ADVERTISEMENT
Wednesday, May 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ವಿಶ್ವದಲ್ಲೇ ಅತಿದೊಡ್ಡ ಶ್ರೀಮಂತ ಮುಖೇಶ್​ ಅಂಬಾನಿ ಮತ್ತು ಮಧ್ಯಮ ವರ್ಗದ ನೀತಾ ಅಂಬಾನಿಯ ಲವ್ ಕಹಾನಿ…!

admin by admin
August 15, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ವಿಶ್ವದಲ್ಲೇ ಅತಿದೊಡ್ಡ ಶ್ರೀಮಂತ ಮುಖೇಶ್​ ಅಂಬಾನಿ ಮತ್ತು ಮಧ್ಯಮ ವರ್ಗದ ನೀತಾ ಅಂಬಾನಿಯವರ ಮದುವೆಯ ಕಥೆ ಕುತೂಹಲಕಾರಿಯಾಗಿದೆ. ‌ಮಧ್ಯಮ ವರ್ಗದ ನೀತಾ, ಅಂಬಾನಿಯ ಸಂಪತ್ತು ಮತ್ತು ಸ್ಥಾನಮಾನಕ್ಕಾಗಿ ಅವರನ್ನು ಎಂದಿಗೂ ಮದುವೆಯಾಗಲಿಲ್ಲ. 

ಮುಂಬೈ, ಅಗಸ್ಟ್ 15: ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ಶ್ರೀಮಂತ, ರಿಲಾಯನ್ಸ್​ ಇಂಡಸ್ಟ್ರೀಸ್​ ಚೇರಮನ್​ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಅವರು ಮಧ್ಯಮ ವರ್ಗದ ಕುಟುಂಬದ ನೀತಾ ಅಂಬಾನಿಯನ್ನು ಹೇಗೆ ವಿವಾಹವಾದರು ಎಂಬುದು ನಿಮಗೆ ತಿಳಿದಿದೆಯೇ? ಮುಖೇಶ್​ ಅಂಬಾನಿ ಮತ್ತು ನೀತಾ ಅಂಬಾನಿಯವರ ಮದುವೆಯ ಕಥೆಯೂ ಕುತೂಹಲಕಾರಿಯಾಗಿದೆ.

Related posts

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

May 20, 2026
ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದೇಶದ ಬೆಲೆ ಏರಿಕೆಗೆ ಮೋದಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ

May 20, 2026

ನೀತಾ ಅಂಬಾನಿ ಶಾಲಾ ಶಿಕ್ಷಕಿಯಾಗಿದ್ದರು, 800 ರೂ ಅವರ ಮಾಸಿಕ ವೇತನವಾಗಿತ್ತು. ನೀತಾ ಅಂಬಾನಿ ಭರತನಾಟ್ಯದಲ್ಲಿ ಪರಿಣಿತರಾಗಿದ್ದರು ಮತ್ತು ಇದು ಮುಖೇಶ್ ಅಂಬಾನಿಯೊಂದಿಗೆ ಅವರ ವಿವಾಹ ನಡೆಯಲು ಕಾರಣವಾಯಿತು. ಮಾಧ್ಯಮ ವರದಿಯ ಪ್ರಕಾರ, ಒಮ್ಮೆ ನೀತಾ ಬಿರ್ಲಾ ಕುಟುಂಬದ ಕಾರ್ಯಕ್ರಮದಲ್ಲಿ ಭರತನಾಟ್ಯ ನರ್ತಕಿಯಾಗಿ ಪ್ರದರ್ಶನ ನೀಡಲು ಬಂದಿದ್ದರು.
ಬಿರ್ಲಾ ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಧೀರೂಭಾಯಿ ಅಂಬಾನಿ ಮತ್ತು ಅವರ ಪತ್ನಿ ಕೋಕಿಲಾಬೆನ್ ಕೂಡ ಸೇರಿದ್ದರು. ನೀತಾ ಅವರ ನೃತ್ಯ ಅಂಬಾನಿಯವರ ಹೃದಯವನ್ನು ‌ಕದ್ದಿತು.‌ ಅವರು ನೀತಾರನ್ನು ತಮ್ಮ ಮನೆಗೆ ಸೊಸೆಯನ್ನಾಗಿ ತರಲು ನಿರ್ಧರಿಸಿದರು. ಈ ಸಂಬಂಧಕ್ಕೆ ನೀತಾ ಸಿದ್ಧವಾಗಿಲ್ಲದಿದ್ದರೂ ಅಂಬಾನಿ ಕುಟುಂಬವು ನೀತಾ ಅವರನ್ನು ಒಪ್ಪಿಕೊಂಡು ಮುಖೇಶ್ ಅಂಬಾನಿ ಜೊತೆ ವಿವಾಹ ಮಾಡಲು ನಿರ್ಧರಿಸಿದ್ದರು.


