ADVERTISEMENT
Saturday, February 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಭೂಕುಸಿತಗಳು ಯಾಕಾಗುತ್ತವೇ ಎನ್ನುವುದು ಅರಿವಿಲ್ಲದ ಸರ್ಕಾರ! ಭೂಕುಸಿತ ತಡೆಗೆ ಆಗಬೇಕಾಗಿರುವುದೇನು? ಒಂದು ಸಂಕ್ಷಿಪ್ತ ಪರಿಸರ ರಕ್ಷಣೆಯ ಒಳನೋಟ

admin by admin
August 14, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಭೂಕುಸಿತಗಳು ಯಾಕಾಗುತ್ತವೇ ಎನ್ನುವುದು ಅರಿವಿಲ್ಲದ ಸರ್ಕಾರ! ಭೂಕುಸಿತ ತಡೆಗೆ ಆಗಬೇಕಾಗಿರುವುದೇನು? ಒಂದು ಸಂಕ್ಷಿಪ್ತ ಪರಿಸರ ರಕ್ಷಣೆಯ ಒಳನೋಟ

ಭೂಕುಸಿತ ಆಗದಂತೆ ತಡೆಯುವುದು ಹೇಗೆ ? ಎಂದು ಪ್ರತೀ ವರುಷ ಭೂಕುಸಿತ ಆದಾಗ ಪ್ರಶ್ನೆಗಳು ಹುಟ್ಟುತ್ತವೆ. ಉತ್ತರ ಕೆಳುವಷ್ಟರಲ್ಲಿ ದುರಂತ ಮುಗಿದು ಹೋಗಿರುತ್ತದೆ. ಉತ್ತರದ ಬಗ್ಗೆ ನಮ್ಮ ಜನ ಪ್ರತಿನಿಧಿಗಳು ಆಸಕ್ತಿ ವಹಿಸುವುದಿಲ್ಲ, ಜನರಿಗೂ ಆಸಕ್ತಿ ಇದ್ದಂಗಿಲ್ಲ, ಭೂಕುಸಿತ, ಜಲ ಪ್ರವಾಹ ಆದ ಸಂತ್ರಸ್ಥ ರೇ ಸುಮ್ಮನಿರುತ್ತಾರೆ ಅಂದ ಮೇಲೆ ಉತ್ತರ ಯಾರಿಗೆ ಬೇಕು ? ಪ್ರಶ್ನೆ…ಪ್ರಶ್ನೆ ಆಗಿಯೇ ಉಳಿಯುತ್ತವೆ.

Related posts

india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
KV Prabhakar, the protagonist of the CM Cup badminton tournament..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

February 14, 2026

ಭೂಕುಸಿತ ಆಗದಂತೆ ಒಂದೇ ಪರಿಹಾರ. ಅದೇನೆಂದರೆ ಪಶ್ಚಿಮ ಘಟ್ಟದ ನದೀಮೂಲದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಮಳೆ ನೀರನ್ನು ಇಂಗಿಸಿಕೊಳ್ಳುವ ಹುಲ್ಲುಗಾವಲು ಪ್ರದೇಶವನ್ನು ಮತ್ತು ಮಳೆ ನೀರನ್ನು ಹಿಡಿದಿಟ್ಟು ಕೊಂಡು ಶೇಖರಣೆ ಮಾಡಿ ನದಿಗಳಿಗೆ ವರ್ಷ ಪೂರ್ತಿ ನೀರು ಸರಬರಾಜು ಮಾಡುವ ಶೋಲಾ ಅಡವಿಯನ್ನು ಅದರ ಪಾಡಿಗೆ ಬಿಟ್ಟು ಬಿಡಲಿ, ಅಲ್ಲಿ ಯಾವುದೇ ಮಾನವ ಚಟುವಟಿಕೆಗಳಿಗೆ , ‘ಅಭಿವೃದ್ದಿ’ ಎಂಬ ನೆಪದ ಅಸಂಬದ್ಧ ಯೋಜನೆಗಳಿಗೆ ಅವಕಾಶ ಕೊಡದೇ ಇದ್ದರೆ ಖಂಡಿತಾ ಭೂಕುಸಿತ, ಜಲ ಪ್ರವಾಹ, ಬರಗಾಲ, ಚಂಡ ಮಾರುತ .. ಇಂತಹ ಯಾವುದೇ ಪ್ರಾಕೃತಿಕ ದುರಂತಗಳು ಮಾಯವಾಗಿ ಬಿಡುತ್ತವೆ.

