ಬೆಂಗಳೂರು ವಿವಿ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಕರ್ನಾಟಕ ವಿದ್ಯಾರ್ಥಿ ಸಂಘಟನೆ
ಬೆಂಗಳೂರು ವಿಶ್ವ ವಿದ್ಯಾನಿಲಯವು ಪರೀಕ್ಷಾ ಶುಲ್ಕ ಭರಿಸಲು ಆಗಸ್ಟ್ 15 ಕೊನೆಯ ದಿನಾಂಕ ಎಂದು ಘೋಷಿಸಿದೆ. ಅಲ್ಲದೆ ಹೊಸ ಶೈಕ್ಷಣಿಕ ವರ್ಷದ ಕಾಲೇಜು ಶುಲ್ಕವನ್ನು ಭರಿಸುವಂತೆಯೂ ಹೇಳಿದೆ. ಈ ನಡುವೆ ಬೆಂಗಳೂರು ಕೇಂದ್ರ ವಿಶ್ವ ವಿದ್ಯಾಲಯವು ಇದೇ ಹಾದಿಯನ್ನು ಹಿಡಿದಿದೆ. ಇದ್ರಿಂದ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಬೆಂಗಳೂರು ವಿಮಿ ಈ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ರೆ ಹೋರಾಟ ನಡೆಸುವುದಾಗಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕರಾದ ಸರೋವರ್ ಬೆಂಕಿಕೆರೆ ಅವರು ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ವೈರಸ್, ಲಾಕ್ ಡೌನ್ನಿಂದಾಗಿ ಬಡವರು, ದಿನಗೂಲಿ ಕಾರ್ಮಿಕರು, ರೈತರು, ಬೀದಿ ವ್ಯಾಪಾರಿಗಳ ಕುಟುಂಬ ಆರ್ಥಿಕವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಖಾಸಗಿ
ಸಂಸ್ಥೆಗಳು ಸುಳಿಗೆ ಮಾಡತ್ತಿರುವುದು ವಿಷಾಧದ ಸಂಗತಿ. ಅದೇ ರೀತಿ ಸರ್ಕಾರಿ ಸಂಸ್ಥೆಗಳು ಅದೇ ರೀತಿಯ ಹಾದಿಯನ್ನು ಹಿಡಿದ್ರೆ ಜನ ಸಾಮಾನ್ಯರು ಏನು ಮಾಡೋದು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕರು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಮೊದಲ ಸುತ್ತಿನ ಲಾಕ್ ಡೌನ್ ಘೋಷಣೆಯಾದಾಗಲೇ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು, ಪರೀಕ್ಷಾ ಶುಲ್ಕ ಮತ್ತು ಈ ವರ್ಷದ ಶೈಕ್ಷಣಿಕ ಶುಲ್ಕವನ್ನು ಸರ್ಕಾರವೇ ಪಾವತಿಸಬೇಕು ಅಥವಾ ಕಡಿಮೆಗೊಳಿಸಿ ಹೆಚ್ಚಿನ ಸಮಯಾವಕಾಶ ನೀಡಿ ಕಂತುಗಳಲ್ಲಿ ಪಡೆಯಬೇಕು ಎಂದು ಒತ್ತಾಯಿಸಿತ್ತು. ಆದ್ರೆ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಬದಲಾಗಿ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಸುಲಿಗೆ ಮಾಡುತ್ತಿದೆ. ಇದ್ರಿಂದ ಈ ವರ್ಷ ಡ್ರಾಪ್ ಔಟ್ ಆಗುವ ಸಾಧ್ಯತೆಯೂ ಇದೆ. ತಳ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಗಳಿವೆ. ಇದ್ರಿಂದ ಸರ್ಕಾರ ಕೂಡಲೇ ಇತ್ತ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.









