ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ. ಒಂದು ಹೆಜ್ಜೆ ಮುಂದೆ ಹೋಗಿ, ಮಾಸ್ಕ್ ಧರಿಸಿ ನಮ್ಮ ಮುಖವನ್ನು ಏಕೆ ಮರೆ ಮಾಡಬೇಕು ಎಂದು ಅವರ ಮುಖದ ಒಂದು ಭಾಗವನ್ನು ಮುದ್ರಿಸಲಾದ ಫೇಸ್ ಮಾಸ್ಕ್ ಧರಿಸಿದ್ದಾರೆ.
ಭೋಪಾಲ್, ಅಗಸ್ಟ್ 12: ಕೊರೋನಾ ಒಂದು ಹೆಜ್ಜೆ ಮುಂದೆ ಹೋಗಿ, ಮಾಸ್ಕ್ ಧರಿಸಿ ನಮ್ಮ ಮುಖವನ್ನು ಏಕೆ ಮರೆ ಮಾಡಬೇಕು ಎಂದು ಅವರ ಮುಖದ ಒಂದು ಭಾಗವನ್ನು ಮುದ್ರಿಸಲಾದ ಫೇಸ್ ಮಾಸ್ಕ್ ಧರಿಸಿದ್ದಾರೆ. ಬಳಿಕ ನಮ್ಮ ಬದುಕಲ್ಲಿ ಬಹಳಷ್ಟು ಬದಲಾವಣೆಗಳಾಗಿದೆ. ಫೇಸ್ ಮಾಸ್ಕ್ ಅಂತಹ ಹೊಸ ಬದಲಾವಣೆಯಲ್ಲಿ ಒಂದು. ಕೊರೋನಾ ಕಾಲಘಟ್ಟದಲ್ಲಿ ಮೂಲಭೂತವಾಗಿ ಮಾಸ್ಕ್ ಎನ್ನುವುದು ನಮ್ಮ ಉಡುಪಿನ ಒಂದು ಭಾಗವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಸರ್ಕಾರಗಳು ಕಡ್ಡಾಯಗೊಳಿಸಿದ್ದರೆ, ಆರೋಗ್ಯ ತಜ್ಞರು ಇದು ಇನ್ನೂ ಕೊರೋನವೈರಸ್ ಸೋಂಕಿನ ವಿರುದ್ಧ ನಮ್ಮ ರಕ್ಷಣೆಗೆ ಅನಿವಾರ್ಯ ಎಂದು ಹೇಳಿದ್ದಾರೆ.
ಮಾಸ್ಕ್ ಗಳು ಕಡ್ಡಾಯವಾಗಿರುವುದರಿಂದ, ಜನರು ವಿನ್ಯಾಸಗಳಲ್ಲಿ ಸೃಜನಶೀಲರಾಗಿದ್ದಾರೆ. ಆದರೆ, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಮಾಸ್ಕ್ ಧರಿಸಿ ನಮ್ಮ ಮುಖವನ್ನು ಏಕೆ ಮರೆ ಮಾಡಬೇಕು ಎಂದು ಅವರ ಮುಖದ ಒಂದು ಭಾಗವನ್ನು ಮುದ್ರಿಸಲಾದ ಫೇಸ್ ಮಾಸ್ಕ್ ಧರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಚಿವರು ಈ ವಿಭಿನ್ನ ಮಾಸ್ಕ್ ಧರಿಸಿರುವ ಫೋಟೋಗಳು ವೈರಲ್ ಆಗಿದೆ. ಕೆಲವರು ರಾಜ್ಯ ಗೃಹ ಸಚಿವರು ಧರಿಸಿರುವ ಮುಖವಾಡವನ್ನು ಮೆಚ್ಚಿ ಇದು ಒಳ್ಳೆಯ ನಡೆ, ಪ್ರತಿಯೊಬ್ಬರೂ ಈ ರೀತಿಯ ಮುಖವಾಡಗಳನ್ನು ಧರಿಸಬೇಕು ಇದರಿಂದ ಮುಖವಾಡವನ್ನು ತೆಗೆಯದೆ ಗುರುತಿಸಬಹುದು ಎಂದು ಹೇಳಿದ್ದರೆ, ಮತ್ತೆ ಕೆಲವರು ನೀ ಕ್ರಮ ಸರಿಯಲ್ಲ, ಇದು ನಿಮ್ಮ ಘನತೆಗೆ ತಕ್ಕದಲ್ಲ ಎಂದು ಹೇಳಿದ್ದಾರೆ.