ್ಮಾಣವಾಗಬೇಕಾಗಿದೆ. ಎಂದು ಹೇಳುವುದರ ಮೂಲಕ ಮಸೀದಿಗಳನ್ನು ಧ್ವಂಸಗೊಳಿಸಲು ಪ್ರಚೋದನೆಯನ್ನು ನೀಡಿದ್ದಾರೆ. ಇದೀಗ ಈಶ್ವರಪ್ಪ ಅವರ ಹೇಳಿಕೆ ಖಂಡಿಸಿ ಇಂತಹ ಹೇಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಸಮಿತಿ ಪ್ರತಿಭಟಿಸಿದೆ.
ಕಾಮನ್ವೆಲ್ತ್ ಗೇಮ್ಸ್ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ
ಕಾಮನ್ವೆಲ್ತ್ ಗೇಮ್ಸ್ ; ಪ್ಯಾರಾ ಅಥ್ಲೀಟ್ ಶಿಲ್ಪಾ ಅವರನ್ನು ಗೌರವಿಸಿದ ಹೆಚ್.ಡಿ.ಕುಮಾರಸ್ವಾಮಿ ನವದೆಹಲಿಯ ಸಚಿವರ ನಿವಾಸದಲ್ಲಿ ಭೇಟಿ; ನಿಮ್ಮ ಸಾಧನೆ ಪ್ರೇರಣಾದಾಯಕ ಎಂದ ಕೇಂದ್ರ ಸಚಿವರು ಶಿಲ್ಪಾ...








