ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿನ್ನೆಲೆ ಗಾಯಕರಾದ 74 ವರ್ಷದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆಗಸ್ಟ್ 5 ರಂದು ಸೋಂಕು ದೃಢಪಟ್ಟ ಹಿನ್ನೆಲೆ ಅವರನ್ನುಆಸ್ಪತ್ರೆಗೆ ದಾಖಲಿಸಲಾಯಿತು. ಸೋಂಕು ದೃಢಪಟ್ಟಿದ್ದ ಬಗ್ಗೆ ಸ್ವತಃ ಎಸ್ ಪಿಬಿ ಅವರೇ ಫೇಸ್ ಬುಕ್ ನಲ್ಲಿ ಸ್ಪಷ್ಟಪಡಿಸಿದ್ದರು.16ಕ್ಕೂ ಅಧಿಕ ಭಾಷೆಯಲ್ಲಿ ಹಾಡಿರುವ ಎಸ್ ಪಿ ಬಿ ಅವರು 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಈ ಹಿಂದೆ ತಮಗೆ ಸೊಂಕು ದೃಢಪಟ್ಟಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದ ಎಸ್ ಪಿ ಬಿ ನಾನು ಸ್ವಯಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದಾಗಿ ಕುಟುಂಬದಿಂದ ದೂರು ಇರುವುದಾಗಿ ತಿಳಿಸದ್ದರು. ಅಲ್ಲದೇ ನನ್ನ ಆರೋಗ್ಯದಲ್ಲು ಸುದಾರಣೆಯಾಗಿದೆ ಎಂದಿದ್ದರು. ಇದೀಗ ಅವರ ಸ್ಥಿತಿ ತೀವ್ರ ಗಂಭೀರವಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.