ಮಧ್ಯಮ ವರ್ಗದ ನೀತಾ, ಅಂಬಾನಿಯ ಸಂಪತ್ತು ಮತ್ತು ಸ್ಥಾನಮಾನಕ್ಕಾಗಿ ಅವರನ್ನು ಎಂದಿಗೂ ಮದುವೆಯಾಗಲಿಲ್ಲ. ನೀತಾ ಮದುವೆಯ ನಂತರವೂ ಶಾಲೆಯಲ್ಲಿ ಕಲಿಸಲು ಅವಕಾಶ ನೀಡಿದರೆ ಮಾತ್ರ ಮದುವೆಗೆ ಒಪ್ಪುವುದಾಗಿ ಷರತ್ತು ಇಟ್ಟಿದ್ದರಂತೆ. ಅಂಬಾನಿ ಕುಟುಂಬ ಇದಕ್ಕೆ ಒಪ್ಪಿಗೆ ನೀಡಿದ ನಂತರ ನೀತಾ ಮದುವೆಗೆ ಒಪ್ಪಿಕೊಂಡರು ಮತ್ತು ಶ್ರೀಮಂತ ಕುಟುಂಬದ ಸೊಸೆಯಾದ ನಂತರವೂ ನೀತಾ ಖಾಸಗಿ ಶಾಲೆಯಲ್ಲಿ ಟೀಚರ್‌ ಆಗಿ ಸೇವೆ ಸಲ್ಲಿಸಿದ್ದರು. ‌
ಸಾಂಪ್ರದಾಯ‌ ಪ್ರಕಾರ ಧೀರೂಭಾಯಿ ಅಂಬಾನಿ ನೀತಾ ಮತ್ತು ಅವರ ತಂದೆಯ ಬಳಿ ಮದುವೆ ಪ್ರಸ್ತಾಪವನಿಟ್ಟರು.
ಕುಟುಂಬದ ಅಂಗೀಕಾರದ ನಂತರ, ನೀತಾ ಮತ್ತು ಮುಖೇಶರ ಪ್ರಣಯ ಪ್ರಾರಂಭವಾಯಿತು. ಇವರಿಬ್ಬರಿಗೂ ಆ ದಿನಗಳಲ್ಲಿ ಹೆಚ್ಚಿನ ಸಮಯ ಕಳೆಯಲು ಅವರ ಬಿಡುವಿಲ್ಲದ ಕೆಲಸ ಅಡ್ಡಿಯಾಗಿತ್ತು.


ಮುಖೇಶ್ ನಿರತ, ವೃತ್ತಿಪರ ವ್ಯಕ್ತಿಯಾಗಿದ್ದರು ಮತ್ತು ರಾತ್ರಿ 11 ಗಂಟೆಯ ನಂತರ ಮಾತ್ರ ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದರು. ನೀತಾ ಸ್ವತಃ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಕಾರಣ ಇವರಿಬ್ಬರಿಗೂ ಒಬ್ಬರಿಗೊಬ್ಬರು ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ‌
ಆದಾಗ್ಯೂ, ಇವರಿಬ್ಬರು ತಮ್ಮ ಬಿಡುವಿಲ್ಲದ ಸಮಯದಲ್ಲೂ ಜೊತೆಯಾಗಿ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದರು.‌
ಮುಖೇಶ್ ಅವರ ನಮ್ರತೆ ನೀತಾರನ್ನು ಆಶ್ಚರ್ಯಗೊಳಿಸಿತಂತೆ.‌ ನೀತಾ ಒಮ್ಮೆ ಮರ್ಸಿಡಿಸ್ ಕಾರಿನಲ್ಲಿ ಮುಖೇಶ್ ಜೊತೆಗೆ ಪ್ರಯಾಣಿಸುತ್ತಿದ್ದಾಗ ಕಾರನ್ನು ನಿಲ್ಲಿಸಲು ‌ಹೇಳಿ ಮುಖೇಶ್ ರನ್ನು ಕೇಳಿದರಂತೆ. ನೀವು ನಿಜವಾಗಿಯೂ ನನ್ನ ಪ್ರೀತಿಸುವುದಾದರೆ ನನ್ನಂತೆ ಬಸ್‌ನಲ್ಲಿ ಪ್ರಯಾಣಿಸಬೇಕು ಎಂದು. ‌ಅದಕ್ಕೆ ಕೂಡಲೇ ಒಪ್ಪಿದ ಮುಖೇಶ್ ಬಸ್‌ನಲ್ಲಿ ನೀತಾ ಜೊತೆಗೆ ಮುಂದಿನ ಸೀಟಿನಲ್ಲಿ ‌ಕುಳಿತು ಜುಹು ಬೀಚ್‌ಗೆ ಹೋದರಂತೆ. ಇದರಿಂದ ನೀತಾಗೆ ಮುಖೇಶ್ ಮೇಲಿನ ಪ್ರೀತಿ ಮತ್ತಷ್ಟು ಬಲವಾಯಿತಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ನೀತಾ ಬಹಿರಂಗಪಡಿಸಿದ್ದಾರೆ.


