ಬೆಂಗಳೂರು : ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಹೀಗಾಗಿ, ಇಂದು ವಿಶ್ವಾದ್ಯಂತ ಧರ್ಮಾತೀತವಾಗಿ, ಪಕ್ಷಾತೀತವಾಗಿ ಎಲ್ಲ ರೀತಿಯ ಜನರೂ ಶುಭಾಶಯ ಕೋರುತ್ತಿದ್ದಾರೆ.
ಅದರಂತೆ ಸದ್ಯ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ, ಟ್ವೀಟ್ ಮಾಡಿದ್ದು ತಮಗೆ ರಾಜಕೀಯ ಚಾಣಾಕ್ಷ್ಯ ಕೃಷ್ಣ ಅಂದ್ರೆ ಇಷ್ಟ ಅಂತಾ ಹೇಳಿದ್ದಾರೆ.
ಟ್ವೀಟ್ ಮಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಶುಭ ಕೋರಿರುವ ಸಿದ್ದರಾಮಯ್ಯ, ನನಗೆ ಬಾಲ ಕೃಷ್ಣ, ದೇವಕಿ-ದ್ರೌಪದಿಯ ಕೃಷ್ಣ, ಕುಚೇಲನ ಕೃಷ್ಣ ಮತ್ತು ರಾಜಕೀಯ ಚಾಣಾಕ್ಷ್ಯ ಕೃಷ್ಣ ಅಂದ್ರೆ ಇಷ್ಟ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ಇಂದು ಕೃಷ್ಣಾಷ್ಟಮಿ. ಜಗತ್ತು ಶೀಘ್ರ ಕೊರೊನಾ ಮುಕ್ತವಾಗಲಿ, ಜನರ ಕಷ್ಟದ ದಿನಗಳು ದೂರವಾಗಿ ಸುಖ ಸಮೃದ್ಧಿ ಸಮಾಜದಲ್ಲಿ ನೆಲೆಸಲಿ. ತಮ್ಮೆಲ್ಲರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಎಂದು ಕೂಡ ಹಾರೈಸಿದ್ದಾರೆ.
ನನಗೆ ಬಾಲ ಕೃಷ್ಣ, ದೇವಕಿ-ದ್ರೌಪದಿಯ ಕೃಷ್ಣ, ಕುಚೇಲನ ಕೃಷ್ಣ ಮತ್ತು ರಾಜಕೀಯ ಚಾಣಾಕ್ಷ್ಯ ಕೃಷ್ಣ ಇಷ್ಟ.
ಇಂದು ಕೃಷ್ಣಾಷ್ಟಮಿ.
ಜಗತ್ತು ಶೀಘ್ರ ಕೊರೊನಾ ಮುಕ್ತವಾಗಲಿ,
ಜನರ ಕಷ್ಟದ ದಿನಗಳು ದೂರವಾಗಿ ಸುಖ ಸಮೃದ್ಧಿ ಸಮಾಜದಲ್ಲಿ ನೆಲೆಸಲಿ.ತಮ್ಮೆಲ್ಲರಿಗೂ
ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.#janmashtami2020 pic.twitter.com/tKAYKnLC33— Siddaramaiah (@siddaramaiah) August 11, 2020








