ಸುಶಾಂತ್ ಸಾವಿನ ಪ್ರಕರಣದಲ್ಲಿ ದಿನೇ ದಿನೇ ಅನುಮಾನಿತರ ಪಟ್ಟಿಗೆ ಹೊಸ ಹೊಸ ಹೆಸರುಗಳು ಸೇರಿಕೊಳ್ತಿದ್ದು, ಇತ್ತೀಚೆಗಷ್ಟೇ ನಟ ಸೂರಜ್ ಪಾಂಚೋಲಿ ಅವರ ಹೆಸರು ಲಿಸ್ಟ್ ಗೆ ಎಂಟ್ರಿಯಾಗಿತ್ತು. ಅಷ್ಟೇ ಅಲ್ಲ ಸುಶಾಂತ್ ಮ್ಯಾನೇಜರ್ ದಿಶಾ ಸಾವಿಗೂ ಸೂರಜ್ ಪಾಂಚೋಲಿ ಅವರಿಗೂ ಸಂಬಂಧ ಕಲ್ಪಿಸಿಲಾಗಿತ್ತು. ಸೂರಜ್ ಪಾಂಚೋಲಿ ವಿರುದ್ಧ ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ಠಾನೆ ಅವರು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ತಮ್ಮನ್ನು ಸುಖಾಸುಮ್ಮನೆ ಈ ಪ್ರಕರಣದಲ್ಲಿ ಎಲೆತರುತ್ತಿದ್ದಾರೆ ಎಂದು ನಟ ಸೂರಜ್ ಪಾಂಚೋಲಿ ಗರಂ ಆಗಿದ್ದಾರೆ.
ಅಷ್ಟೇ ಅಲ್ಲ ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ನಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೋಷಿಯಲ್ ಮಿಡಿಯಾಗಳಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಸುದ್ದಿ ಬಿತ್ತರಿಸುತ್ತಿದ್ದಾರೆ ಎಂದು ತವiಗೆ ಕಿರುಕುಳ ನಿಡುತ್ತಿರುವವರ ವಿರುದ್ಧ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಸೂರಜ್.
ಇನ್ನೂ ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ನನ್ನ ಗೆಳತಿ ಅನುಶ್ರೀ ಗೌರ್ ಜೊತೆಗೆ 2016ರಲ್ಲಿ ತೆಗೆಸಿಕೊಮಡ ಫೋಟೋದ ಸ್ಕ್ರೀನ್ ಶಾಟ್ ಶೇರ್ ಮಾಡಿ ಆಕೆಯನ್ನು ದಿಶಾ ಸಾಲಿಯಾನ್ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದು ಸುಳ್ಳು ಎಂದು ದೂರಿನಲ್ಲಿ ಸೂರಜ್ ಉಲ್ಲೇಖಿಸಿದ್ದಾರೆ. ಅಲ್ಲದೇ ನಟ ಸುಶಾಂತ್ ಹಾಗೂ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಜೊತೆಗೆ ನಾನು ಸಂಪರ್ಕ ಹೊಂದಿರಲಿಲ್ಲ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ನಾಲ್ಕು ವರ್ಷಗಳ ವನವಾಸ ಮುಗಿಸಿ ಮರಳಿದ ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ :ಭುವನೇಶ್ವರ್ ಕುಮಾರ್ ಪುನರಾಗಮನಕ್ಕೆ ಅಜಿತ್ ಅಗರ್ಕರ್ ಅಡ್ಡಗಾಲು ಹಾಕಿದ್ದರಾ? ಆಯ್ಕೆ ಸಮಿತಿಯ ಒಳಗಿನ ಗುಟ್ಟು ರಟ್ಟು?
ಮುಂಬೈ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಕಡೆ ಸಂತಸದ ಸುದ್ದಿ ಸಿಕ್ಕಿದ್ದರೆ, ಮತ್ತೊಂದು ಕಡೆ ಆಯ್ಕೆ ಸಮಿತಿಯ ಒಳಗಿನ ಅಸಲಿ ಆಟ ಈಗ ಬಯಲಾಗಿದೆ. ಮುಂಬರುವ ನ್ಯೂಜಿಲೆಂಡ್...








