ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಸಚಿನ್ ತೆಂಡುಲ್ಕರ್ ಸೇರಿದಂತೆ ಅನೇಕ ಕ್ರಿಕೆಟ್ ತಾರೆಯರು ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಕೃಷ್ಣಾಷ್ಟಮಿಯ ಶುಭಾಶಯ ಕೋರಿದ್ದಾರೆ.
ಆದ್ರೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ತಿಳಿಸುವ ವೇಳೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಶ್ರೀಕೃಷ್ಣನ ಚಿತ್ರಕ್ಕೆ ಬದಲಾಗಿ ಸುಬ್ರಹ್ಮಣ್ಯ ದೇವರ ಚಿತ್ರವನ್ನು ಟ್ವೀಟಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
https://twitter.com/harbhajan_singh/status/1293045879763398656?s=20
ಬಳಿಕ ಎಚ್ಚೆತ್ತುಕೊಂಡು ಮತ್ತೊಂದು ಟ್ವೀಟ್ ಮಾಡಿದ ಹರ್ಭಜನ್, ದೇವರ ಚಿತ್ರ ಬದಲಾಗಿರಬಹುದು. ಆದರೆ ದೇವರು ಎಲ್ಲ ಒಂದೇ, ಅವರಿಗೆ ಒಂದೇ ಚಿತ್ರ ಇರುವುದಿಲ್ಲ. ದೇವರನ್ನು ನಾವು ನಮ್ಮೊಳಗೇ ಕಾಣಬೇಕು. ಟೀಕೆಗಳು ಬೇಡ, ದೇವರನ್ನು ನೀವು ನಂಬುವುದಾದರೆ ಅವರು ಎಲ್ಲ ಕಡೆ ಕಾಣಿಸುತ್ತಾರೆ ಮತ್ತು ಎಲ್ಲ ರೂಪದಲ್ಲೂ ಇರುತ್ತಾರೆ ಎಂದಿದ್ದಾರೆ.







