ದಿನೇ ದಿನೇ ದೇಶದಲ್ಲಿ ಕೊರೊನಾ ಮಹಾಮಾರಿ ಹಾವಳಿ ಹೆಚ್ಚುತ್ತಲೇ ಇದೆ. ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರಿಕೆಯಾಗುತ್ತಿದೆ. ಕೊರೊನಾ ನಿರ್ಮೂಲನೆ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೀಗಿರುವಾಗ ಕೇಂದ್ರ ಸರರ್ಕಾರ ಮಹತ್ವದ ಕ್ರಮವೊಂದನ್ನು ತೆಗೆದುಕೊಂಡಿದೆ. ಎಲ್ಲಾ ರಾಜ್ಯಗಳಲ್ಲಿಯೂ ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.
ಇತ್ತೀಚೆಗೆ ಸೋಂಕಿತರ ಪ್ರಮಾಣ ಹೆಚ್ಚುತ್ತಲೇ ಇದ್ದು, ವ್ಯಾಪಾರಿಗಳಿಂದ ಸೋಂಕು ಹೆಚ್ಚಾಗಿ ಹರಡಬಹುದಾದ ಸಾಧ್ಯೆತೆಯಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಈಗಾಗಲೇ ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯದ ಸೆಕ್ರೆಟರಿ ರಾಜೇಶ್ ಭೂಷಣ್ ಅವರು ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ. ಅಲ್ಲದೇ ಕೊರೊನಾ ಸೋಂಕಿತರನ್ನು ತಕ್ಷಣವೇ ಕರೆದೊಯ್ಯಲು ಸುಸಜ್ಜಿತ ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.
ಇನ್ನೂ ರೆಡ್ ಝೋನ್ ಗಳ ಹೊರತಾಗಿ ಗ್ರೀನ್ ಝೋನ್ ಗಳಾಗಿದ್ದ ಪ್ರದೇಶಗಳಲ್ಲಿ ಸೋಂಕು ಹರಡಲಾರಂಭಿಸಿರುವ ಹಿನ್ನೆಲೆ ಆರಂಭಿಕ ಹಂತದಲ್ಲೇ ಸೋಂಕು ತಡೆಗಟ್ಟುವಿಕೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಸೋಂಕಿತರನ್ನು ಹೋಮ್ ಐಸೋಲೇಷನ್ಗೆ ಒಳಪಡಿಸಬೇಕು. ಇನ್ಫ್ಲುಯೆನ್ಝಾ ಲೈಕ್ ಇಲ್ನೆಸ್ ಅಥವಾ ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಇಲ್ನೆಸ್ ಗಳ ರೋಗ ಲಕ್ಷಣಗಳೂ ಕೋವಿಡ್ ಮಾದರಿಯಲ್ಲೇ ಇರುವ ಕಾರಣ ಈ ಬಗ್ಗೆ ನಿಗಾವಹಿಸಬೇಕು. ಅಲ್ಲದೆ ಸೋಂಕು ಸುಲಭವಾಗಿ ಹರಡಬಲ್ಲ ಪ್ರದೇಶಗಾಳಾಗಿರುವ ಕಾರಾಗೃಹ, ವೃದ್ಧಾಶ್ರಮ, ಅನಾಥಾಶ್ರಮ, ಇಂಡಸ್ಟ್ರಿಯಲ್ ಕ್ಲಸ್ಟರ್ಗಳು, ಕೊಳಚೆ ಪ್ರದೇಶಗಳಲ್ಲಿ ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕೆಂದು ಸಹ ಸುತ್ತೂಲೆಯಲ್ಲಿ ಪ್ರಕಟಿಸಲಾಗಿದೆ.
ನಾಲ್ಕು ವರ್ಷಗಳ ವನವಾಸ ಮುಗಿಸಿ ಮರಳಿದ ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ :ಭುವನೇಶ್ವರ್ ಕುಮಾರ್ ಪುನರಾಗಮನಕ್ಕೆ ಅಜಿತ್ ಅಗರ್ಕರ್ ಅಡ್ಡಗಾಲು ಹಾಕಿದ್ದರಾ? ಆಯ್ಕೆ ಸಮಿತಿಯ ಒಳಗಿನ ಗುಟ್ಟು ರಟ್ಟು?
ಮುಂಬೈ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಕಡೆ ಸಂತಸದ ಸುದ್ದಿ ಸಿಕ್ಕಿದ್ದರೆ, ಮತ್ತೊಂದು ಕಡೆ ಆಯ್ಕೆ ಸಮಿತಿಯ ಒಳಗಿನ ಅಸಲಿ ಆಟ ಈಗ ಬಯಲಾಗಿದೆ. ಮುಂಬರುವ ನ್ಯೂಜಿಲೆಂಡ್...