ಪಶ್ಚಿಮ ಘಟ್ಟದ ಮೇಲ್ಮೈ ಪದರದ ಹುಲ್ಲುಗಾವಲು ಮನುಜರ ಶರೀರಕ್ಕೆ ಚರ್ಮ ಹೇಗೆ ರಕ್ಷಣೆಯೊ ಅದೇ ರೀತಿ ಹುಲ್ಲುಗಾವಲು ಪಶ್ಚಿಮ ಘಟ್ಟದ ಗಿರಿ, ಶಿಖರಗಳಿಗೆ ರಕ್ಷಣಾ ಹೊದಿಕೆ. ಮಳೆಗಾಲದಲ್ಲಿ ಈ ಹುಲ್ಲುಗಾವಲಿನ ಮೇಲೆ ಬಿದ್ದ ಮಳೆ ನೀರು ಮೇಲ್ಮೈ ಪದರದಲ್ಲಿ ಜಾರಿ ಕಣಿವೆ, ಕಂದರಗಳ ಕಡೆ ಹೋಗುತ್ತವೆ. ಒಳಮೈ ಪದರದಲ್ಲಿ ಅಂದರೆ ಬೆಟ್ಟಗಳ ಒಳಗೆ ಇರುವ ಜಲ ನಾಡಿಗಳಲ್ಲಿ ಇಳಿದು ಶೋಲಾ ಅಡವಿಯ ಶಿಲಾ ಪದರಗಳ ಒಳಗೆ ಸೇರುತ್ತವೆ. ಇಲ್ಲಿ ಶೇಖರಣೆ ಆದ ನೀರು ಮನೆ ಮೇಲೆ ಇರುವ ಟ್ಯಾಂಕ್ ನಲ್ಲಿ ಶೇಖರಣೆ ಆದ ಹಾಗೆ. ಇಲ್ಲಿ ಶೇಖರಣೆ ಆದ ನೀರು ಮಳೆ ಕಡಿಮೆ ಆಗುತ್ತಿದ್ದಂತೆ ಹಂತ, ಹಂತವಾಗಿ ಅಂದ್ರೆ ಈ ಮಳೆಗಾಲ ಮುಗಿದು ಇನ್ನೊಂದು ಮಳೆಗಾಲ ಆರಂಭ ಆಗುವವರೆಗೆ ಹೊಳೆಗೆ ನೀರು ಸರಬರಾಜು ಮಾಡುತ್ತವೆ. ಈ ಹೊಳೆ ನೀರು ಸಾಗರ ಸಂಗಮ ಆಗಿ ಮತ್ತೆ ಮೋಡ, ಆವಿ ಆಗಿ ಮಳೆಯಾಗಿ ವಾಪಾಸು ಪಶ್ಚಿಮ ಘಟ್ಟ ಸೇರುತ್ತದೆ. ಇಲ್ಲಿ ವ್ಯರ್ಥ ನೀರು ಅಂತ ಯಾವುದೂ ಇಲ್ಲ ಎಲ್ಲಾ ಸಮರ್ಥ ನೀರು. ಇದು ಪಶ್ಚಿಮ ಘಟ್ಟದ ಒಂದು ಸೂಕ್ಷ್ಮ ಜೈವಿಕ ವ್ಯವಸ್ಥೆ ಮತ್ತು ನಿಸರ್ಗ ನಿಯಮ. ಈ ನಿಯಮದ ಮೇಲೆ ಹಕ್ಕು ಸಾಧಿಸಲು ಯಾರಿಗೂ ಅವಕಾಶ ಇಲ್ಲ. ಆದರೆ ಕಳೆದ 15 ವರ್ಷಗಳಿಂದ ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಾಗುತ್ತಾ ನಿಸರ್ಗ ವ್ಯವಸ್ಥೆಯನ್ನು ಕೆಡಿಸುತ್ತಾ ಬಂದಿರುವುದರಿಂದ ಈ ಭೂಕುಸಿತ, ಜಲ ಸ್ಫೋಟ, ಪ್ರವಾಹ, ಬರಗಾಲ …ಇತ್ಯಾದಿ ಸಂಭವಿಸುತ್ತಿವೆ.

