ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಪಾ ನುಯ್ ನಾಗರೀಕತೆಯ ಅಂತ್ಯಕ್ಕೆ ಸಾಕ್ಷಿಯಾಗಿ ನಿಂತಿರುವ ಈಸ್ಟರ್ ದ್ವೀಪದ ಅದ್ಭುತ ಶಿಲಾ ಸ್ಮಾರಕ

admin by admin
August 7, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ರಾಪಾ ನುಯ್ ನಾಗರೀಕತೆಯ ಅಂತ್ಯಕ್ಕೆ ಸಾಕ್ಷಿಯಾಗಿ ನಿಂತಿರುವ ಈಸ್ಟರ್ ದ್ವೀಪದ ಅದ್ಭುತ ಶಿಲಾ ಸ್ಮಾರಕ

ಈಸ್ಟರ್ ದ್ವೀಪವು ಜಗತ್ತಿನ ಹಲವು ವಿಸ್ಮಯಕಾರಿ ಸ್ಥಳಗಳಲ್ಲೊಂದು. ಈ ದ್ವೀಪ ಸಮುಚ್ಛಯವು ದಕ್ಷಿಣ ಪೆಸಿಫಿಕ್ ಸಾಗರದ ಮಧ್ಯೆ ಅತ್ತ ದಕ್ಷಿಣ ಅಮೇರಿಕದ ಪಶ್ಚಿಮಕ್ಕೂ ಇತ್ತ ಆಸ್ಟ್ರೇಲಿಯಾದ ಪೂರ್ವಕ್ಕೂ ನಡುವೆ ಅಭಿಮುಖವಾಗಿ ಏಕಾಂಗಿಯಾಗಿರುವ ಪುಟ್ಟ ದ್ವೀಪ. ಇದು ಸದ್ಯ ಅಮೇರಿಕದ ಚಿಲಿ ದೇಶಕ್ಕೆ ಸೇರಿದ ಪ್ರಾಂತ್ಯ ಎಂದು ಗುರುತಿಸಿಕೊಂಡಿದೆಯಾದರೂ ದಕ್ಷಿಣ ಅಮೇರಿಕದ ತುದಿಯಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿದೆ.

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಈ ದ್ವೀಪಕ್ಕೆ 1722 ರಲ್ಲಿ ಮೊದಲ ಬಾರಿಗೆ ಭೇಟಿ ಕೊಟ್ಟ ಡಚ್ ಯಾತ್ರಿಕ ಜಾಕೋಬ್ ರೊಗ್ಗೆವೀನ್ ಎಂಬಾತ. ಆತ ಇಲ್ಲಿಗೆ ಬಂದಿಳಿದ ದಿನ ಈಸ್ಟರ್ ದಿನವಾದ್ದರಿಂದ ಈ ದ್ವೀಪಕ್ಕೆ ಆತ ಈಸ್ಟರ್ ದ್ವೀಪವೆಂದು ಕರೆದ. ಇವನ ನಂತರ ಹದಿನೆಂಟು ಹತ್ತೊಂಭತ್ತನೆ ಶತಮಾನಗಳಲ್ಲಿ ಆಗೀಗ ಇಲ್ಲಿಗೆ ಬಂದ ಇತರ ಯೂರೋಪಿಯನ್ ವಲಸಿಗರು ಈ ಭೂಭಾಗವನ್ನ ಪಾಲಿನೇಶಿಯಾ ಎಂದು ಕರೆದರು. ಹಾಗೂ ಇಲ್ಲಿ ವಾಸವಿದ್ದ ಜನರನ್ನ ಪಾಲಿನೇಶಿಯನ್ನರೆಂದು ಕರೆದರು. ಆಗೆಲ್ಲ ಇಲ್ಲಿ ಹೇರಳವಾಗಿ ಮೂಲ ನಿವಾಸಿಗಳ ಜನ ವಾಸವಿದ್ದರು. ಯೂರೋಪಿಯನ್ನರು ಇವರ ಮೇಲೆ ಪ್ರಾಬಲ್ಯ ಸಾಧಿಸಿ ಇಲ್ಲಿದ್ದ ಸಾವಿರಾರು ಜನರನ್ನ ತಂತಮ್ಮ ದೇಶಗಳಿಗೆ ಹಾಗೂ ದೂರದ ಪೆರುವಿಗೆ ಒತ್ತೆಯಾಳುಗಳಾಗಿ ಸಾಗಿಸಿದರು.

