ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ತೆಲುಗಿನಲ್ಲು ಜನಪ್ರಿಯ ನಟ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಆದ್ರೆ ಕಳೆದ 5 ವರ್ಷಗಳ ಹಿಂದೆ ಟಾಲಿವುಡ್ ಚಿತ್ರರಂಗದಲ್ಲಿ ಬ್ಲಾಕ್ ಬಾಸ್ಟರ್ ಆಗಿ ಹೊರಹೊಮ್ಮಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಅಲ್ಲು ಅರ್ಜುನ್ ನಾಯಕತ್ವದ ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ನಟಿಸಿ ಅಭಿಮಾನಿಗಳನ್ನ ರಂಜಿಸಿದ್ದ ಉಪೇಂದ್ರ ಅವರು ಆ ಬಳಿಕ ತೆಲುಗು ಇಂಡಸ್ಟ್ರಿ ಇಂದ ದೂರವೇ ಉಳಿದುಬಿಟ್ಟಿದ್ದರು. ಆದರೆ ಇದೀಗ ಮತ್ತೆ ಟಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಉಪ್ಪಿ.
ಹೌದು ತೆಲುಗಿನ ಚಿತ್ರದಲ್ಲಿ ಮತ್ತೆ ನಟನೆಗೆ ಹಿಂದಿರುಗಿರುವ ಉಪೇಂದ್ರ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕ್ಯೂರಿಯಾಸಿಟಿ ಇದೀಗ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಾಕ್ಸರ್’ ಹೆಸರಿನ ಸಿನಿಮಾದಲ್ಲಿ ಉಪೇಂದ್ರ ಅವರು ಕಾಣಿಸಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ. ಈ ಚಿತ್ರದಲ್ಲಿ ವರುಣ್ ತೇಜ್ ನಾಯಕನಾಯಕನಾಗಿರಲಿದ್ದು, ಉಪೇಂದ್ರ ಅವರು ಬಾಕ್ಸಿಂಗ್ ಕೋಚ್ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಆದ್ರೆ ಚಿತ್ರದಲ್ಲಿ ಉಪೇಂದ್ರ ಅವರ ಪಾತ್ರ ನೆಗೆಟೀವ್ ಅಥವ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಇನ್ನೂವರೆಗೂ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ.
ಇನ್ನೂ ಕನ್ನಡದಲ್ಲಿ ಉಪೇಂದ್ರ ಅವರ ನಟನೆಯ ಬುದ್ಧಿವಂತ ಹಾಗೂ ಕಬ್ಜ ಚಿತ್ರಗಳು ರಿಲೀಸ್ ರೆಡಿಯಾಗಿವೆ. ಇದೀಗ ತೆಲುಗಿನ ಬಾಕ್ಸಿಂಗ್ ಚಿತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.








