ಕಾಲಿವುಡ್ ನ ಖ್ಯಾತ ನಟರಾದ ಸೂರ್ಯ ಹಾಗೂ ವಿಜಯ್ ವಿರುದ್ಧ ತಮಿಳು ನಟಿ ಹಾಗೂ ತಮಿಳಿನ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಮೀರಾ ಗಂಭೀರ ಆರೋಪವೊಂದನ್ನು ನಟರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹೌದು ಈ ಇಬ್ಬರೂ ನಟರು ಅತಿ ಹೆಚ್ಚಾಗಿ ನೆಪೋಟಿಸಮ್ ಪ್ರೋತ್ಸಾಹಿಸುತ್ತಾರೆ ಎಂದು ಆರೋಪಿಸಿದ್ರು ಮೀರಾ ಮಿಥುನ್. ‘ಕಾಲಿವುಡ್ ಮಾಫಿಯಾ ಗ್ಯಾಂಗ್’ ಎಂದು ಕರೆದಿದ್ದರು. ಇಬ್ಬರು ನಟರು ತಮಿಳು ಚಿತ್ರಿರಂಗದಲ್ಲಿ ಸ್ವಜನಪಕ್ಷಪಾತವನ್ನು ಪ್ರೋತ್ಸಾಹಿಸುತ್ತಿದ್ದಾರೆ, ತಮಿಳು ಚಿತ್ರರಂಗವನ್ನು ನಿಯಂತ್ರಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದರು.
ಆದರೆ ಇದೀಗ ಮೀರಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಜಿಕ ಜಾಲತಾಣದಲ್ಲಿ ಈ ಕುರಿತು ಪರೋಕ್ಷವಾಗಿ ಕಿಡಿಕಾರಿರುವ ಸೂರ್ಯ “ನನ್ನ ಸಹೋದರ, ಸಹೋದರಿಯರೆ ಸಮಯ ಮತ್ತು ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು, ರಚನಾತ್ಮಕ ವಿಷಯಗಳಿಗೆ ಸಮಯ ಕಳೆಯಬೇಕೆಂದು ನಾನು ಬಯಸುತ್ತೇನೆ. ಲೆಜಂಡರಿ ನಿರ್ದೇಶಕ ಭಾರತಿರಾಜ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದು ಹೇಳಿದ್ದಾರೆ.
ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿಶೇಷ ಸಹಾಯಕ...