ಪಶ್ಚಿಮ ಘಟ್ಟದ ಈ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಒತ್ತುವರಿ, ಅಕ್ರಮ ರೆಸಾರ್ಟ್, ಜಲ ವಿದ್ಯುತ್ ಯೋಜನೆ, ಗಣಿಗಾರಿಕೆ… ಇಂತಹ ಪರಿಸರ ಮಾರಕ ಯೋಚನೆಗಳು ಹೆಚ್ಚಾಗುತ್ತಾ ಬಂದಾಗ ಪ್ರಕೃತಿ ಮಾತೆಯ ರೋದನ ಕೇಳುವವರಿಲ್ಲದೆ ಅದರ ಪ್ರತಿರೋಧ, ಪ್ರತೀಕಾರ, ಪರಿಣಾಮವೇ ಈ ದುರಂತಗಳು.

ನದೀ ಮೂಲ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರತೀ ಚಿಕ್ಕ ತೊರೆ, ಒರತೆ ಕೂಡಾ ತುಂಬಾ ಪ್ರಾಮುಖ್ಯ ವಾದದ್ದು. ಅರಣ್ಯ ದ ಹುಲ್ಲು ಮತ್ತೆ ನೀರು ಇಂಗಿತ ಆಗುವ ಪ್ರದೇಶಗಳಲ್ಲಿ ಕೃತಕ ತೋಡು, ಸಹಜ ನೀರ ಹರಿವಿನ ಬಲಾತ್ಕಾರದ ಬದಲಾವಣೆ, ರಸ್ತೆ, ಕಟ್ಟಡ, ಕಾಂಕ್ರೀಟು, ಮಣ್ಣಿನ ಸವಕಳಿ, ಹುಲ್ಲು, ಮಳೆಕಾಡಿನ ಮೇಲೆ ನಿರಂತರ ಕಾಡ್ಗಿಚ್ಚು, ಎತ್ತಿನ ಹೊಳೆ ಬಲವಂತದ ತಿರುವು ಯೋಜನೆ, ಎತ್ತಿನ ಹೊಳೆ ಯೋಜನೆಯ ವ್ಯಾಪ್ತಿ ಪ್ರದೇಶದಲ್ಲಿ ಬೆಟ್ಟ ಕೊರೆದು, ಡೈನಮೈಟ್ ಸಿಡಿಸಿ ಛಿದ್ರ ಗೊಳಿಸಿದ್ದು ಇವೆಲ್ಲಾ ಕಾರಣದಿಂದ ಹುಲ್ಲುಗಾವಲು ಒಳಗೆ ಇರುವ ಜಲನಾಡಿಗಳಲ್ಲಿ ಸಹಜ ನೀರು ಹರಿಯದೇ ಅದರ ಧಾರಣಾ ಶಕ್ತಿಗಿಂತ ಹೆಚ್ಚು ನೀರು ಜೊತೆಗೆ ಕಲ್ಲು, ಮಣ್ಣು, ಕೆಸರು ರಾಡಿ ತುಂಬಿದಾಗ ಜಲ ನಾಡಿಗಳು ಸ್ಫೋಟ ಗೊಳ್ಳುತ್ತವೇ. ಆಗ ಬೆಟ್ಟ ಒಡೆದು ನೀರಿನ ಅಲೆ ಸುನಾಮಿ ಅಲೆಯಂತೆ ಶೋಲಾ ಅರಣ್ಯದ ಮೇಲೆ ಧುಮುಕಿ ದಾಗ ಅಡವಿಯ ಬ್ರಹತ್ ಮರ, ಗಿಡ, ಕಲ್ಲು, ಮಣ್ಣು ತನ್ನ ತೀರ್ವ ವೇಗ ದಲ್ಲೀ ಕೆಳಗಡೆ ಸುರಿದಾಗ ಭೂಕುಸಿತ ಉಂಟಾಗುತ್ತದೆ.