ಇಪ್ಪತ್ತನೇ ಶತಮಾನದ ಹೊತ್ತಿಗೆ ಸಾವಿರಾರಿದ್ದ ಇಲ್ಲಿನ‌ ಜನಸಂಖ್ಯೆ ತೀರಾ ಕೆಳಮಟ್ಟಕ್ಕೆ ಕುಸಿದು ಬೆರಳೆಣಿಕೆಯಷ್ಟಾದರು. ಈಸ್ಟರ್ ದ್ವೀಪವು ಅನೇಕ ಅಂಶಗಳಲ್ಲಿ ಒಂದು ಕೌತುಕವಾದ ಸ್ಥಳ.‌ ಇಲ್ಲಿ ಕ್ರಿ.ಶ ಮೂರನೇ ಶತಮಾನದಿಂದಲೇ ಜನರು ವಾಸವಿದ್ದ ಬಗ್ಗೆ ಇಲ್ಲಿ ದೊರೆತ ಕೆಲ ಐತಿಹಾಸಿಕ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಐರೋಪ್ಯರ ಆಗಮನಕ್ಕು ಮೊದಲು ಅಂದರೆ ಕ್ರಿ.ಶ 17 ನೇ ಶತಮಾನದವರೆಗೂ ಇಲ್ಲಿನ ಜನ ವೈಭವದಿಂದ ಜೀವನ ಸಾಗಿಸುತ್ತಿದ್ದರು. ಅವರು ತಮ್ಮ ಸಂಸ್ಕೃತಿ ಹಾಗೂ ಶಿಲ್ಪಕಲೆಯ ಸಮೃದ್ಧತೆಗೆ ಹೆಸರಾಗಿದ್ದ ಜನ ಸಮುದಾಯ.

ಈಸ್ಟರ್ ದ್ವೀಪದ ಅಚ್ಚರಿಗಳಲ್ಲಿ ಅಲ್ಲಿನ ಅಹು ಅಕಿವಿಯಲ್ಲಿರುವ 15 ಬೃಹತ್ ಮೊವಾಯ್ ಕಲ್ಲಿನ ವಿಗ್ರಹಗಳು ಪ್ರಮುಖವಾಗಿವೆ. ಇವುಗಳಲ್ಲಿ ಸಾಕಷ್ಟು ಸ್ಮಾರಕಗಳನ್ನ‌ 1960ರಲ್ಲಿ ಪುನರುತ್ಥಾನ ಮಾಡಲಾಗಿದೆ. ಇವು ಈಸ್ಟರ್ ದ್ವೀಪದ ಪುರಾತನ ಜನರೆನ್ನಲಾದ ರಾಪಾ ನುಯ್ ಜನಾಂಗದವರಿಂದ ರಚಿಸಲ್ಪಟ್ಟಿವೆ ಎನ್ನಲಾಗುತ್ತದೆ. ಕ್ರಿ.ಶ ಹದಿನೈದನೆ ಶತಮಾನದಲ್ಲಿ ಆರಂಭಗೊಂಡ ಈ ಸ್ಮಾರಕಗಳ ಕಾರ್ಯ ಹದಿನಾರನೇ ಶತಮಾನದವರೆಗೂ ಮುಂದುವರಿದಿದೆ. ಇವು ತಲಾ ಒಂದೊಂದು ವಿಗ್ರಹಗಳು ಸುಮಾರು ಹದಿನೈದು ಅಡಿಗು ಎತ್ತರವಿದ್ದು ಸರಾಸರಿ 40 ಟನ್ ನಷ್ಟು ತೂಗುತ್ತವೆ. ಇದನ್ನ ಅಲ್ಲಿನ ವೊಲ್ಕಾನಿಕ್ ಶಿಲೆಯಿಂದಲೇ ನೇರವಾಗಿ ಕೆತ್ತಿ ನಿಲ್ಲಿಸಲಾಗಿದೆ.

ಇವು ಅಲ್ಲಿನ ಅಹು ಟಾಂಗಾರಿಕಿಯ ದಡದ ಮೇಲೆ ಅತ್ತ ಸೂರ್ಯೋದಯಕ್ಕೆ ಸರಿಯಾಗಿ ಅಭಿಮುಖವಾಗಿ ತಲೆಯೆತ್ತಿ ನಿಂತಿವೆ ಹಾಗೂ ಇವುಗಳ ಹಿಂದುಗಡೆ ಸರಿಯಾಗಿ ಸೂರ್ಯಾಸ್ತವೂ ಸಂಭವಿಸುತ್ತದೆ. ವಸಂತ ಹಾಗೂ ಗ್ರೀಷ್ಮ ಋತುಗಳ ವಿಷ್ಣು ಶುಕ್ಲ ಪಕ್ಷಗಳ ಸೂರ್ಯಾಸ್ತ ಹಾಗೂ ಸೂರ್ಯೋದಯಗಳೆರಡಕ್ಕೂ ಸರಿ ಹೊಂದುವಂತೆ ಇವುಗಳನ್ನ ಸೂರ್ಯನ ನಟ್ಟ ನಡುವೆ ನಿಲ್ಲಿಸಲಾಗಿರುವುದು ಇಲ್ಲಿನವರ ಖಗೋಳ ಙ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. 1788 ರಲ್ಲಿ ಇವು ಮೊದಲ ಬಾರಿಗೆ ಯೂರೋಪ್ ವಲಸಿಗರ ಕಣ್ಣಿಗೆ ಬಿದ್ದವು. ಈ ಹೊತ್ತಿಗೆ ಇವುಗಳ ಕೆಲ ಭಾಗಗಳು ಕಾರಣಾಂತರಗಳಿಂದ ನೆಲದ ಪಾಲಾಗಿ ಅಸ್ತವ್ಯಸ್ತವಾಗಿದ್ದವು. 1888ರಲ್ಲಿ ಚಿಲಿ ದೇಶವು ಈ ದ್ವೀಪವನ್ನ ತನ್ನ ಸರಹದ್ದೆಂದು ಘೋಷಿಸಿದಾಗ ಈ ಸ್ಥಳದ ಸರ್ವೆಗಳ ಕಾರ್ಯ ಆಮೆಗತಿಯಲ್ಲಿ ಆರಂಭವಾಯ್ತು.

