ಬಳ್ಳಾರಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಮರ್ಥಿಸಿಕೊಂಡ ರೀತಿಯ ಕೋಮು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಸಚಿವ ಈಶ್ವರಪ್ಪ ಅವರ ವಿರುದ್ಧ ಕಾಂಗ್ರೆಸ್ ರಾಜ್ಯಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪ ಅವರನ್ನು ಕೂಡಲೇ ಅರೆಸ್ಟ್ ಮಾಡಬೇಕು. ಪೊಲೀಸ್ ಅಧಿಕಾರಿಗಳು ಸುಮೋಟೋ ಕೇಸ್ ದಾಖಲಿಸಲಿ. ಕಾಶಿ ಮಥುರಾದ ಮಸೀದಿಗಳನ್ನು ಸಹ ಒಡೆಯುತ್ತೇವೆ ಅಂತ ಈಶ್ವರಪ್ಪ ಹೇಳುತ್ತಾರೆ.
ಒಬ್ಬ ಜವಾಬ್ದಾರಿ ಮಂತ್ರಿಯಾಗಿ ಇಂಥ ಹೇಳಿಕೆ ಕೊಡುವುದು ಎಷ್ಟು ಸೂಕ್ತ. ಜನರನ್ನು ಎತ್ತಿಕಟ್ಟುವ ಹೇಳಿಕೆ ಕೊಡುವುದು ಈಶ್ವರಪ್ಪ ಅವರ ಜಾಯಮಾನ. ಕೋಮುದ್ವೇಷದ ಹೇಳಿಕೆ ಕೊಟ್ಟಿರುವ ಸಚಿವ ಈಶ್ವರಪ್ಪರನ್ನ ಅರೆಸ್ಟ್ ಮಾಡಬೇಕು. ಒಬ್ಬ ಜನಪ್ರತಿನಿಧಿ ಸಮಗ್ರತೆಯನ್ನು ಎತ್ತಿಹಿಡಿಯಬೇಕು. ಕೂಡಲೇ ಸಚಿವ ಈಶ್ವರಪ್ಪ ಅವರನ್ನು ಅರೆಸ್ಟ್ ಮಾಡಿ ಅವರ ರಾಜೀನಾಮೆ ಪಡೆಯಬೇಕು. ಸಿಎಂ ಯಡಿಯೂರಪ್ಪಗೆ ನಾನು ಆಗ್ರಹಿಸುತ್ತೇನೆ. ಸಚಿವ ಈಶ್ವರಪ್ಪ ಅವರನ್ನು ಅರೆಸ್ಟ್ ಮಾಡಬೇಕು. ಯಾರೋ ಒಬ್ಬ ಸಣ್ಣ ಟ್ವೀಟ್ ಮಾಡಿದರೆ ಅರೆಸ್ಟ್ ಮಾಡ್ತಾರೆ. ಸಚಿವರೇ ಕೋಮುದ್ವೇಷದ ಹೇಳಿಕೆ ಕೊಡುತ್ತಾರೆ. ಇದು ಸುಮೋಟೋ ಕೇಸ್ ಹೌದೋ ಅಲ್ವೋ. ಕೂಡಲೇ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜಿನಾಮೆ ಕೊಡಬೇಕು ಎಂದು ಕಿಡಿಕಾರಿದ್ದಾರೆ.
ರಾಜ್ಯದ ಕೈಗಾರಿಕಾ ಕಾರ್ಮಿಕರಿಗೆ ಬಂಪರ್ ಸಿಹಿಸುದ್ದಿ: ಇನ್ನು ಫ್ಯಾಕ್ಟರಿ ಪಕ್ಕದಲ್ಲೇ ಸುಸಜ್ಜಿತ ಸೂರು, ನೂತನ ಶ್ರಮಿಕ್ ನಿವಾಸ್ ನೀತಿಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳ ನಿರ್ಮಾಣ!
ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯದಲ್ಲಿ ಬೆವರು ಸುರಿಸಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ತಾವು ಕೆಲಸ ಮಾಡುವ ಕಾರ್ಖಾನೆಗಳ ಸಮೀಪದಲ್ಲೇ ಗುಣಮಟ್ಟದ ಹಾಗೂ ಸುಸಜ್ಜಿತ ವಸತಿ ಸೌಕರ್ಯ ಕಲ್ಪಿಸುವ...