ಇಂತಹ ದುರಂತಗಳು ಆದಾಗ ಭೂಗರ್ಭ ಇಲಾಖೆಯಿಂದ ಒಂದು ಸಮರ್ಪಕ ಅಧ್ಯಯನ ವರದಿ ಆಗಿ ಸಮೀಕ್ಷೆ, ತನಿಖೆ ಆಗಿ ಮುಂದೆ ಈ ರೀತಿ ಆಗದಂತೆ ಕಾನೂನು ಕ್ರಮ ಕೈ ಗೊಳ್ಳಬೇಕು. ಆರಂಭದಲ್ಲಿ ಮಡಿಕೇರಿ ಭೂಕುಸಿತ ಆದಾಗ ‘ ಇನ್ನು ಮುಂದೆ ಅಡವಿ ಒಳಗೆ ಇರುವ ಪ್ರದೇಶದಲ್ಲಿ ಭೂ ಪರಿವರ್ತನೆ ಆಗಲು ರೀತಿ, ನಿಯಮಾವಳಿ ಬದಲಾವಣೆ ಅಂತ ಸರಕಾರದ ಆರ್ಡರ್ ಆಗಿತ್ತು ಆದರೆ ಕಾರ್ಯರೂಪಕ್ಕೆ ಬರಲೇ ಇಲ್ಲ. ಮತ್ತೆ ಮತ್ತೆ ಭೂಕುಸಿತ, ಪ್ರವಾಹ, ದುರಂತ ಈ ರೀತಿ ಪದೇ ಪದೇ ಭೂಕುಸಿತ ಆದರೆ ಅಲ್ಲಿ ಉಗಮ ಆಗುವ ಹೊಳೆಗಳು ಕ್ರಮೇಣ ಬರಿದಾಗಿ ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು.

ಅಂದರೆ ನೀರಿನ ಕ್ಯಾಚ್ ಮೆಂಟ್ ಪ್ರದೇಶ ಕಡಿಮೆ ಆಗುತ್ತಾ ಮಳೆ ನೀರನ್ನು ಹಿಡಿದಿಟ್ಟು ಕೊಳ್ಳುವ ಇಳುವರಿ ಪ್ರದೇಶ ಬರಿದಾಗಿ ಹೊಳೆ ಬದಕಲಾಗುತ್ತವೆ. ದುರಂತ ಆಗದಂತೆ ಯೆಚ್ಚರ ವಹಿಸಬೇಕಾದ ಜನ ಪ್ರತಿನಿಧಿಗಳು ಮತ್ತು ಜನತೆ ಮೌನವಾಗಿ ಇದ್ದಾರೆ ಎಂದರೆ ಇದಕೆ ಅಂತ್ಯ ವಿಲ್ಲ. ಜನಪ್ರತಿನಿಧಿ ಗಳಿಗೆ ಒಳಗೊಳಗೇ ಇಂತಹ ದುರಂತಗಳು ಕುಷಿಯೇ. ಯಾಕೆಂದರೆ ಪರಿಹಾರ ನೆಪದಲ್ಲಿ ಒಂದಷ್ಟು ಕೋಟಿ ಲೂಟಿ… !

ಪಶ್ಚಿಮಘಟ್ಟ ಅಂದರೆ ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ. ಪಶ್ಚಿಮ ಘಟ್ಟದಿಂದ ನಾವೆಷ್ಟು ಉಪಯುಕ್ತತೆಯನ್ನು ಪಡೆದು ಕೊಂಡಿದ್ದೇವೆ. ಪಶ್ಚಿಮ ಘಟ್ಟ ನಾಶ ಆದರೆ ನಾವೆಷ್ಟು ತೊಂದರೆಗೆ ಒಳಗಾಗಬಹುದು ಎಂಬುದನ್ನು ಅರಿತು ಕೊಂಡು ನಮ್ಮ ಮಕ್ಕಳಿಗೂ ಇದರ ಜ್ಞಾನ ಹರಿಸಿಕೊಂಡು ಬದುಕು ಕಟ್ಟಿ ಕೊಂಡರೆ ಭವಿಷ್ಯದಲ್ಲಿ ಸ್ವಲ್ಪ ನೆಮ್ಮದಿಯ ದಿನಗಳನ್ನು ಕಳೆಯಬಹುದು. ಇನ್ನೂ ನಾವು ಮೌನವಾಗಿಯೇ ಇಂತಹ ದುರಂತಗಳನ್ನು ನೋಡುತ್ತಾ ಕುಳಿತುಕೊಂಡರೆ ಭವಿಷ್ಯದಲ್ಲಿ ಇನ್ನಷ್ಟು ಆಗಲಿರುವ ಪ್ರಾಕೃತಿಕ ದುರಂತಗಳಿಗೆ ನಾವೇ ಆಹ್ವಾನ ನೀಡಿ ಆಮಂತ್ರಿಸಿದಂತೆ ಆಗಬಹುದು. ಯೋಚಿಸಬೇಕಾದದ್ದು ನಾವು, ನೀವು, ಎಲ್ಲರೂ…