1985 ರಲ್ಲಿ ಇವರಿಬ್ಬರು ವಿವಾಹವಾದರು ಮತ್ತು ಇವರಿಗೆ ಅನಂತ್, ಆಕಾಶ್ ಮತ್ತು ಇಶಾ ಎಂಬ ಮೂವರು ಮಕ್ಕಳಿದ್ದಾರೆ. ಸಮಾನತೆ, ಬೆಂಬಲ, ಪ್ರೀತಿ ಮತ್ತು ಕಾಳಜಿಯ ಸರಿಯಾದ ಸಮತೋಲನದೊಂದಿಗೆ, ಇಬ್ಬರೂ ತಮ್ಮ ಕನಸುಗಳನ್ನು ಬೆನ್ನಟ್ಟುತ್ತಾ ಸಂತೋಷದ ಮತ್ತು ಯಶಸ್ವಿ ಸಂಬಂಧದಲ್ಲಿದ್ದಾರೆ.

Tags: Love KahaniManaging DirectorMukesh Ambanineeta ambaniNita AmbaniReliance Industries Chairmanthe fourth-wealthiestthe richest man in the world
ShareTweetSendShare
Join us on:

Related Posts

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

by Shwetha
May 20, 2026
0

ಡಿಕೆ ಶಿವಕುಮಾರ್ ಅವರು ತುಮಕೂರನ್ನು 2ನೇ ಬೆಂಗಳೂರು ಆಗಿ ಅಭಿವೃದ್ಧಿಪಡಿಸುವ ಆಲೋಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ತುಮಕೂರಿನಲ್ಲಿ ಆಯೋಜಿಸಿದ್ದ...

ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದೇಶದ ಬೆಲೆ ಏರಿಕೆಗೆ ಮೋದಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ

by Shwetha
May 20, 2026
0

ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ನೇರ ಕಾರಣ ಎಂದು...

ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್

ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್

by Shwetha
May 20, 2026
0

ರಾಜ್ಯದ ಜನಸಾಮಾನ್ಯರಿಗೆ ಮತ್ತು ಬಡ ಕುಟುಂಬಗಳಿಗೆ ಕರ್ನಾಟಕ ಸರ್ಕಾರವು ಮಹತ್ವದ ಕೊಡುಗೆಯೊಂದನ್ನು ನೀಡಿದೆ. ಇನ್ನು ಮುಂದೆ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಕೇವಲ ಅಕ್ಕಿ, ಬೇಳೆ...

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ:ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ:ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು

by Shwetha
May 20, 2026
0

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಗುಹಾಲಯದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವ ವಿಖ್ಯಾತ ಬಾದಾಮಿ ಗುಹೆಗಳಲ್ಲಿ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ...

ವಿದೇಶಿ ಮಾಧ್ಯಮಗಳ ಮುಂದೆ ಮೋದಿ ಸೈಲೆಂಟ್: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಹುವಾ ಮೊಯಿತ್ರಾ ವ್ಯಂಗ್ಯ

ವಿದೇಶಿ ಮಾಧ್ಯಮಗಳ ಮುಂದೆ ಮೋದಿ ಸೈಲೆಂಟ್: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಹುವಾ ಮೊಯಿತ್ರಾ ವ್ಯಂಗ್ಯ

by Shwetha
May 20, 2026
0

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಭಾರತದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ ಭೇಟಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram