ADVERTISEMENT
Thursday, August 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಗಸ್ಟ್ 16ರಿಂದ 20ರವರೆಗೆ ಸಿಎಸ್‍ಕೆ ತಂಡಕ್ಕೆ ಚೆನ್ನೈ ನಲ್ಲಿ ತರಬೇತಿ ಶಿಬಿರ..?

admin by admin
August 11, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಆಗಸ್ಟ್ 16ರಿಂದ 20ರವರೆಗೆ ಸಿಎಸ್‍ಕೆ ತಂಡಕ್ಕೆ ಚೆನ್ನೈ ನಲ್ಲಿ ತರಬೇತಿ ಶಿಬಿರ…?

2020ರ ಯುಎಇ ಐಪಿಎಲ್ ಟೂರ್ನಿಗೆ ತಂಡಗಳು ಪೂರ್ವ ತಯಾರಿ ನಡೆಸುತ್ತಿವೆ. ಬಹುತೇಕ ತಂಡಗಳು ಆಗಸ್ಟ್ 20ರ ನಂತರ ಯುಎಇಗೆ ಪ್ರಯಾಣ ಬೆಳೆಸಲಿವೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ.
ಈಗಾಗಲೇ ಕೊರೋನಾ ವೈರಸ್ ಸೊಂಕು ಮತ್ತು ಲಾಕ್ ಡೌನ್ ನಿಂದಾಗಿ ಐದಾರು ತಿಂಗಳಿಂದ ಕ್ರಿಕೆಟ್ ಆಟಗಾರರು ಮೈದಾನಕ್ಕೆ ಇಳಿದಿಲ್ಲ. ಮನೆಯಲ್ಲೇ ಜಿಮ್ ಮತ್ತು ವ್ಯಾಯಾಮ ಮಾಡಿಕೊಂಡು ತಮ್ಮ ಫಿಟ್‍ನೆಸ್ ಅನ್ನು ಕಾಯ್ದುಕೊಳ್ಳುತ್ತಿದ್ದರು. ಇದೀಗ ಐಪಿಎಲ್ ಗೆ ಮುಹೂರ್ತ ಫಿಕ್ಸ್ ಆಗಿರುವುದರಿಂದ ಎಲ್ಲಾ ಆಟಗಾರರು ಸನ್ನದ್ದರಾಗುತ್ತಿದ್ದಾರೆ. ಫ್ರಾಂಚೈಸಿಗಳು ತಮ್ಮ ತಂಡದ ತಯಾರಿಗಳನ್ನು ಮಾಡಿಕೊಳ್ಳುತ್ತಿವೆ.
ಇದಕ್ಕೆ ಪೂರಕವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 16ರಿಂದ 20ರವರೆಗೆ ಚೆನ್ನೈನಲ್ಲಿ ಶಿಬಿರ ನಡೆಸುವ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ತಮಿಳುನಾಡು ಸರ್ಕಾರಕ್ಕೆ ಸಿಎಸ್‍ಕೆ ಪತ್ರ ಬರೆದಿದೆ. ತಮಿಳುನಾಡು ಸರ್ಕಾರದ ಉತ್ತರಕ್ಕೆ ಕಾಯುತ್ತಿದೆ. ಹಾಗೇ ಆಗಸ್ಟ್ 21ಕ್ಕೆ ಸಿಎಸ್‍ಕೆ ಯುಎಇಗೆ ಪ್ರಯಾಣ ಬೆಳೆಸಲಿದೆ.
ಆಗಸ್ಟ್ 16ರಿಂದ 20ರವರೆಗೆ ಸಿಎಸ್‍ಕೆ ತಂಡಕ್ಕೆ ತರಬೇತಿ ಶಿಬಿರ ನಡೆಸುವ ಯೋಚನೆಯಲ್ಲಿದ್ದೇವೆ. ಈ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದೇವೆ. ಸರ್ಕಾರದ ಉತ್ತರಕ್ಕಾಗಿ ಕಾಯುತ್ತಿದ್ದೆವೆ ಎಂದು ಸಿಎಸ್‍ಕೆ ತಂಡದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಸಿ ವಿಶ್ವನಾಥನ್ ಹೇಳಿದ್ದಾರೆ.
ತರಬೇತಿ ಶಿಬಿರಕ್ಕೆ ಮುನ್ನ ಆಟಗಾರರನ್ನು ಅವರ ಊರಿನಲ್ಲೇ ಕೋವಿಡ್ -ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆ ನಂತರ ಚೆನ್ನೈನಲ್ಲಿ ಎರಡು ಬಾರಿ ಟೆಸ್ಟ್ ಮಾಡಲಾಗುತ್ತದೆ. ಆಗಸ್ಟ್ 17 ಮತ್ತು ಆಗಸ್ಟ್ 18ರಂದು ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ರು.
ಈಗಾಗಲೇ ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಕಳೆದ ಫೆಬ್ರವರಿ -ಮಾರ್ಚ್ ನಲ್ಲಿ ಸಿಎಸ್‍ಕೆ ಕ್ಯಾಂಪ್ ನಲ್ಲಿದ್ದ ಧೋನಿ ಆನಂತರ ಲಾಕ್ ಡೌನ್ ಟೈಮ್‍ನಲ್ಲಿ ಮನೆಯಲ್ಲೇ ಲಾಕ್ ಆಗಿದ್ದರು. ರಾಂಚಿಯ ತಮ್ಮ ಫಾರ್ಮ್ ಹೌಸ್ ನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಮತ್ತೆ ಮೈದಾನಕ್ಕೆ ಆಗಮಿಸಿದ್ದಾರೆ. ಈ ನಡುವೆ ಸುರೇಶ್ ರೈನಾ ಕೂಡ ನೆಟ್ಸ್ ಅಭ್ಯಾಸ ಶುರು ಮಾಡಿದ್ದರು.

