ಸುಶಾಂತ್ ಸಾವಿನ ಪ್ರಕರಣ ದಿನಕಳೆದಂತೆಲ್ಲಾ ಮತ್ತಷ್ಟು ನಿಗೂಢವಾಗಿಹೋಗುತ್ತಿದೆ. ಆತ್ಮಹತ್ಯೆ ಎಂದು ಹೇಳಲಾಗಿದ್ದ ಪ್ರಕರಣ ನಿಧಾನವಾಗಿ ಕೊಲೆ ಎಂಬ ಬಣ್ಣ ಪಡೆದುಕೊಳ್ಳುತ್ತಿದೆ. ನಿಜಕ್ಕೂ ಸುಶಾಂತ್ ಸಾವಿಗೆ ಕಾರಣ ಏನು ಎಂಬುದೇ ಸದ್ಯಕ್ಕೆ ಎಲ್ಲರ ಮುಂದಿರುವ ದೊಡ್ಡ ಸವಾಲಾಗಿದೆ. ಒಂದೆಡೆ ರಿಯಾಗೆ ಇಡಿ ಕುಣಿಕೆಯ ಕಂಟಕ ಎದುರಾಗಿದ್ರೆ ಮತ್ತೊಂದೆಡೆ ಪ್ರಕರಣ ಸಿಬಿಐ ಅಂಗಳದಲ್ಲಿದೆ. ದಿನ ಕಳೆದಂತೆಲ್ಲಾ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ಇದೀಗ ಸುಶಾಂತ್ ಅವರ ಮಾಜಿ ಆಪ್ತ ಸಹಾಯಕರಾಗಿದ್ದ ಅಂಕಿತ್ ಆಚಾರ್ಯ ಅವರು ಈ ಬಗ್ಗೆ ಆಘಾತಕಾರಿ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಆಪ್ತ ಸಹಾಯಕ ಅಂಕಿತ್, ಈ ಮೊದಲು ದಿನದ 24 ಗಂಟೆಯೂ ಸುಶಾಂತ್ ಜತೆಗೆ ಇರುತ್ತಿದ್ದವರು. ಸುಶಾಂತ್ ಆತ್ಮಹತ್ಯೆಯಿಂದ ಸತ್ತಿದ್ದಾರೆ ಎಂಬ ವಾದವನ್ನು ನಂಬಲು ತಾವು ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ. ‘ನನಗೆ ಸುಶಾಂತ್ ಅಣ್ಣ ತುಂಬಾ ಚೆನ್ನಾಗಿ ಗೊತ್ತು. ಇದನ್ನು ಆತ್ಮಹತ್ಯೆ ಎಂದು ನಾನು ನಂಬುವುದಿಲ್ಲ. ಇದು ಖಂಡಿತವಾಗಿಯೂ ಕೊಲೆ’ ಎಂದಿದ್ದಾರೆ.
ಸುಶಾಂತ್ ಸಿಂಗ್ ಪ್ರಕರಣದಲ್ಲಿ ಅವರ ಗಂಟಲಿನ ಮೇಲೆ ಓ ಆಕಾರವಿದೆ. ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ಗಂಟಲಿನ ಮೇಲೆ ಯು ಆಕಾರವಿರುತ್ತೆ. ಆದ್ರೆ ಯಾರಾದರೂ ಗಂಟಲು ಹಿಡಿದರೆ ಮಾತ್ರ ಗಂಟಲ ಮೇಲೆ ಓ ಆಕಾರವಿರುತ್ತೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕಣ್ಣುಗಳು ದೊಡ್ಡದಾಗಿ ಹೊರಗೆ ಇಣುಕುತ್ತಿರುತ್ತವೆ. ನಾಲಿಗೆ ಹೊರಬಂದಿರುತ್ತದೆ. ಜೊಲ್ಲು ಸುರಿದಿರುತ್ತದೆ. ಆದರೆ ಸುಶಾಂತ್ ದೇಹದಲ್ಲಿ ಇದು ಯಾವುದೂ ಕಂಡುಬಂದಿಲ್ಲ ಎಂದು ಅಂಕಿತ್ ಹೇಳಿದ್ದು, ಇದು ಕೊಲೆಯಯೇ ಎಂದು ಆರೋಪಿಸಿದ್ದಾರೆ.

ಅಷ್ಟೇ ಇಲ್ಲ ಮತ್ತೊಂದು ಅಚ್ಚರಿ ಮೂಡಿಸುವ ಹೇಳಿಕೆ ನೀಡಿರುವ ಅಂಕಿತ್ ಸುಶಾಂತ್ ಕುತ್ತಿಗೆ ಮೇಲೆ ಇರುವ ಗುರುತು ಅವರ ಸಾಕು ನಾಯಿ ಫಡ್ಜ್‌ನ ಬೆಲ್ಟ್‌ನದ್ದು ಎಂದಿದ್ದಾರೆ. ಸುಶಾಂತ್ ಮೃತದೇಹದ ಫೋಟೊಗಳನ್ನು ಇನ್ನೂ ಇರಿಸಿಕೊಂಡಿದ್ದೇನೆ. ಆ ಫೋಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇನೆ. ಕೆಲ ದುಷ್ಕರ್ಮಿಗಳು ಫಡ್ಜ್ ಬೆಲ್ಟ್ ಬಳಸಿ ಅವರ ಕತ್ತು ಬಿಗಿದಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಕೇಸ್ ಸಿಬಿಐಗೆ ಒಪ್ಪಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅಂಕಿತ್ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.







