ಪೇಸ್ ಬುಕ್ ಪೋಸ್ಟ್ ನಿಂದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ತನಿಖೆಗಾಗಿ 7 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಸಿಸಿಬಿ ಸೇರಿ ನಗರದ ಹಲವು ಪೊಲೀಸರುಳ್ಳ ತಂಡಗಳನ್ನು ರಚಿಸಲಾಗಿದೆ. ಇನ್ನೂ ತನಿಖೆಯ ಮಾನಿಟರಿಂಗ್ ಜವಾಬ್ದಾರಿ ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಅವರ ಹೆಗಲಿಗೆ ಬಿದ್ದಿದೆ.
ಸಂದೀಪ್ ಪಾಟೀಲ್ ಅವರು ತನಿಖೆಯ ಮೇಲುಸ್ತುವಾರಿ ಹಾಗೂ ತನಿಖೆಯ ಆಯಾಮಗಳ ಬಗ್ಗೆ ನಿಗಾ ವಹಿಸಲಿದ್ದಾರೆ. ತನಿಖೆಗೆ ಸಿಸಿಬಿಯಲ್ಲಿ ಇಬ್ಬರು ಡಿಸಿಪಿಗಳಾದ ಕುಲದೀಪ್ ಕುಮಾರ್ ಜೈನ್, ರವಿಕುಮಾರ್ ಅವರನ್ನು ನಿಯೋಜನೆ ಮಾಡಲಾಗಿದೆ. 7 ತಂಡಕ್ಕೂ ಪ್ರತ್ಯೇಕ ಜವಾಬ್ದಾರಿ ವಹಿಸಲಾಗಿದೆ. ಇನ್ನೂ ಈಗಾಗಲೇ ಸಿಸಿಬಿ ಪೊಲೀಸರು ಗಲಭೆ ಹಾಗೂ ಗೋಲಿಬಾರ್ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.








