ಕೃಷ್ಣ ನಲಿದಾಡಿದ ಪುಣ್ಯ ಭೂಮಿ ಈ ಮಥುರಾ ಬ್ರಾಜ್ ಪ್ರದೇಶ
ವಾಸುದೇವ ಶ್ರೀಕೃಷ್ಣ ಪರಮಾತ್ಮನ ಜನ್ಮಸ್ಥಾನವಾದ ಕ್ರೂರಿ ಕಂಸನ ಕಾರಾಗೃಹ ಮತ್ತು ಅದರ ಸುತ್ತಲಿನ ಪ್ರದೇಶವಾದ ಬ್ರಾಜ್ ಪ್ರದೇಶದಲ್ಲಿ ಅನೇಕ ದೇವಸ್ಥಾನಗಳು ನಿರ್ಮಾಣವಾಗಿತ್ತು. ಈ ನೆಲ ಕೃಷ್ಣ ಭಕ್ತರಿಗೆ ಪುಣ್ಯ ಕ್ಷೇತ್ರ.
ಶ್ರೀ ವಿಷ್ಣುವಿನ ಒಂಬತ್ತನೇ ಅವತಾರವಾದ ಶ್ರೀಕೃಷ್ಣನು ಮಥುರಾದಲ್ಲಿ ಜನಿಸಿದನು. ಪಕ್ಕದ ಬ್ರಾಜ್ ಪ್ರದೇಶದಲ್ಲಿ ಬೆಳೆದನು. ಆದ್ದರಿಂದ, ಇಡೀ ಬ್ರಾಜ್ ಭೂಮಿ ಪ್ರಪಂಚದಾದ್ಯಂತ ಕೃಷ್ಣ ಭಕ್ತರಿಗೆ ಪ್ರಮುಖ ಯಾತ್ರಾಸ್ಥಳವಾಗಿದೆ. ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ, ಮಥುರಾ ಮತ್ತು ವೃಂದಾವನ ಪ್ರದೇಶದ ಸುತ್ತಮುತ್ತಲಿನ ಐದು ಸಾಂಪ್ರದಾಯಿಕ ದೇವಾಲಯಗಳ ಒಂದಿಷ್ಟು ವಿವರ

ಬ್ರಾಜ್ ಭೂಮಿಯಲ್ಲಿರುವ ಕೆಲವು ಪ್ರಮುಖ ದೇವಾಲಯಗಳ ಒಂದಿಷ್ಟು ವಿವರ.
ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯ ಸಂಕೀರ್ಣ:
ದೇವಕಿ ಮತ್ತು ವಾಸುದೇವರ ಮದುವೆ ಆದ ಮೇಲೆ ದೇವಕಿಯ ಅಣ್ಣನಾದ ಮಥುರಾದ ಕ್ರೂರ ಆಡಳಿತಗಾರ ಕಂಸ ತಂಗಿಯ ಮಗನಿಂದ ತನ್ನ ಸಂಹಾರ ಎಂದರಿತು ಕತ್ತಲ ಕಾರಾಗೃಹದಲ್ಲಿ ಅವರನ್ನು ಬಂಧಿಸುತ್ತಾನೆ . ಸಾಲು ಸಾಲು ಏಳು ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ವಧೆ ಮಾಡಿಸಿದ ಕಂಸನ ಸಂಚಾರಕ್ಕಾಗಿ ಎಂಟನೇ ಮಗನಾಗಿ ಶ್ರೀ ಕೃಷ್ಣ ಜನಿಸಿದ ಆ ಪುಣ್ಯ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಇದು ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿರುವ ಮಲ್ಲಾಪುರದ ಭಾಗದಲ್ಲಿದೆ.

ಗೀತಾ ಮಂದಿರ
ವೃಂದಾವನದಲ್ಲಿರುವ ಬಿರ್ಲಾ ದೇವಾಲಯವು ಭಗವದ್ಗೀತೆಗೆ ಸಮರ್ಪಿತವಾಗಿದೆ, ಇದು ಶ್ರೀ ಕೃಷ್ಣನ ಬೋಧನೆಗಳನ್ನು ಒಳಗೊಂಡಿದೆ. ಈ ದೇವಾಲಯವು ಅದರ ಗೋಡೆಗಳ ಮೇಲೆ ಪವಿತ್ರ ಪುಸ್ತಕದ ಎಲ್ಲಾ ಹದಿನೆಂಟು ಅಧ್ಯಾಯಗಳ ಶಾಸನಗಳನ್ನು ಹೊಂದಿದೆ.
ಕೇಶವ ದೇವ ದೇವಾಲಯ
ಕೇಶವ ದೇವೋ ದೇವಾಲಯದಲ್ಲಿರುವ ವಿಗ್ರಹವು ಶ್ರೀ ಕೃಷ್ಣನ ಮೊಮ್ಮಗ ಶ್ರೀ ವಜ್ರನಭ್ ಅವರು ಸ್ಥಾಪಿಸಿದ ಮೂಲ ಶಿಲ್ಪ ಎಂದು ನಂಬಲಾಗಿದೆ. ಆದ್ದರಿಂದ, ಇದು ಬಹಳ ಮಹತ್ವದ್ದಾಗಿದೆ ಮತ್ತು ಪ್ರಮುಖ ಯಾತ್ರಾ ಸ್ಥಳವಾಗಿದೆ.

ಬಂಕೆ ಬಿಹಾರಿ ದೇವಸ್ಥಾನ
ಶ್ರೀ ಕೃಷ್ಣನ ವಿಗ್ರಹವು ತ್ರಿಭಂಗ ಭಂಗಿಯಲ್ಲಿ ಇರುವುದರಿಂದ ಅದನ್ನು ಬಂಕೆ (ಮೂರು ಸ್ಥಳಗಳಲ್ಲಿ ಬಾಗಿದ) ಬಿಹಾರಿ (ಆನಂದಿಸುವವ) ಎಂದು ಕರೆಯಲಾಗುತ್ತದೆ. ಯಮುನಾ ನದಿಯ ದಡದಲ್ಲಿರುವ ವನಪ್ರದೇಶದಲ್ಲಿಆನಂದಿಸಿ ವಿಹರಿಸಿದ ಅವರನ್ನು ಕುಂಜ್ ಬಿಹಾರಿ ಎಂದೂ ಕರೆಯುತ್ತಾರೆ








