ಡಿಜೆ ಹಳ್ಳಿ ಗಲಭೆ ವೇಳೆ ನಡೆದ ಗೋಲಿಬಾರ್ ನಲ್ಲಿ ಮೂವರು ಮೃತಪಟ್ಟ ಹಿನ್ನೆಲೆ, ಬೌರಿಂಗ್ ಆಸ್ಪತ್ರೆ ಹಾಗೂ ಶಿವಾಜಿನಗರದ ಸುತ್ತಮುತ್ತ ಪೊಲೀಸ್ ಹೈ ಪ್ರೊಟೆಕ್ಷನ್ ನೀಡಲಾಗಿದೆ. ಬ್ಯಾರಿಕೇಡ್ ಹಾಕಿ ಶಿವಾಜಿನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೋವಿಡ್ ರ್ಯಾಂಡಮ್ ಟೆಸ್ಟ್ ಬಳಿಕ , ಫರನಿಕ್ಸ್ ತಜ್ಞ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳ ರವಾನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೂ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟ್ ನಲ್ಲಿ ಆದೇಶದ ಬಳಿಕ ಮೃತದೇಹಗಳ ಹಸ್ತಾಂತರ ಮಾಡಲಾಗುವುದು. ಹೀಗಾಗಿ ಈ ವೇಳೆ ಯಾವುದೇ ಗಲಭೆ ಉಂಟಾಗದಂತೆ ಸಂಚಾರಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮೃತದೇಹ ಹಸ್ತಾಂತರದ ಬಳಿಕ ಶವಸಂಸ್ಕಾರ ಆಗುವವರೆಗೂ ಪೊಲೀಸರು ಹೈ ಪ್ರೊಟೆಕ್ಷನ್ ನೀಡಲಿದ್ದಾರೆ.
Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ
ಇಷ್ಟಾರ್ಥಗಳು ಸಿದ್ಧಿಯಾಗಿ ಮನೋಇಚ್ಚಾ ಕಾರ್ಯಗಳು ನೆರೆವೆರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಶನಿವಾರ ಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತಂತೆ.. ಆಂಜನೇಯ ಸ್ವಾಮಿ ಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ...








