ರೆಡ್ ಫೋರ್ಟ್ ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಬಳಿಕ ದೇಶದ ಅಭಿವೃದ್ಧಿ ಕುರಿತಾಗಿ ಮಾತನಾಡಿರುವ ಮೋದಿ ಅವರು ಪ್ರಧಾನ ಮಂತ್ರಿ ಜಲಜೀವನ್ ಮಿಷನ್ ತನ್ನ ಗುರಿ ಸಾಧಿಸಿದೆ. ಇಂದು ಕೃಷಿ ಕ್ಷೇತ್ರ ಆಧುನೀಕರಣ ಆಗುತ್ತಿದೆ. ಹಲವೆಡೆ ಸೋಲಾರ್ ಘಟಕಗಳನ್ನು ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಶುದ್ಧ ನೀರು ದೊರೆಯುತ್ತದೆ. ಕಾಡಿನಲ್ಲಿ ದೂರ ದೂರ ವಾಸಿಸುವವರಿಗೂ ಇದರ ಸೌಲಭ್ಯ ಲಭ್ಯವಾಗಿದೆ. ಶುದ್ಧ ನೀರು ಸಿಗುತ್ತಿರುವುದರಿಂದ ರೋಗಗಳು ಕಡಿಮೆಯಾಗುತ್ತವೆ. ನಗರಗಳಿಗೆ ವಲಸೆ ಬರುವವರಿಗೆ ವಸತಿ ಯೋಜನೆ ಕಲ್ಪಿಸಲಾಗಿದೆ. ವಸತಿ ಯೋಜನೆಯ ಮೂಲಕ ಮನೆ ಕಟ್ಟಿಕೊಳ್ಳಬೇಕೆಂಬ ಮಧ್ಯಮ ವರ್ಗದ ಜನರ ಕನಸು ನನಸಾಗುತ್ತಿದೆ ಎಂದಿದ್ದಾರೆ.








