ಆರ್ಥಿಕ ಹಿಂಜರಿತ, ಕೋವಿಡ್ -19 ಮತ್ತು ಜಲಪ್ರಳಯ ನಡುವೆ ಕಂಗೆಟ್ಟಿರುವ ಈ ಪ್ರಸ್ತುತ ಪರಿಸ್ಥಿಯಲ್ಲಿ , ದೇಶದಲ್ಲಿ ಚುನಾವಣೆ ನಡೆದರೆ ಬಿ ಜೆ ಪಿ 283 ಸಂಸದೀಯ ಸ್ಥಾನಗಳನ್ನು ಪಡೆದು ಏಕಾಂಗಿಯಾಗಿ ಸರಕಾರ ರಚಿಸಬಹುದು ಆದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) 20 ಸಂಸದೀಯ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಆದರೆ ಇದು ಸರಕಾರ ನಡೆಸಲು ಯಾವುದೇ ತೊಂದರೆ ಆಗುವುದಿಲ್ಲ ಎಂದು ಟುಡೆ ಗ್ರೂಪ್-ಕಾರ್ವಿ ಇನ್ಸೈಟ್ಸ್ ಲಿಮಿಟೆಡ್ ಎಂಒಟಿಎನ್ ನಡೆಸಿದ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ಸಮೀಕ್ಷೆ ವರದಿಮಾಡಿದೆ.
ಇಂಡಿಯಾ ಟುಡೆ ಗ್ರೂಪ್-ಕಾರ್ವಿ ಇನ್ಸೈಟ್ಸ್ ಲಿಮಿಟೆಡ್ ಎಂಒಟಿಎನ್ ಸಮೀಕ್ಷೆಯ ಪ್ರಕಾರ, ಮೇ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳ ಬಹುಮತವನ್ನು ಪಡೆದಿತ್ತು. ಪ್ರಸ್ತುತ ಮತದಾನ ನಡೆದರೆ 283 ಕ್ಕೆ ಕುಸಿಯಲಿದ್ದು ಅಲ್ಪ ಬಹುಮತ ಪಡೆಯಲಿದೆ ಎಂದು ವರದಿಮಾಡಿದೆ.
ಆದರೆ ಕಾಂಗ್ರೆಸ್ ಇನ್ನೂ ಮೂರು ಸ್ಥಾನಗಳನ್ನು ಕಳೆದುಕೊಂಡು 52 ಸ್ಥಾನಕ್ಕೆ ತೃಪ್ತಿ ಪಡೆಯಲಿದೆ.
ಇತರ ಪಕ್ಷಗಗಳು ಒಟ್ಟು 23 ಹೆಚ್ಚುವರಿ ಸ್ಥಾನಗಳನ್ನು ಪಡೆದು 188 ರಿಂದ 211 ತನ್ನ ಸಂಖ್ಯಾ ಬಲವನ್ನು ಹೆಚ್ಚಿಸಲಿದೆ . ಇದು ಪ್ರಾದೇಶಿಕ ಪಕ್ಷಗಳ ಕಡೆ ಜನರ ಒಲವು ವ್ಯಕ್ತಪಡಿಸಿದ್ದಾರೆ.
ಚುನಾವಣಾ ಮೈತ್ರಿ ವಿಷಯಕ್ಕೆ ಬಂದರೆ, 2020 ರ ಜನವರಿಯಲ್ಲಿ ನಡೆದ ಎಂಒಟಿಎನ್ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ ತನ್ನ ಶೇಕಡಾ 1 ರಷ್ಟು ಮತಗಳ ಲಾಭದಿಂದಾಗಿ 13 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಮತ್ತು ಯುಪಿಎ ಮತಗಳ ಪಾಲು ಶೇಕಡಾ. 2 ಕ್ಕೆ ಇಳಿದ ಕಾರಣ 15 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಸಮೀಕ್ಷೆ ಪ್ರಕಾರ ಎನ್‌ಡಿಎಯ ಸಂಸದೀಯ ಸಂಖ್ಯೆ 316 ಆದರೆ , ಯುಪಿಎ ಸಂಖ್ಯೆ 93 .
ಎನ್‌ಡಿಎ ಮತಗಳ ಪಾಲು 2019 ರ ಚುನಾವಣೆಯಲ್ಲಿ ಶೇ 45 ರಿಂದ ಈಗ ಶೇ 42 ಕ್ಕೆ ಕುಸಿದರೆ , ಇತರರಿಗೆ ಲಾಭವಾಗಲಿದೆ. 2019 ರ ಚುನಾವಣೆಗೆ ಹೋಲಿಸಿದರೆ ಯುಪಿಎ ಮತ ಪಾಲನ್ನು ಕಳೆದುಕೊಳ್ಳುವುದಿಲ್ಲ. ಆದರೆ ಜನವರಿಯಲ್ಲಿ ನಡೆಸಿದ MOTN ಸಮೀಕ್ಷೆಗೆ ಹೋಲಿಸಿದರೆ ಯುಪಿಎ ಶೇಕಡಾ 2 ರಷ್ಟು ಮತಗಳನ್ನು ಕಳೆದುಕೊಳ್ಳುತ್ತದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಕಳೆದ ಆರು ತಿಂಗಳುಗಳಲ್ಲಿ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಎನ್‌ಡಿಎ ತನ್ನ ಇಮೇಜ್ ಅನ್ನು ಸುಧಾರಿಸುವಲ್ಲಿ ಯಶಸ್ವಿಯಾಗಿದೆ, ಎರಡೂ ಪ್ರದೇಶಗಳು ಎನ್‌ಡಿಎಗೆ ಸಂಪೂರ್ಣ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ತೋರಿಸುತ್ತವೆ.
ಇತರ ಪಕ್ಷಗಳಾದ ಟಿ ಆರ್ ಎಸ್, ಸಿಪಿಎಂ ಮತ್ತು ವೈಎಸ್ಆರ್ಸಿಪಿ ದಕ್ಷಿಣ ಭಾರತದಲ್ಲಿ ಜನವರಿ 2020 ಕ್ಕೆ ಹೋಲಿಸಿದರೆ ಉತ್ತಮ ಸಾಧನೆ ತೋರಿವೆ.








