ಚಾಮರಾಜನಗರ: ರೈತರ ಉದ್ಯೋಗ ಕಸಿದರೇ ಸರ್ಕಾರಕ್ಕೆ ಅಟ್ಟಾಡಿಸಿ ಹೊಡಿತೀವಿ ಎಂದು ರಾಜ್ಯ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಚಾಮರಾಜನಗರದಲ್ಲಿ ಭೂ ಸುಧಾರಣೆ , ವಿದ್ಯುತ್ ಕಾಯ್ದೆಗಳ ಕುರಿತು ಎಪಿಎಂಸಿಯಲ್ಲಿ ರೈತರ ಸಭೆ ನಡೆಸಿದ ಬಳಿಕ ಮಾತನಾಡಿರುವ ಅವರು ರೈತರ ಉದ್ಯೋಗ ಕಸಿಯುವಂತಹ ಕಾನೂನುಗಳನ್ನು ಜಾರಿಗೆ ತಂದರೆ ಸರ್ಕಾರ ನಡೆಸುವವರಿಗೆ ಅಟ್ಟಾಡಿಸಿ ಕೊಂಡು ಹೊಡೆಯ ಬೇಕಾಗುತ್ತದೆ. ಭಾರತದ ಆರ್ಥಿಕತೆ ಕೃಷಿ ಕ್ಷೇತ್ರದ ಮೇಲೆ ನಿಂತಿದೆ. ಕೃಷಿಕರಿಗೆ ಮಾರಕವಾದ, ಅನ್ನದಾತರ ಉದ್ಯೋಗ ಕಸಿಯುವಂತಹ ಕಾನೂನುಗಳನ್ನು ತಂದರೆ ಸರ್ಕಾರ ನಡೆಸುವವರಿಗೆ ಅಟ್ಟಾಡಿಸಿ ಹೊಡೆಯುತ್ತೇವೆ. ರೈತರ ಧ್ವನಿ ಎಂದು ಹೇಳುವ ಯಡಿಯೂರಪ್ಪ ಅವರ ಧ್ವನಿ ಎಲ್ಲಿ ಎಂದು ಕಿಡಿಕಾರಿದ್ದಾರೆ. ಅಲ್ದೇ ಕೊರೋನಾ ಲಾಕ್ಡೌನ್ ಹೊತ್ತಿನಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೊಳಿಸುವ ತುರ್ತೇನಿತ್ತು. ಈಗಿನ ಭೂ ಸುಧಾರಣೆ ಕಾಯ್ದೆ ರೈತರಿಗೆ ಬಗೆದ ದ್ರೋಹವಾಗಿದೆ. ಇದರಿಂದ ಸಣ್ಣ ರೈತರು ಬಹಳ ನೋವು ಅನುಭವಿಸಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ಭೂ ಸುಧಾರಣೆ ಕಾಯ್ದೆ ಮತ್ತು ವಿದ್ಯುತ್ ಕಾಯ್ದೆ ಬಗ್ಗೆ ಇನ್ನು ಕೂಡ ರೈತರಿಗೆ ಸರಿಯಾದ ಮಾಹಿತಿ ಇಲ್ಲ. ಈ ಕುರಿತು ಜಾಗೃತಿ ಮೂಡಿಸಿ ಹೋರಾಟ ನಡೆಸಲಿದ್ದು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲಾ ಎಂದು ಎಚ್ಚರಿಸಿದ್ದಾರೆ.
ಆರ್ಎಸ್ಎಸ್ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್ ಭಾಗವತ್ ವಿರುದ್ಧ ಬಿ ಕೆ ಹರಿಪ್ರಸಾದ್ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನೋಂದಣಿ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಸಿ...








