ಉತ‌್ತರ ಪ್ರದೇಶ – 26 ಜನರಿಗೆ ಹಾವು ಕಡಿತ – ಒಂದು ಸಾವು
ಬಹ್ರೇಚ್, ಆಗಸ್ಟ್ 8: ಉತ್ತರ ಪ್ರದೇಶದಲ್ಲಿನ ಬಹ್ರೇಚ್ ಜಿಲ್ಲೆಯ ಚಿಲ್ಬಿಲಾ ಗ್ರಾಮದಲ್ಲಿ ಕಳೆದ 10 ದಿನಗಳಲ್ಲಿ ಸುಮಾರು 26 ಜನರಿಗೆ ಹಾವು ಕಚ್ಚಿದ್ದು, ಅದರಲ್ಲಿ ಒಬ್ಬರು ಈ ವಾರದ ಆರಂಭದಲ್ಲಿ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಮುನ್ಶಿ ರಾಮ್ ಎಂದು ಗುರುತಿಸಲಾಗಿದೆ. ಈಗ, ಭಯಭೀತರಾದ ಗ್ರಾಮಸ್ಥರು ಅದೇ ಹಾವು ಜನರನ್ನು ಕಚ್ಚುತ್ತಿದೆ ಎಂದು ಹೇಳುತ್ತಿದ್ದು, ಹಾವಿನ ಹೆದರಿಕೆಗೆ ಕೆಲವು ಗ್ರಾಮಸ್ಥರು ಹಳ್ಳಿಯನ್ನು ಬಿಡಲು ಪ್ರಾರಂಭಿಸಿದ್ದಾರೆ.

ಈ ನಿರ್ದಿಷ್ಟ ಸರ್ಪ ನಮ್ಮ ಹಳ್ಳಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ದನಗಳನ್ನು ಕಚ್ಚುತ್ತಿವೆ ಎಂದು ಗ್ರಾಮಸ್ಥ ಪಪ್ಪು ಹೇಳಿದ್ದಾರೆ. ಸ್ಥಳೀಯರು ಹಾವನ್ನು ಹಿಡಿಯಲು ಹಾವು ಹಿಡಿಯುವವರನ್ನು ಕರೆದಿದ್ದಾರೆ. ಇದು ಮಳೆಗಾಲ, ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಹಾವುಗಳಿರುತ್ತದೆ. ನಾವು ಅವೆಲ್ಲವನ್ನೂ ಹಿಡಿಯಲು ಸಾಧ್ಯವಿಲ್ಲ ಎಂದು ಹಾವಾಡಿಗ ಶರೀಫಾ ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ಈ ಪ್ರದೇಶದ ಹಲವಾರು ಗ್ರಾಮಗಳು ಪ್ರಸ್ತುತ ಜಲಾವೃತಗೊಂಡಿವೆ ಮತ್ತು ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ತೆವಳುತ್ತಿವೆ. ಹಾವಿನ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹದಲ್ಲಿ ಇಟ್ಟು ಕೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ಹಾವು ಕಚ್ಚಿದವರ ವಿಪರೀತಕ್ಕೆ ಸಾಕ್ಷಿಯಾಗಿದೆ.