ಲೇಖನ:- ದಿನೇಶ್ ಹೊಳ್ಳ.
ಖ್ಯಾತ ಪರಿಸರ ಹೋರಾಟಗಾರರು

Tags: #Environmental Protection#landslides#north indiafloodForestGovernmentindiakarnatakasouth india
ShareTweetSendShare
Join us on:

Related Posts

india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

by admin
February 14, 2026
0

ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ.., ಐಸಿಸಿ ಬಂಡವಾಳ ಹೂಡಿರುವ, ಬಿಸಿಸಿಐ ನಿರ್ದೇಶನದ, ಪಿಸಿಬಿ ಚಿತ್ರಕಥೆ ಬರೆದಿರುವ, ಶ್ರೀಲಂಕಾ ನಿರ್ಮಾಣದ ಆಧುನಿಕ ಮಹಾಭಾರತದ ಐಸಿಸಿ ಟಿ-20ಯ ಮಹಾ ನಾಟಕ "ದಾಯಾದಿಗಳ...

KV Prabhakar, the protagonist of the CM Cup badminton tournament..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

by admin
February 14, 2026
0

ಕೆ.ವಿ. ಪ್ರಭಾಕರ್, ಪತ್ರಿಕಾ ರಂಗ, ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ 13 ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಕೆ.ವಿ. ಪ್ರಭಾಕರ್, ಒಂದು ಲೆಕ್ಕದಲ್ಲಿ...

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

by Shwetha
February 14, 2026
0

ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ₹3.6 ಲಕ್ಷ ಕೋಟಿ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ನೀಡಿದೆ. ಇದರ...

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ  ಹೈಕೋರ್ಟ್

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ ಹೈಕೋರ್ಟ್

by Shwetha
February 14, 2026
0

ಲಕ್ನೋ: ಜಾತಿ ಎನ್ನುವುದು ವ್ಯಕ್ತಿಯೊಬ್ಬನ ಹುಟ್ಟಿನಿಂದ ನಿರ್ಧಾರವಾಗುತ್ತದೆಯೇ ವಿನಃ ಆತ ಮಾಡಿಕೊಳ್ಳುವ ವಿವಾಹ ಅಥವಾ ಬದಲಾಯಿಸುವ ಧರ್ಮದಿಂದಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ...

ಅಜ್ಜಯ್ಯನ ಶಕ್ತಿಯಿಂದಲೇ ಸರ್ಕಾರ ಸುಭದ್ರ, ಮುಂದೇನಾಗುತ್ತೆ ಅನ್ನೋದನ್ನ ಕಾದು ನೋಡಿ: ಡಿಕೆ ಶಿವಕುಮಾರ್

ಅಜ್ಜಯ್ಯನ ಶಕ್ತಿಯಿಂದಲೇ ಸರ್ಕಾರ ಸುಭದ್ರ, ಮುಂದೇನಾಗುತ್ತೆ ಅನ್ನೋದನ್ನ ಕಾದು ನೋಡಿ: ಡಿಕೆ ಶಿವಕುಮಾರ್

by Shwetha
February 14, 2026
0

ತುಮಕೂರು: ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೊಮ್ಮೆ ತಮ್ಮ ಅಚಲ ದೈವಭಕ್ತಿಯನ್ನು ಪ್ರದರ್ಶಿಸಿದ್ದು, ರಾಜ್ಯ ಸರ್ಕಾರದ ಅಸ್ತಿತ್ವ ಮತ್ತು ಭವಿಷ್ಯದ ಕುರಿತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram