ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಬಗ್ಗೆ ಶಾಸಕ ಯತ್ನಾಳ್ ನೀಡಿರುವ ಹೇಳಿಕೆಗಳನ್ನು ಖಂಡಿಸಿ ಕಾಂಗ್ರೆಸ್ ಯತ್ನಾಳ್ ವಿರುದ್ಧ ಕಿಡಿಕಾರುತ್ತಿದೆ. ಇದೇ ವಿಚಾರವಾಗಿ ಅಧಿವೇಶನದಲ್ಲಿ ಕಾಂಗ್ರೆಸ್ ಧ್ವನಿ ಎತ್ತುತ್ತಿದ್ದು, ಇದೀಗ ಯತ್ನಾಳ್ ಹಾಗೂ ಬಿಜೆಪಿ ವಿರುದ್ಧ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಎಸ್. ದೊರೆಸ್ವಾಮಿ ಅವರನ್ನು ಕ್ರಿಮಿನಲ್ ರೀತಿ ಬಿಂಬಿಸಲು ಮುಂದಾಗಿರುವುದು ಸರಿಯಲ್ಲ. ಅವರು ಸ್ವಾತಂತ್ರ‍್ಯ ಹೋರಾಟಗಾರರಲ್ಲ ಎಂದರೆ ಮತ್ಯಾಕೆ ಪಿಂಚಣಿ ಕೊಡುತ್ತಿದ್ದೀರಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ದೊರೆಸ್ವಾಮಿ ಅವರ ಸೇವೆ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಬರೀ ಯತ್ನಾಳ್ ಹೇಳಿಕೆ ಮಾತ್ರವಲ್ಲ. ಇಡೀ ಬಿಜೆಪಿಗರು ಅವರ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ದೊರೆಸ್ವಾಮಿಯಂತಹ ವ್ಯಕ್ತಿಗಳು ಹೋರಾಟ ಮಾಡಿದ ಕಾರಣದಿಂದಲೇ ನಾವು ಇಂದು ಶಾಸಕರಾಗಿ ಸದನದೊಳಗೆ ಇದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ.
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ. ನಾವು ನಮ್ಮ...








