ಸುಶಾಂತ್ ಸಾವಿನ ಪ್ರಕರಣದಲ್ಲಿ ಇದೀಗ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಇತ್ತೀಚೆಗಷ್ಟೇ ರಿಯಾ ವಿರುದ್ಧ ಹೇಳಿಕೆ ನೀಡುವಂತೆ ಸುಶಾಂತ್ ಪರಿವಾರದವರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸುಶಾಂತ್ ನ ಗೆಳಯ ಸಿದ್ಧಾರ್ಥ್ ಪೈಥನಿ ಮುಂಬೈ ಪೊಲೀಸರಿಗೆ ಮೇಲ್ ಒಂದನ್ನು ಮಾಡಿದ್ರು. ಈ ಮೇಲ್ ನ್ನು ರಿಯಾ ಸಲ್ಲಿಸಿರುವ ಅರ್ಜಿ ಜೊತೆಗೆ ಸುಪ್ರೀಂ ಕೋರ್ಟ್ ಗೆ ಟ್ಯಾಗ್ ಮಾಡಲಾಗಿದೆ. ಆದರೀಗ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸುಶಾಂತ್ ತಂದೆ ಕೆಕೆ ಸಿಂಗ್ ಅವರು ಸಿದ್ಧಾರ್ಥ್ ಪೈಥನಿ ಸಹ ರಿಯಾ ಅವರ ಪ್ರಭಾವದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
ಹೌದು ಸುಶಾಂತ್ ಪ್ರೇಯಸಿ ವಿರುದ್ಧ ಪಟ್ನಾ ಠಾಣೆಯಲ್ಲಿ ದಾಖಲಾಗಿರುವ FIR ಅನ್ನು ಮುಂಬೈಗೆ ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ಗೆ ರಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ವಿಚಾರ ಪ್ರಸ್ತಾಪವಾಗಿದೆ. ಈ ವೇಳೆ ಸಿದ್ಧಾರ್ಥ್ ಅವರು ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸುವಂತೆ ಸುಶಾಂತ್ ತಂದೆ ನ್ಯಾಯಾಲಯವು ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೆಕೆ ಸಿಂಗ್ ಅವರು ಸಿದ್ಧಾರ್ಥ್ ಮೇಲೆ ರಿಯಾ ಪ್ರಬಾವವಿದೆ ಎಂದು ಆರೋಪಿಸಿ ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಪ್ರಕರಣದ ಮುಖ್ಯ ಸಾಕ್ಷಿಯಾಗಿರುವ ಸಿದ್ಧಾರ್ಥ್ ಪ್ರಮುಖ ಆರೋಪಿ ರಿಯಾಗೆ ಯಾಕೆ ಈ ಮೇಲ್ ಕಳುಹಿಸಿದ್ದಾರೆ…? ಅಷ್ಟೇ ಅಲ್ಲ ಬಿಹಾರದ ಠಾಣೆಯಲ್ಲಿ ರಿಯಾ ವಿರುದ್ಧ ಕೇಸ್ ದಾಖಲಾದ ಬಳಿಕ ಅಂದ್ರೆ ರಿಯಾ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಒಂದು ದಿನದ ಹಿಂದೆ ಯಾಕೆ ಸಿದ್ದಾರ್ಥ್ ಮುಂಬೈ ಪೊಲೀಸರಿಗೆ ಈ ಬಗ್ಗೆ ಮೇಲ್ ಮಾಡಿದ್ದಾರೆ. ಇದಾದ ಬಳಿಕ ಈ ಮೇಲ್ ಅನ್ನು ರೆಹಾ ಗೆ ಕಳುಹಿಸಿರುವ ಉದ್ದೇಶವಾದ್ರೂ ಏನು..? ಸಿದ್ದಾರ್ಥ್ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದು, ಕೇಸ್ ನ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿರುವ ರಿಯಾಗೆ ಯಾಕೆ ಈ ಮೇಲೆ ಕಳುಹಿಸಿದ್ದಾರೆ. ಇದರಿಂದ ರಿಯಾಗೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆಗೆ ಸಹಾಯವಾಗಲಿ ಎಂಬುದೇ ಅವರ ಮುಖ್ಯ ಉದ್ದೇಶ ಎಂದು ಆರೋಪಿಸಿದ್ದಾರೆ.