1960 ರ ದಶಕದಲ್ಲಿ ಥಾಲ್ ಹಯೆರ್ದಾ ಎಂಬ ಜಲನಾವಿಕ ಇವುಗಳನ್ನ ಗಮನಿಸಿ ಇವುಗಳ ಕಡೆ ಗಮನಹರಿಸುವಂತೆ ಸರ್ಕಾರಕ್ಕೆ ಕೇಳಿಕೊಂಡ. 1990ರಲ್ಲಿ ಚಿಲಿ ದೇಶದ ಪ್ರಾಕ್ತನಶಾಸ್ತ್ರಜ್ಞನಾಗಿದ್ದ ಕ್ಲಾಡಿಯೊ ಕ್ರಿಸ್ಟಿನೊ ಚೆಲ್ಲಾಪಿಲ್ಲಿಯಾಗಿದ್ದ ಸ್ಮಾರಕಗಳನ್ನ ಜೋಡಿಸಿ ಒಟ್ಟು ಹದಿನೈದು ಸ್ಮಾರಕಗಳನ್ನ ಒಂದರ ಪಕ್ಕ ಒಂದರಂತೆ ನಿಲ್ಲಿಸಿದ. 1995ರಲ್ಲಿ ಯುನೆಸ್ಕೊ ಈ ಸ್ಮಾರಕಗಳನ್ನ ಅವುಗಳ ಭವ್ಯತೆಯ ಕಾರಣಕ್ಕಾಗಿ ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಿತು. ಈ ಸ್ಮಾರಕಗಳು ದ್ವೀಪದ ಪೂರ್ವಜರೆಂದೂ ಅವರು ಸಾಗರ ದಡದಲ್ಲಿ ನಿಂತು ದ್ವೀಪವನ್ನ ರಕ್ಷಿಸಲು ನಿಂತಿದ್ದಾರೆಂದೂ ರಾಪಾ ನುಯ್ ಜನಾಂಗದವರ ನಂಬಿಕೆಯಾಗಿತ್ತು. ಇವು ಸಾಗರದ ಮಟ್ಟದಿಂದ 140 ಅಡಿಯಷ್ಟು ಮೇಲೆ ನಿಂತಿವೆ. ಈ ಸ್ಥಳದಲ್ಲಿ ಇನ್ನೂ ಕೆಲ ಚಿಕ್ಕ ಪುಟ್ಟ ಸ್ಮಾರಕಗಳು ನೆಲದ ಮೇಲೆ ಬಿದ್ದಿವೆ. ಅವುಗಳನ್ನ ಯಾರೂ ಮುಟ್ಟಬಾರದೆಂದು ಚಿಲಿ ಸರ್ಕಾರ ನಿಷೇಧಾಜ್ಞೆ ಹೊರಡಿಸಿ ದ್ವೀಪದ ಸಾಂಕೇತಿಕತೆಯನ್ನ ರಕ್ಷಿಸುವ ಹೊಣೆ ಹೊತ್ತಿದೆ.

ಈ ಸ್ಮಾರಕಗಳ ರಹಸ್ಯವನ್ನ ತಿಳಿಸಬಲ್ಲ ಯಾವೊಬ್ಬ ರಾಪಾ ನುಯ್ ಪಂಗಡದವರೂ ಈಗ ಬದುಕಿಲ್ಲ. ಅವರ ಜತೆಯೇ ಈ ಸ್ಮಾರಕಗಳ ಐತಿಹಾಸಿಕ ಭವ್ಯತೆಯೂ ಈಗ ದುರ್ಲಭ. ಈಗಲ್ಲಿ ನಮಗೆ ಕಾಣುವುದು ಈಸ್ಟರ್ ದ್ವೀಪದ ಒಂದು ಕಾಲದ ಸಾಂಸ್ಕೃತಿಕ ವೈಭವತೆಯ ಪ್ರತೀಕಗಳಂತಿರುವ ಈ ಆಕರ್ಷಕ ಕಲ್ಲುಗಳು ಮಾತ್ರ.

ಸಂಗ್ರಹ ಲೇಖನ:-
ಇಂದೂದರ್ ಒಡೆಯರ್ ಚಿತ್ರದುರ್ಗ (ಡುಗ್ಗು)

Tags: AustraliaChileEaster Islandmagnificent rock monumentRapa Nui civilizationSouth America.South AmericanSouth Pacific Ocean
ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram