ಕೇರಳ ವಿಮಾನ ಅಪಘಾತದ ವಿಡಿಯೋ ದೃಶ್ಯಾವಳಿಗಳು
ಕರಿಪುರ, ಅಗಸ್ಟ್ 8: ಕೇರಳದ ಕರಿಪುರ ವಿಮಾನ ನಿಲ್ದಾಣದ ರನ್ ವೇಯಲ್ಲಿ ಶುಕ್ರವಾರ 191 ಜನರನ್ನು ಹೊತ್ತು ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸ್ಕಿಡ್ ಆಗಿದೆ.
https://twitter.com/kxronne/status/1291762203746398208
ವರದಿಗಳ ಪ್ರಕಾರ, ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದು, 123 ಮಂದಿ ಗಾಯಗೊಂಡಿದ್ದಾರೆ ಮತ್ತು 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನದಲ್ಲಿ ಹತ್ತು ಮಕ್ಕಳು, ಇಬ್ಬರು ಪೈಲಟ್ಗಳು ಮತ್ತು ಐದು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 184 ಪ್ರಯಾಣಿಕರಿದ್ದರು.
https://twitter.com/kxronne/status/1291762446722465793
ದುಬೈನಿಂದ ಕೋಝಿಕೋಡ್ಗೆ ಆಗಮಿಸಿದ ಐಎಕ್ಸ್ -1344 ವಿಮಾನವು ರಾತ್ರಿ 7.45 ರ ಸುಮಾರಿಗೆ ಕರಿಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸ್ಕಿಡ್ ಆಗಿದ್ದು ಅಪಘಾತ ಸಂಭವಿಸಿದೆ. ವಿಮಾನವು ಸುಮಾರು 35 ಅಡಿಗಳಷ್ಟು ಕೆಳಗೆ ಬಿದ್ದಿದ್ದು, ಮುಂಭಾಗದ ಅರ್ಧವು ಹಾನಿಗೊಳಗಾಗಿದೆ.








