ಸುಶಾಂತ್ ಸಾವಿನ ಕೆಲವು ದಿನಗಳ ಹಿಂದಷ್ಟೇ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಅವರು ಸ್ನೇಹಿತನ ಕಟ್ಟಡದ ಮೇಲಿಂದ ಬಿದ್ದು ಪ್ರಾಣ ಬಿಟ್ಟಿದ್ದರು. ಆದರೆ ಇತ್ತೀಚಿಗಿನ ಸುಶಾಂತ್ ಸಾವಿನ ಪ್ರಕರಣದ ಬೆಳವಣಿಗೆಗಳ ಅನ್ವಯ ಸುಶಾಂತ್ ಸಾವಿಗೂ ಹಾಗೂ ದಿಶಾ ಸಾವಿಗೂ ಸಂಬಂಧವಿದೆ ಎಂಬ ಚರ್ಚೆಗಳು ತಾರಕ್ಕೇರಿದೆ. ಜೂನ್ 9 ರಂದು ಮುಂಬೈನ ಮಲಾಡ್ ನಲ್ಲಿನ ಕಟ್ಟಡವೊಂದರ ಮೇಲಿಂದ ಬಿದ್ದು ದಿಶಾ ಸಾವನಪ್ಪಿದ್ದರು. ಇದಕ್ಕೂ ಆತ್ಮಹತ್ಯೆಯ ಬಣ್ಣ ಹಚ್ಚಲಾಗಿತ್ತು. ಅದಾದ ಬಳಿಕ ಜೂನ್ 14 ರಂದು ಸುಶಾಂತ್ ಸಿಂಗ್ ಅವರು ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದಾದ ಬಳಿಕ ಸುಶಾಂತ್ ರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ವಾದಗಳು ವ್ಯಾಪವಾಗಿ ಕೇಳಿಬರುತ್ತಿದ್ದು, ಇನ್ನೂ ಚರ್ಚೆಯಲ್ಲಿದೆ.
ಇದರ ನಡುವೇ ಈ ಎರೆಡೂ ಸಾವಿನ ಪ್ರಕರಣದ ನಡುವೆ ಸಂಬಂಧವಿದ್ದು, ದಿಶಾ ಅವರು ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ ಅದು ಸಹ ಕೊಲೆಯೇ ಎಂಬ ಚರ್ಚೆ ಇದೀಗ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ದಿಶಾ ಸಾಯುವ ಕೆಲವೇ ನಿಮಿಷಗಳ ಹಿಂದೆ ಏನಾಗಿತ್ತು ಎಂಬುದರ ಮಾಹಿತಿಯನ್ನ ಸ್ವತಃ ಆಕೆಯ ಗೆಳೆಯರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 
ಜೂನ್ 9 ರಂದು ದಿಶಾ, ತನ್ನ ಭಾವಿ ಪತಿ ಮನೆಯಲ್ಲಿ ಗೆಳೆಯರೊಂದಿಗೆ ಸೇರಿ ಪಾರ್ಟಿ ಮಾಡುತ್ತಿದ್ದರು. ಅಂದು ರಾತ್ರಿ ದಿಶಾ ತುಸು ಹೆಚ್ಚೇ ಕುಡಿದಿದು ರಂಪಾಟ ಮಾಡುತ್ತಿದ್ದರು. ಆಗ ಪಾರ್ಟಿಯಲ್ಲಿದ್ದ ಒಬ್ಬರು ಪಾರ್ಟಿಯ ಮೂಡ್ ಹಾಳು ಮಾಡಬೇಡ ಎಂದು ಬೈದಿದ್ದಾರೆ. ಇದರಿಂದ ಸಿಟ್ಟಾದ ದಿಶಾ ರೂಮ್ ನಲ್ಲಿ ಹೋಗಿ ಬಾಗಿಲು ಹಾಕಿಕೊಂಡವರು ಹೊರಬಂದಿಲ್ಲ. ಇದಾದ ಕೆಲ ಹೊತ್ತಿನ ಬಳಿಕ ಆಕೆಯ ಗೆಳೆಯರು ಬಾಗಿಲು ತೆಗೆಯಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗದೇ ಕೊನೆಗೆ ಬಾಗಿಲು ಮುರಿದಿದ್ದಾರೆ. ಆದ್ರೆ ಅಷ್ಟರಲ್ಲಿ ದಿಶಾ ರೂಮ್ ನ ಕಿಟಕಿಯಿಂದ ಕೆಳಗೆ ಹಾರಿಬಿಟ್ಟಿದ್ದರಂತೆ. ತೀವ್ರ ಗಂಭೀರವಾಗಿ ಗಾಯಗೊಂಡಿದ್ದ ರಿಯಾರನ್ನು ಆಸ್ಪತ್ರೆಗೆ ರವಾನಿಸುವ ಹೊತ್ತಿಗೆ ದಿಶಾ ಇಹಲೋಕ ತ್ಯಜಿಸಿದ್ದರು ಎಂದು ಅಂದು ಪಾರ್ಟಿಯಲ್ಲಿದ್ದ ಗೆಳೆಯರೇ ವಾಟ್ಸ್‌ಆಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.







