11 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಆಡುತ್ತಿರುವ ಫವಾದ್ ಅಲಾಮ್
ಸೌತಾಂಪ್ಟನ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಫವಾದ್ ಅಲಾಮ್ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆAಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಫವಾದ್ ಅಲಾಮ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
34ರ ಹರೆಯದ ಫವಾದ್ ಅಲಾಮ್ ಅವರು 11 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. 2009ರ ನಂತರ ಫವಾದ್ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಂದ ಹಾಗೇ ಫವಾದ್ ಆಡುತ್ತಿರುವ ನಾಲ್ಕನೆ ಟೆಸ್ಟ್ ಪಂದ್ಯವಾಗಿದೆ.
ವಿಶ್ವ ಕ್ರಿಕೆಟ್ ನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಕಮ್ ಬ್ಯಾಕ್ ಮಾಡಿರುವ 25ನೇ ಆಟಗಾರನಾದ್ರೆ, ಪಾಕ್ ಪರ ಎರಡನೇ ಆಟಗಾರನಾಗಿದ್ದಾರೆ. ಈ ಹಿಂದೆ ಪಾಕಿಸ್ಥಾನದ ಯೂನಿಸ್ ಅಹಮ್ಮದ್ ಅವರು 17 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನು ಆಡಿದ್ದರು.
ದೇಸಿ ಕ್ರಿಕೆಟ್ ನಲ್ಲಿ ಫವಾದ್ ಅದ್ಭುತ ಪ್ರದರ್ಶನ
ನೀಡಿದ್ದಾರೆ. 111 ದೇಸಿ ಪಂದ್ಯಗಳಲ್ಲಿ ಫವಾದ್ ಅಲಾಮ್ 7965 ರನ್ ದಾಖಲಿಸಿದ್ದಾರೆ. ಇದ್ರಲ್ಲಿ 26 ಶತಕ ಹಾಗೂ 33 ಅರ್ಧಶತಕಗಳಿವೆ.
ಆದ್ರೆ ಪಾಕ್ ತಂಡದಲ್ಲಿ ಸ್ಥಾನ ಸಿಗಲಿಲ್ಲ ಅಂತ ಫವಾದ್ ಯಾವತ್ತೂ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಆದರೆ ಈಗ ಪಾಕ್ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿರುವ ಮಿಸ್ಬಾ ಉಲ್ ಹಕ್ ಫವಾದ್ ಅಲಾಮ್‌ಗೆ ಅವಕಾಶ ನೀಡಿದ್ದಾರೆ.
ಇಂಗ್ಲೆAಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದ್ರೆ ಆರಂಭದಲ್ಲೇ ಪಾಕ್ ತನ್ನ ಮೊದಲ ವಿಕೆಟ್ ಅನ್ನು ಕಳೆದುಕೊಂಡಿದೆ. ಶಾನ್ ಮಸೂದ್ ಒಂದು ರನ್ ಗಳಿಸಿ ಜೇಮ್ಸ್ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.







