ಕೊರೊನಾ ಮಾಹಮಾರಿಯ ವಿರುದ್ಧ ಹೋರಾಡಿ ಗೆದ್ದಿರುವ ಬಾಹುಬಲಿ ಖ್ಯಾತಿಯ ನಿರ್ದೇಶಕರಾದ ರಾಜಮೌಳಿ ಕುಟುಂಬ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಸೋಂಕು ದೃಢವಾಗಿದ್ದ ಹಿನ್ನೆಲೆ 2 ವಾರಗಳ ಕಾಲ ರಾಜಮೌಳಿ ಪರಿವಾರದವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಇದೀಗ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿರುವ ರಾಜಮೌಳಿ ಕುಟುಂಬಸ್ಥರು ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜಮೌಳಿ ಅವರು ಇದೀಗ ನಾವೆಲ್ಲರೂ ಸಂಪೂರ್ಣವಾಗಿ ಗುಣಮುಖರಾಗಿದ್ದೇವೆ. “2 ವಾರಗಳ ಕ್ವಾರಂಟೈನ್ ಅವಧಿ ಮುಗಿದಿದೆ. ಯಾವುದೇ ರೋಗ ಲಕ್ಷಣಗಳಿಲ್ಲ. ಕೊರೊನಾ ಟೆಸ್ಟ್ ಮಾಡಿಸಿದ್ದು, ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೆ ಪ್ಲಾಸ್ಮ ದಾನಮಾಡಲು ಇನ್ನೂ 3 ವಾರಗಳು ಕಾಯಬೇಕು ಎಂದು ವೈದ್ಯರು ಹೇಳಿದ್ದಾರೆ.” ಆದರೆ ಪ್ಲಾಸ್ಮ ದಾನಕ್ಕೆ ಇನ್ನೂ ಮೂರು ವಾರಗಳು ಕಾಯಬೇಕೆಂದು ಸೂಚಿಸಿರುವುದಾಗಿ ರಾಜಮೌಳಿ ಬರೆದುಕೊಂಡಿದ್ದಾರೆ.
fifaworldcup2026- ಯಮನಿಗೆ ಬೆನ್ನು ತೋರಿಸಿದ್ದ ಮೃತ್ಯುಂಜಯ.. ಫುಟ್‍ಬಾಲ್ ಜಗತ್ತಿನ ಸಾಂಬಾ ಡಾನ್ಸರ್ ನ ಬದುಕಿನ ಯಾನ..!
ಫುಟ್‍ಬಾಲ್ ಜಗತ್ತಿನಲ್ಲಿ ಇತಿಹಾಸವನ್ನ ಬರೆದವರಿದ್ದಾರೆ. ಸಾಮ್ರಾಜ್ಯವನ್ನು ಕಟ್ಟಿದವರಿದ್ದಾರೆ. ಆದ್ರೆ ಸಾವು ಬದುಕಿನ ಆಟದಲ್ಲಿ ಒಂದಲ್ಲ ಎರಡಲ್ಲ.. ನಾಲ್ಕು ಬಾರಿ ಯಮರಾಯನಿಗೆ ಬೆನ್ನು ತೋರಿಸಿ, ಫುಟ್‍ಬಾಲ್ ಮೈದಾನದಲ್ಲಿ ಚರಿತ್ರೆ...








