ವಿಸ್ತಾರವಾದದಲ್ಲಿ ನಂಬಿಕೆ ಇಟ್ಟವರು ಸಹ ಎರಡು ಯುದ್ಧಗಳಲ್ಲಿ ಹಿನ್ನೆಡೆ ಕಂಡಿದ್ದಾರೆ. ವಿಸ್ತಾರವಾದಕ್ಕೆ ಸವಾಲಾಗಿದ್ದೇ ಭಾರತ ದೇಶ. ವಿಸ್ತಾರವಾದದಲ್ಲಿ ನಂಬಿಕೆ ಇಟ್ಟವರು ಎಂದಿಗೂ ಉನ್ನತಿ ಕಾಣಲು ಸಾಧ್ಯವಿಲ್ಲ ಎಂದು ಸದಾ ನರಿ ಬುದ್ದಿ ಪ್ರದರ್ಶಿಸುವ ಚೀನಾವನ್ನು ಪರೋಕ್ಷವಾಗಿ ಪ್ರದಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ.
ರೆಡ್ ಫೋರ್ಟ್ ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ ಅವರು ಡಿಜಿಟಲ್ ಭಾರತದ ಜನರಲ್ಲಿ ಅದ್ಭುತವನ್ನು ಸೃಷ್ಟಿಸಿದೆ. ಭೀಮ್, ಯುಪಿಐ ಆಯಪ್ಗಳು ಮೂರು ಲಕ್ಷ ಕೋಟಿ ವಹಿವಾಟು ನಡೆಸಿವೆ. ಡಿಜಿಟಲ್ ಇಂಡಿಯಾ ಜತೆ ಗ್ರಾಮ ಪಂಚಾಯಿತಿಗಳ ಜೋಡಣೆ ಅನಿವಾರ್ಯ. ಹೀಗಾಗಿ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ನೆಟ್ ವ್ಯವಸ್ಥೆ ಸಿಗಲಿದೆ. ಈಗಾಗಲೇ ಹಲವು ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ನೆಟ್ ವ್ಯವಸ್ಥೆ ದೊರೆತಿದೆ ಎಂದು ತಿಳಿಸಿದರು.