Related posts

ashoka-demands-drought-declaration-farmer-loan-waiver-nagendra-resignation

175 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, ರೈತರ ಸಾಲ ಮನ್ನಾ ಮಾಡಿ, ಹಣ ಬಿಡುಗಡೆ ಬಗ್ಗೆ ನಿಖರವಾಗಿ ತಿಳಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

August 27, 2026
allu-arjun-forbes-india-showstoppers-2026-cover

ಫೋರ್ಬ್ಸ್ ಇಂಡಿಯಾ ಮುಖಪುಟದಲ್ಲಿ ʻಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್‌ʼ ಅಲ್ಲು ಅರ್ಜುನ್ ಮಿಂಚಿಂಗ್

August 27, 2026
Tags: # Chepauk#Mahendra sing Dhoni#Tamil Nadu governmentbccichennai super kingscskIPLIPL 2020M.S DhoniRanchiteam india
ShareTweetSendShare
Join us on:

Related Posts

ashoka-demands-drought-declaration-farmer-loan-waiver-nagendra-resignation

175 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, ರೈತರ ಸಾಲ ಮನ್ನಾ ಮಾಡಿ, ಹಣ ಬಿಡುಗಡೆ ಬಗ್ಗೆ ನಿಖರವಾಗಿ ತಿಳಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
August 27, 2026
0

ಸಚಿವ ನಾಗೇಂದ್ರ ರಾಜೀನಾಮೆ ನೀಡುವುದು ಖಚಿತ, ನಮ್ಮ ಹೋರಾಟಕ್ಕೆ ಬೆಲೆ ಸಿಗಲಿದೆ ಬೆಂಗಳೂರು,  ರಾಜ್ಯ ಸರ್ಕಾರ ಕಾಟಾಚಾರಕ್ಕೆ ಬರಗಾಲ ಘೋಷಣೆ ಮಾಡಿದೆ. ಆದರೆ 175 ತಾಲೂಕುಗಳಲ್ಲಿ ಬರ...

allu-arjun-forbes-india-showstoppers-2026-cover

ಫೋರ್ಬ್ಸ್ ಇಂಡಿಯಾ ಮುಖಪುಟದಲ್ಲಿ ʻಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್‌ʼ ಅಲ್ಲು ಅರ್ಜುನ್ ಮಿಂಚಿಂಗ್

by admin
August 27, 2026
0

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಅವರು ಫೋರ್ಬ್ಸ್ ಇಂಡಿಯಾದ ಪ್ರತಿಷ್ಠಿತ 'ಶೋಸ್ಟಾಪರ್ಸ್ 2026' ಆವೃತ್ತಿಯ ಕವರ್ ಸ್ಟಾರ್ ಆಗಿ ಸ್ಥಾನ ಪಡೆದಿದ್ದಾರೆ....

chikkanna-lakshmiputra-movie-release-date-november-27

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ದಿನಾಂಕ ಪ್ರಕಟ: ನವೆಂಬರ್ 27ಕ್ಕೆ ತೆರೆಗೆ

by admin
August 27, 2026
0

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಉಪಾಧ್ಯಕ್ಷ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ, ಇದೀಗ ಅವರು ನಾಯಕನಾಗಿ ನಟಿಸಿರುವ ಎರಡನೇ ಚಿತ್ರ...

andavapura-atma-scheme-krishi-sakhi-workshop-darshan-puttannaiah

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನ: ಪಾಂಡವಪುರದಲ್ಲಿ ಕೃಷಿ ಪರಿಣತರಿಂದ ತರಬೇತಿ

by admin
August 27, 2026
0

ಮಂಡ್ಯ: ಪಾಂಡವಪುರ ತಾಲ್ಲೂಕಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ (ಕೃಷಿ ಸಖಿಯರು) ಒಟ್ಟು 120 ಮಂದಿಗೆ ‘ಆತ್ಮ’ ಯೋಜನೆಯಡಿ ವಿಶೇಷ ಕಾರ್ಯಾಗಾರ...

dudda-mega-free-health-camp-darshan-puttannaiah

ದುದ್ದದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

by admin
August 27, 2026
0

ಮಂಡ್ಯ: ಜಿಲ್ಲಾಡಳಿತ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್), ಕಿದ್ವಾಯಿ ಸಂಸ್ಥೆ (ಬೆಂಗಳೂರು), ಭಾರತೀಯ ರೆಡ್ ಕ್ರಾಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram